Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಕಂಡುಹಿಡಿಯುವಿರಾ

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಈ ಎರಡು ಚಿತ್ರಗಳು ನೋಡಲು ಒಂದೇ ರೀತಿ ಇದ್ದು, ಇವುಗಳ ನಡುವಿನ ವ್ಯತ್ಯಾಸಗಳನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಿ ನಿಮ್ಮ ವೀಕ್ಷಣಾ ಸಾಮರ್ಥ್ಯ ಪರೀಕ್ಷಿಸಿಕೊಳ್ಳಿ.

Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಕಂಡುಹಿಡಿಯುವಿರಾ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Dec 22, 2025 | 11:00 AM

ಬಿಡುವಿನ ಸಮಯದಲ್ಲಿ ಹೆಚ್ಚಿನವರು ಒಗಟಿನ ಆಟಗಳತ್ತ ಕಣ್ಣಾಯಿಸುತ್ತಾರೆ. ಈ ಆಪ್ಟಿಕಲ್‌ ಇಲ್ಯೂಷನ್‌ನಂತಹ (optical illusion) ಒಗಟಿನ ಆಟಗಳು ನೋಡುವುದಕ್ಕೆ ಸುಲಭವಾಗಿ ಕಂಡರೂ ಟ್ರಿಕ್ಕಿಯಾಗಿರುತ್ತದೆ. ಇದೀಗ ವೈರಲ್ ಆಗಿರುವ ಈ ಚಿತ್ರಗಳು ಅಂತಹದ್ದೇ ಆಗಿದೆ. ಈ ಎರಡು ಚಿತ್ರಗಳಲ್ಲಿರುವ ಮೂರು ವ್ಯತ್ಯಾಸಗಳನ್ನು ಐವತ್ತು ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು. ಈ ಟ್ರಿಕ್ಕಿ ಒಗಟಿನ ಆಟವನ್ನು ಬಿಡಿಸಲು ನಿಮಗೆ ಸಾಧ್ಯವೇ.

ಈ ಚಿತ್ರ ನೋಡಿದಾಗ ಏನು ಕಾಣಿಸುತ್ತದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇಲ್ಯೂಷನ್ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ ಸರಳವಾಗಿ ಕಾಣುತ್ತದೆ. ಈ ಎರಡು ಚಿತ್ರಗಳಲ್ಲಿ ಒಂದೊಂದು ಕುರಿ ನಿಂತು ಕೊಂಡಿದೆ. ಇದರಲ್ಲಿ ಮೂರು ವ್ಯತ್ಯಾಸಗಳು ಅಡಗಿವೆ. ಈ ವ್ಯತ್ಯಾಸಗಳನ್ನು ಪತ್ತೆ ಹಚ್ಚಲು ಕೆಲವೇ ಐವತ್ತು ಸೆಕೆಂಡುಗಳು ಮಾತ್ರ ಇವೆ. ನಿರ್ದಿಷ್ಟ ಸಮಯದೊಳಗೆ ಈ ಒಗಟು ಬಿಡಿಸಿ ಸೈ ಎನಿಸಿಕೊಳ್ಳಿ.

ಇದನ್ನೂ ಓದಿ:ನದಿ ದಡದಲ್ಲಿ ಅಡಗಿರುವ ನಾಯಿಮರಿಯನ್ನು ಹುಡುಕಬಲ್ಲಿರಾ

ಮೂರು ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಯಿತೇ?

ಈ ಎರಡು ಚಿತ್ರಗಳತ್ತ ಎಷ್ಟೇ ಕಣ್ಣು ಹಾಯಿಸಿದರೂ ಮೂರು ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲವೇ. ನೂರರಲ್ಲಿ ಹತ್ತು ಜನರಿಗೆ ಮಾತ್ರ ಇಂತಹ ಒಗಟನ್ನು ಬಿಡಿಸಲು ಸಾಧ್ಯ. ವ್ಯತ್ಯಾಸಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದಲ್ಲಿ ಹೆಚ್ಚು ಚಿಂತಿಸಬೇಡಿ. ನಾವೇ ನಿಮಗೆ ಈ ಕೆಳಗಿನ ಚಿತ್ರದಲ್ಲಿ ಆ ವ್ಯತ್ಯಾಸಗಳನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us