AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಾನೂ ಒಬ್ಬ ಅಪ್ಪ, ಅಣ್ಣ… ಹೆದರಬೇಡಿ, ನನ್ನ ಆಟೋದಲ್ಲಿ ನೀವು ಸೇಫ್: ಆಟೋ ಚಾಲಕನ ಸೀಟಿನ ಹಿಂಬದಿ ಬರೆದ ಸಾಲುಗಳು ವೈರಲ್

ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸೇಫ್ಟಿ ಅನ್ನೋದೇ ಇಲ್ಲ. ಹೀಗಾಗಿ ಯಾರನ್ನು ನಂಬುವುದು, ಬಿಡುವುದು ತಿಳಿಯಲ್ಲ. ಇದೆಲ್ಲದರ ನಡುವೆ ಆಟೋದಲ್ಲಿ ಬರೆದ ಅದ್ಭುತ ಸಾಲುಗಳು ವೈರಲ್ ಆಗಿದೆ. ಈ ಆಟೋ ಚಾಲಕನಿಗೆ ಹೆಣ್ಣು ಮಕ್ಕಳ ಮೇಲಿರುವ ಗೌರವವನ್ನು ಎತ್ತಿ ತೋರಿಸುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನಾನೂ ಒಬ್ಬ ಅಪ್ಪ, ಅಣ್ಣ... ಹೆದರಬೇಡಿ, ನನ್ನ ಆಟೋದಲ್ಲಿ ನೀವು ಸೇಫ್: ಆಟೋ ಚಾಲಕನ ಸೀಟಿನ ಹಿಂಬದಿ ಬರೆದ ಸಾಲುಗಳು ವೈರಲ್
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Apr 17, 2026 | 11:35 AM

Share

ಮುಂಬೈ, ಏಪ್ರಿಲ್ 17: ಕಾಲ ತುಂಬಾನೇ ಕೆಟ್ಟಿದೆ. ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ. ರಾತ್ರಿ ಬಿಡಿ ಹಗಲಿನಲ್ಲಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟ. ಹೀಗಾಗಿ ಎಷ್ಟೋ ಹೆಣ್ಣು ಮಕ್ಕಳು ರಾತ್ರಿ ಬಿಡಿ, ಹಗಲಿನಲ್ಲಿ ಓಡಾಡಲು ಭಯ ಪಡ್ತಾರೆ. ಅದಲ್ಲದೇ, ಬಸ್, ಕ್ಯಾಬ್, ಆಟೋದಲ್ಲಿ ಪ್ರಯಾಣಿಸುವ ವೇಳೆ ಮಹಿಳೆಯರಿಗೆ ಅಹಿತಕರ ಅನುಭವವಾಗಿರುತ್ತದೆ. ಇದಕ್ಕೆ ವ್ಯಕತಿರಿಕ್ತವಾಗಿ ಆಟೋದಲ್ಲಿ ಬರೆದ ಸಾಲುಗಳು. ಮುಂಬೈ ಆಟೋ ಡ್ರೈವರ್‌ರೊಬ್ಬರು (Mumbai auto driver) ತಮ್ಮ ಸೀಟಿನ ಹಿಂಭಾಗದಲ್ಲಿ ನಿಮ್ಮ ಸುರಕ್ಷತೆ ನನಗೆ ಮುಖ್ಯ, ಯಾವುದೇ ಭಯ ಬೇಡ, ಆರಾಮವಾಗಿ ಕುಳಿತುಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಈ ಸಾಲುಗಳು ಹೆಣ್ಣು ಮಕ್ಕಳಿಗೆ ಧೈರ್ಯ ತುಂಬುವಂತಿದೆ. ಈ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಈ ಸಾಲುಗಳನ್ನು ಸೆರೆ ಹಿಡಿದು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಉನ್ನತಿ ದೇವಲಿಯಾ (Unnati Devaliya) ಎಂಬ ಯುವತಿ ತಾನು ಪ್ರಯಾಣಿಸುತ್ತಿದ್ದ ಆಟೋದಲ್ಲಿ ಕಂಡ ಸಾಲುಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿರುವುದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಎಲ್ಲಾ ಪುರುಷರೂ ಅಪಾಯಕಾರಿಗಳಲ್ಲ, ಕೆಲವರು ಸುರಕ್ಷಿತ ಜಾಗವನ್ನು ಸೃಷ್ಟಿಸುತ್ತಾರೆ ಎಂಬುದನ್ನು ಅರಿತುಕೊಂಡ ಕ್ಷಣವದು. ಇಂತಹ ಸಣ್ಣ ಕಾಳಜಿಯೂ ಇಂದಿನ ಕಾಲದಲ್ಲಿ ದೊಡ್ಡ ಐಷಾರಾಮಿ ಎನಿಸುತ್ತದೆ ಎಂದು ಶೀರ್ಷಿಕೆ ನೀಡಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಆಟೋ ಚಾಲಕನ ಸೀಟಿನ ಹಿಂಭಾಗದಲ್ಲಿ, ನಾನೂ ಒಬ್ಬ ತಂದೆ ಮತ್ತು ಸಹೋದರ. ನಿಮ್ಮ ಸುರಕ್ಷತೆ ನನಗೆ ಮುಖ್ಯ. ಯಾವುದೇ ಭಯ ಬೇಡ, ಆರಾಮವಾಗಿ ಆಟೋದಲ್ಲಿ ಕುಳಿತುಕೊಳ್ಳಿ ಎಂದು ಬರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ: ಮನಸ್ಸಿದ್ದರೆ ಪ್ರೀತಿ ಮಾಡು, ಬಾಡಿಗೆ ಇದ್ದರೆ ಕಾಲ್ ಮಾಡು; ವೈರಲ್ ಆಯ್ತು ಆಟೋ ಹಿಂಬದಿ ಬರೆದ ಸಾಲು

ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಳ್ಳೆಯ ಮನಸ್ಸಿನ ವ್ಯಕ್ತಿ ಎಂದರೆ, ಮತ್ತೊಬ್ಬರು, ಈ ಸಾಲುಗಳನ್ನು ನೋಡಿ ನನಗೆ ಖುಷಿಯಾಯಿತು. ಎಲ್ಲರೂ ಇವರ ಹಾಗೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಇನ್ನೊಬ್ಬರು, ಇದು ಭಾರತದ ಕನಸು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us