Optical Illusion: ನೀವು ಜಾಣರೇ, ಈ ಲಿವಿಂಗ್ ರೂಮ್‌ನಲ್ಲಿರುವ ಚಿಟ್ಟೆಯನ್ನು ಗುರುತಿಸಬಲ್ಲಿರಾ

ನೀವು ಬುದ್ಧಿವಂತರೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಇದೊಂದು ಒಳ್ಳೆಯ ಸಮಯ. ಇದೀಗ ವೈರಲ್ ಆಗಿರುವ ಒಗಟಿನ ಚಿತ್ರ ತುಂಬಾನೇ ಟ್ರಿಕ್ಕಿಯಾಗಿದೆ. ಈ ಇಲ್ಯೂಷನ್ ಚಿತ್ರದಲ್ಲಿರುವ ಚಿಟ್ಟೆಯನ್ನು ಪತ್ತೆ ಹಚ್ಚುವ ಸವಾಲು ನೀಡಲಾಗಿದೆ. ಕಣ್ಣು ಅಗಲಿಸಿ ಇದಕ್ಕೆ ಸರಿಯಾದ ಉತ್ತರ ಕಂಡು ಹಿಡಿಯಲು ಸಾಧ್ಯವೇ ನೋಡಿ.

Optical Illusion: ನೀವು ಜಾಣರೇ, ಈ ಲಿವಿಂಗ್ ರೂಮ್‌ನಲ್ಲಿರುವ ಚಿಟ್ಟೆಯನ್ನು ಗುರುತಿಸಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: the-sun.com

Updated on: Jul 02, 2026 | 4:00 PM

ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರಗಳು ಇದೀಗ ಟ್ರೆಂಡಿಂಗ್ ನಲ್ಲಿದೆ. ಇತ್ತೀಚೆಗಿನ ದಿನಗಳಲ್ಲಿ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ವೈರಲ್​ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರವೊಂದು ವೈರಲ್‌ ಆಗಿದೆ. ನೀವು ಈ ಲಿವಿಂಗ್ ರೂಮ್ ನಲ್ಲಿರುವ ಚಿಟ್ಟೆಯನ್ನು ಹುಡುಕಬೇಕು. 5 ಸೆಕೆಂಡುಗಳೊಳಗೆ ಬಣ್ಣದ ಚಿಟ್ಟೆಯನ್ನು ಕಂಡು ಹಿಡಿಯಲು ಸಾಧ್ಯವೇ.

ಈ ಭ್ರಮೆಯ ಚಿತ್ರದಲ್ಲಿ ನಿಮಗೇನು ಕಾಣಿಸಿತು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಲಿವಿಂಗ್ ರೂಮ್ ನೋಡಬಹುದು. ಇಲ್ಲಿ ವೃದ್ಧ ವ್ಯಕ್ತಿಯೊಬ್ಬ ಕೆಲಸ ಮಾಡುತ್ತಾ ಕುಳಿತಿದ್ದಾನೆ. ಈ ವಯಸ್ಸಾದ ವ್ಯಕ್ತಿಯ ಪಕ್ಕ ಸಾಕು ನಾಯಿಮರಿ ಕುಳಿತುಕೊಂಡಿದ್ದು, ನೀವು ಇಲ್ಲಿ ಅಡಗಿ ಕುಳಿತಿರುವ  ಚಿಟ್ಟೆಯನ್ನು ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನಿಮಗೆ ಇರುವ ಸಮಯವಕಾಶ 5 ಸೆಕೆಂಡುಗಳು ಮಾತ್ರ. ನೀವು ಈ ಸವಾಲನ್ನು ಸ್ವೀಕರಿಸಿದ್ದೀರಿ ಎಂದು ಭಾವಿಸುತ್ತೇವೆ.

ಇದನ್ನೂ ಓದಿ: ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್; ಈ ಹರಿದ ಅಂಗಿಯಲ್ಲಿ ಎಷ್ಟು ರಂಧ್ರಗಳಿವೆ ಎಂದು ಹೇಳಬಲ್ಲಿರಾ?

ಚಿಟ್ಟೆಯನ್ನು ಕಂಡು ಹಿಡಿಯಲು ಸಾಧ್ಯವಾಯಿತೇ?

ಒಗಟುಗಳನ್ನು ಬಿಡಿಸುವಲ್ಲಿ ಅನುಭವಿಗಳಾಗಿದ್ದರೂ ಈ ಟ್ರಿಕ್ಕಿ ಚಿತ್ರ ನೋಡಿ ಕ್ಷಣಾರ್ಧದಲ್ಲಿ ಉತ್ತರ ಕಂಡು ಕೊಳ್ಳುತ್ತಾರೆ. ಈ ಲಿವಿಂಗ್ ರೂಮ್ ನಲ್ಲಿರುವ ಬಣ್ಣದ ಚಿಟ್ಟೆ ಕಣ್ಣಿಗೆ ಬಿದ್ದಿತೇ. ಉತ್ತರ ಕಂಡು ಕೊಳ್ಳಲು ಸಾಧ್ಯವಾಗಿದ್ದರೆ ನಿಮಗೆ ಅಭಿನಂದನೆಗಳು. ನಾಯಿ ಮರಿ ಮುಂದೆ ಇರುವ ಬುಟ್ಟಿಯಲ್ಲಿ ಚಿಟ್ಟೆಯಿದೆ. ಈ ಕೆಳಗಿನ ಚಿತ್ರದಲ್ಲಿ ಚಿಟ್ಟೆ ಎಲ್ಲಿದೆ ಎಂದು ಗುರುತಿಸಿದ್ದೇವೆ.

Optical Illusion Answer

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us