ದೆಹಲಿಯ ಈ ಛಾಯ್​​ವಾಲಾ ನಿಜಕ್ಕೂ ಕೋಟ್ಯಾಧಿಪತಿ.. ಹೆಂಗೆಲ್ಲಾ ಟೀ ಮಾಡುತ್ತಾನೆ ಗೊತ್ತಾ ಈತ? ವೀಡಿಯೋ ನೋಡಿ

Delhi Crorepati Chai Wala: ಅರ್ಧ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿದ ಇಬ್ಬರು ಪುರುಷರು ಚಹಾ ಮಾಡಲು ಎಲ್ಲಾ ಸಲಕರಣೆಗಳೊಂದಿಗೆ ಗಾಡಿಯನ್ನು ಸಾಗಿಸುತ್ತಿದ್ದಾರೆ. ನಂತರ ರಸ್ತೆಬದಿ ಒಂದುಕಡೆ ನಿಧಾನವಾಗಿ ಗಾಡಿಯಿಂದ ಎಲ್ಲಾ ಸಾಮಾನುಗಳನ್ನು ಇಳಿಸಿ ಅಂಗಡಿಯನ್ನು ಜೋಡಿಸಲು ಪ್ರಾರಂಭಿಸಿದರು. ಇದರ ನಂತರ, ಒಬ್ಬ ವ್ಯಕ್ತಿ ತಡಮಾಡದೆ ದೊಡ್ಡ ಪಾತ್ರೆಯಲ್ಲಿ ಚಹಾ ಮಾಡಲು ಪ್ರಾರಂಭಿಸಿದನು. ಕ್ರಮೇಣ ಜನರು ಅಂಗಡಿಯ ಬಳಿ ಜಮಾಯಿಸಲು ಪ್ರಾರಂಭಿಸಿದರು. ವಿಶೇಷವೆಂದರೆ

ದೆಹಲಿಯ ಈ ಛಾಯ್​​ವಾಲಾ ನಿಜಕ್ಕೂ ಕೋಟ್ಯಾಧಿಪತಿ.. ಹೆಂಗೆಲ್ಲಾ ಟೀ ಮಾಡುತ್ತಾನೆ ಗೊತ್ತಾ ಈತ? ವೀಡಿಯೋ ನೋಡಿ
ಈ ಛಾಯ್ ವಾಲಾ ನಿಜವಾಗಿಯೂ ಕೋಟ್ಯಾಧಿಪತಿ.. ಹೆಂಗೆಲ್ಲಾ ಟೀ ಮಾಡ್ತಾನೆ ಗೊತ್ತಾ
Follow us
ಸಾಧು ಶ್ರೀನಾಥ್​
|

Updated on: May 08, 2024 | 11:36 AM

ನಿಮ್ಮಲ್ಲಿ ಕಠಿಣ ಪರಿಶ್ರಮ, ಛಲ ಮತ್ತು ಸ್ವಯಂಕೃಷಿ ಮನೋಭಾವ ಇದ್ದರೆ ಅಲ್ಲಿ ನಿಮ್ಮ ಸಾಧನೆಗೆ ಯಾವುದೇ ಅಭಾವ ಕಾಣಬರುವುದಿಲ್ಲ. ನೀವು ಸಣ್ಣದ್ದೇ ಆಗಲಿ ಅಥವಾ ಯಾವುದೇ ದೊಡ್ಡ ಕೆಲಸವನ್ನಾಗಲಿ ಮಾಡಬಹುದು. ತರಕಾರಿ, ಟೀ Tea, ಪಾನಿ ಪುರಿ ಹೀಗೆ ಯಾವುದೇ ಕೆಲಸ ಮಾಡಿಯೂ ಹಣ ಸಂಪಾದಿಸಬಹುದು. ಮೇಲಾಗಿ ತಾವು ಮಾಡುವ ಕೆಲಸದಲ್ಲಿ ದೈವತ್ವವನ್ನು ಕಂಡು ಕಾಯಕವೇ ಕೈಲಾಸ ಎಂದು ಗೌರವದಿಂದ ಕೆಲಸ ಮಾಡಬೇಕು ಅಷ್ಟೇ. ತಮ್ಮ ಕೆಲಸವನ್ನು ಸಮರ್ಪಣಾ ಮನೋಭಾವದಿಂದ ಮಾಡಿ ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಗಳಿಸುವ ಯುವ ಜನತೆ ಬಗ್ಗೆ ಆಗಾಗ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಈಗಂತೂ ಟೀ ಮಾಡಿ ಮಾರುವ (Chai Wala) ಮೂಲಕ ವಿಶ್ವವಿಖ್ಯಾತಿ ಪಡೆದ ಯುವಕನೊಬ್ಬನ ಯಶಸ್ಸಿನ ಕಥೆ ನೆಟ್ ನಲ್ಲಿ ವೈರಲ್ ಆಗಿದೆ ( Viral Video).

ರಾಷ್ಟ್ರ ರಾಜಧಾನಿ ದೆಹಲಿಯ ಚಾಯ್‌ವಾಲಾ ಡಾಲಿ, ಒಂದು ಕಾಲದಲ್ಲಿ ಕೆಲವರಿಗಷ್ಟೇ ಪರಿಚಿತನಾಗಿದ್ದ. ಆದರೆ ಇಂದು ಜಗತ್ಪ್ರಸಿದ್ಧಿ ಪಡೆದಿರುವ ಇವರು ಚಹಾ ಸಂಪಾದನೆಯಿಂದ ವಿದೇಶ ಪ್ರವಾಸವನ್ನೂ ಮಾಡುತ್ತಿದ್ದಾರೆ. ಪ್ರಸ್ತುತ, ಅಂತಹ ಮತ್ತೊಬ್ಬ ಛಾಯ್​ ಮಾರಾಟಗಾರನ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆತ ತನ್ನನ್ನು ಮಿಲಿಯನೇರ್ ಎಂದೂ ಹೇಳಿಕೊಳ್ಳುತ್ತಾನೆ.

ಅರ್ಧ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿದ ಇಬ್ಬರು ಪುರುಷರು ಚಹಾ ಮಾಡಲು ಎಲ್ಲಾ ಸಲಕರಣೆಗಳೊಂದಿಗೆ ಗಾಡಿಯನ್ನು ಸಾಗಿಸುತ್ತಿದ್ದಾರೆ. ನಂತರ ರಸ್ತೆಬದಿ ಒಂದುಕಡೆ ನಿಧಾನವಾಗಿ ಗಾಡಿಯಿಂದ ಎಲ್ಲಾ ಸಾಮಾನುಗಳನ್ನು ಇಳಿಸಿ ಅಂಗಡಿಯನ್ನು ಜೋಡಿಸಲು ಪ್ರಾರಂಭಿಸಿದರು. ಇದರ ನಂತರ, ಒಬ್ಬ ವ್ಯಕ್ತಿ ತಡಮಾಡದೆ ದೊಡ್ಡ ಪಾತ್ರೆಯಲ್ಲಿ ಚಹಾ ಮಾಡಲು ಪ್ರಾರಂಭಿಸಿದನು. ಕ್ರಮೇಣ ಜನರು ಅಂಗಡಿಯ ಬಳಿ ಜಮಾಯಿಸಲು ಪ್ರಾರಂಭಿಸಿದರು. ವಿಶೇಷವೆಂದರೆ ಆತ ವಿವಿಧ ಮಸಾಲೆಗಳೊಂದಿಗೆ ಚಹಾವನ್ನು ತಯಾರಿಸುತ್ತಾನೆ. ಬಹುಶಃ ಅದಕ್ಕಾಗಿಯೇ ಜನರು ಆತನ ಬಳಿಗೆ ಬರುತ್ತಾರೆ. ಈ ವ್ಯಕ್ತಿ ದೆಹಲಿಯ ಕೋಟ್ಯಾಧಿಪತಿ ಸುಧಾಮಾ ಟೀ ಮಾರುವವ.. ಅವನು ತುಂಬಾ ವಿಶೇಷವಾದ ಚಹಾವನ್ನು ತಯಾರಿಸುತ್ತಾನೆ. ಅದು ಅದ್ಭುತ ರುಚಿಯನ್ನು ನೀಡುತ್ತದೆ.

ಛಾಯ್‌ವಾಲಾನ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ಫೋರ್‌ಫುಡ್007 ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಇಲ್ಲಿಯವರೆಗೆ 4.7 ಮಿಲಿಯನ್ ಅಂದರೆ 47 ಲಕ್ಷ ಬಾರಿ ವೀಕ್ಷಿಸಲಾಗಿದೆ. ಜೊತೆಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇನ್ನು ಥರಹೇವಾರಿ ಕಾಮೆಂಟ್‌ಗಳನ್ನು ಸಹ ಮಾಡಲಾಗಿದೆ.

Also Read: ಅಯೋಧ್ಯೆಯಲ್ಲಿ ಭಕ್ತರ ಹಣೆಗೆ ತಿಲಕವಿಡುತ್ತಾ ಈ ಬಾಲಕ ಗಳಿಸುತ್ತಿರುವುದು ಎಷ್ಟು ಗೊತ್ತಾ? ವಿಡಿಯೋ ನೋಡಿ

ಈ ಛಾಯ್‌ವಾಲಾ ದಿನಕ್ಕೆ 20-30 ಸಾವಿರ ರೂ ಸಂಪಾದನೆ ಮಾಡುತ್ತಿರಬಹುದು ಎಂದು ಒಬ್ಬ ಬಳಕೆದಾರರು ಲೆಕ್ಕಾಚಾರದಿಂದ ಮಾತನಾಡಿದ್ದರೆ, ಮತ್ತೊಬ್ಬರು ಇನ್ನು ಮುಂದೆ ನಾನೂ ಟೀ ಮಾರುತ್ತೇನೆ.. ಆಗ ನಾನೂ ಫೇಮಸ್ ಆಗುತ್ತೇನೆ’ ಎಂದು ಬರೆದಿದ್ದಾರೆ. ‘ಇಷ್ಟು ದುಡಿದ ನಂತರವೂ ಈ ಜನರು ಏಕೆ ಸ್ವಚ್ಛವಾಗಿರುವುದಿಲ್ಲ? ಇಷ್ಟೆಲ್ಲಾ ಅಶುಚಿತ್ವವಿದೆಯಲ್ಲವಾ!? ಎಂದು ಕೆಲವು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈ ಹುಡುಗ ಟೀ ಮಾರುವ ಮೂಲಕ ಕೋಟ್ಯಾಧಿಪತಿಯಾಗಿದ್ದಾನೆ ಎಂದರೆ ನಂಬಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ