Optical Illusion: ಈ ಚಿತ್ರದಲ್ಲಿ o ಅಕ್ಷರಗಳ ನಡುವೆ ಇರುವ ಸೊನ್ನೆಯನ್ನು ಗುರುತಿಸಬಲ್ಲಿರಾ

ಒಗಟಿನ ಚಿತ್ರಗಳನ್ನು ಬಿಡಿಸುವುದು ಖುಷಿಕೊಟ್ಟರೂ ಕೆಲವೊಮ್ಮೆ ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ. ಎಷ್ಟೇ ಯೋಚನೆ ಮಾಡಿದ್ರೂ ಉತ್ತರ ಹೊಳೆಯುವುದೇ ಇಲ್ಲ. ಇದೀಗ ಈ ಇಲ್ಯೂಷನ್ ಚಿತ್ರದಲ್ಲಿ o ಅಕ್ಷರಗಳ ನಡುವೆ ಅಡಗಿರುವ ಸೊನ್ನೆಯನ್ನು ಕಂಡು ಹಿಡಿಯಬೇಕು. ಈ ಟ್ರಿಕ್ಕಿ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

Optical Illusion: ಈ ಚಿತ್ರದಲ್ಲಿ o ಅಕ್ಷರಗಳ ನಡುವೆ ಇರುವ ಸೊನ್ನೆಯನ್ನು ಗುರುತಿಸಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌
Image Credit source: Tv9 Telugu

Updated on: May 24, 2026 | 11:16 AM

ಆಪ್ಟಿಕಲ್‌ ಇಲ್ಯೂಷನ್‌ (optical illusion) ಅಥವಾ ಒಗಟಿನ ಆಟಗಳು ಎಲ್ಲರ ಗಮನ ಸೆಳೆಯುತ್ತಿರುತ್ತವೆ. ಇದು ನಿಮ್ಮ ಮೆದುಳಿಗೆ ವ್ಯಾಯಾಮ ನೀಡುವುದು ಮಾತ್ರವಲ್ಲ, ಬುದ್ಧಿವಂತಿಕೆಗೆ ಸವಾಲಾಗಿದೆ. ಈ ಇಲ್ಯೂಷನ್ ಚಿತ್ರವನ್ನು ನೋಡುವಾಗ ಸುಲಭವಾಗಿ ಕಂಡರೂ ಒಗಟು ಬಿಡಿಸುವುದು ಹೇಳುವಷ್ಟು ಸುಲಭವಲ್ಲ. ಇದೀಗ ವೈರಲ್ ಆಗಿರುವ ಒಗಟಿನ ಚಿತ್ರದಲ್ಲಿ o ಅಕ್ಷರಗಳ ನಡುವೆ ಅಡಗಿರುವ ಸೊನ್ನೆಯನ್ನು ಗುರುತಿಸಬೇಕು. ಈ ಒಗಟು ಬಿಡಿಸಲು ನಿಮಗೆ ಇರುವ ಸಮಯಾವಕಾಶ 10 ಸೆಕೆಂಡುಗಳು ಮಾತ್ರ ಎಂಬುದು ತಲೆಯಲ್ಲಿರಲಿ.

ಈ ಚಿತ್ರದಲ್ಲಿ ಏನಿದೆ ಎಂದು ನೋಡಿ

ಮೆದುಳಿನ ಕಸರತ್ತು ಆಟಗಳಲ್ಲಿ ಇದು ಒಂದು. ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಸೊನ್ನೆಗಳು ಕಾಣಿಸುತ್ತದೆ. ಆದರೆ ಇದು ಸೊನ್ನೆಗಳಲ್ಲ, o ಅಕ್ಷರಗಳು. ಇವುಗಳ ನಡುವೆ ಸೊನ್ನೆ ಸಂಖ್ಯೆಯೂ ಇದೆ. ಈ ಶೂನ್ಯ ಸಂಖ್ಯೆಯನ್ನು ನೀವು 10 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ನೀವು ಈ ಸವಾಲಿಗೆ ಸಿದ್ಧರಿದ್ದರೆ, ನಿಮ್ಮ ಟೈಮ್ ಈಗ ಶುರುವಾಗುತ್ತದೆ.

ಇದನ್ನೂ ಓದಿ: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿರುವ ವೃತ್ತಗಳನ್ನು ಗುರುತಿಸಬಲ್ಲಿರಾ

ನಿಮಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಯಿತೇ?

ಈ ಚಿತ್ರ ನೋಡಿದಾಗ ನಿಮ್ಮ ಕಾಣಿಸುವುದೆಲ್ಲವೂ ಸೊನ್ನೆಗಳು ಎಂದು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಅವೆಲ್ಲವೂ ‘O’ ಅಕ್ಷರಗಳು. ಇಲ್ಲಿ ಶೂನ್ಯ (0) ಸಂಖ್ಯೆಯಿದ್ದು, ನೀವು ಉತ್ತರ ಗುರುತಿಸಲು ಸಾಧ್ಯವಾದರೆ ನಿಮಗೆ ಅಭಿನಂದನೆಗಳು. ನೀವು ತುಂಬಾ ಬುದ್ಧಿವಂತರು ಎನ್ನುವುದು ಖಚಿತವಾಯಿತು. ಉತ್ತರ ಸಿಗದಿದ್ದಕ್ಕೆ ಹೆಚ್ಚು ಚಿಂತಿಸಬೇಡಿ. ಕೆಳಗಿನ ಫೋಟೋದಲ್ಲಿ ನಿಮಗಾಗಿ ಉತ್ತರವನ್ನು ಗುರುತಿಸಿದ್ದೇವೆ. ಶೂನ್ಯ ಸಂಖ್ಯೆ ನಿಮ್ಮ ಕಾಣಿಸಿತು ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us