
Animals : ಪ್ರತೀ ದಿನ ಈ ಆಪ್ಟಿಕಲ್ ಇಲ್ಲ್ಯೂಷನ್ ಹುಟ್ಟುಹಾಕುವ ಸವಾಲುಗಳನ್ನು ನೀವಷ್ಟೇ ಪರಿಹರಿಸಲು ಪ್ರಯತ್ನಿಸುತ್ತಿರುತ್ತೀರಿ. ಯಾಕೆ ಪ್ರಾಣಿಗಳೂ ಇದರಲ್ಲಿ ಪಾಲ್ಗೊಳ್ಳಬಾರದಾ? ಖಂಡಿತ! ನಾಯಿಗಳಿಗೆ ಮನೆ ಕಾಯ್ದು ಕಾಯ್ದು ಬೇಸರವಾಗಿರತ್ತೆ. ಬೆಕ್ಕುಗಳಿಗೆ ಮನೆಯಲ್ಲಿ ಮಲಗಿ ಮಲಗಿ ಮಬ್ಬು ಹಿಡಿದಿರುತ್ತದೆ. ಅವುಗಳಿಗೂ ಸ್ವಲ್ಪ ಮನೋರಂಜನೆ ಬೇಕಲ್ಲವೆ? ಹಾಗಾಗಿ ನಿಮ್ಮ ಬದಲಿಗೆ ನಿಮ್ಮ ಮನೆಯ ನಾಯಿಬೆಕ್ಕುಗಳಿಗೆ (Cats and Dogs) ಈ ವಿಡಿಯೋ ಸಮರ್ಪಣೆ.
ಈ ವಿಡಿಯೋ ಗಮನಿಸಿದಿರೆ? ನಾಯಿಗಳು ಭ್ರಮೆಗೆ ಬಿದ್ದು ಆ ಚಿತ್ರವನ್ನೇ ಹಾರಿ ಹೋಗಿಬಿಟ್ಟವು. ಆದರೆ ಜಾಣ ಬೆಕ್ಕು ಮೆಲ್ಲಗೆ ಆ ಚಿತ್ರವನ್ನು ಸ್ಪರ್ಶಿಸುತ್ತ, ಪಾದವನ್ನೂರುತ್ತ ಯೋಚಿಸುತ್ತ ಅದೊಂದು ಭಾವಿಯಲ್ಲ ಅದೊಂದು ಚಿತ್ರ ಅಥವಾ ಮ್ಯಾಟ್ ಎಂದು ಖಾತ್ರಿ ಪಡಿಸಿಕೊಂಡು ವಿರಮಿಸುವುದನ್ನು ಮುಂದುವರಿಸಿದೆ. ನಿದ್ರೆ ಬಂದರೆ ಅಲ್ಲಿಯೇ ಮಲಗಲೂಬಹುದು! ಅಂತೂ ಬೆಕ್ಕನ್ನು ಭ್ರಮೆಗೆ ಕೆಡವಲಾಗುವುದಿಲ್ಲ!
ಇದನ್ನೂ ಓದಿ : Viral: ಬೀದಿನಾಯಿಗಳಿಗೆ ‘ಆಧಾರ್’; ಮುಂಬೈನ ಶ್ವಾನಪ್ರಿಯ ಯುವಕನ ಸಂಶೋಧನೆ
ನಾಯಿಗಳಾದರೆ ಈ ಸವಾಲೂ ಬೇಡ ಇದಕ್ಕೆ ಉತ್ತರ ಕಂಡುಕೊಳ್ಳುವುದೂ ಬೇಡ ಎಂದು ಜಿಗಿದು ತಮ್ಮ ಪಾಡಿಗೆ ತಾವು ಸುತ್ತುವುದಕ್ಕೆ ಹೋದವೇನೋ. ಬೆಕ್ಕು ಮಾತ್ರ ಚಾಣಾಕ್ಷತೆಯಿಂದ, ಗಂಭಿರವಾಗಿ ತನಗೆ ಬೇಕಾದಂತೆ ತನ್ನ ಮಿತಿಯಲ್ಲಿ ಎದುರಿಗಿರುವುದನ್ನು ವಾಸ್ತವದಲ್ಲಿ ನೋಡಿತು.
ಇದನ್ನೂ ಓದಿ : Viral: ಬಾಡಿಗೆದಾರರಿಗೆ 1 ಕಿಲೋ ಕ್ಯಾಬೇಜ್ ಉಪ್ಪಿನಕಾಯಿ ತಯಾರಿಸಿ ಸ್ವಾಗತಿಸಿದ ಬೆಂಗಳೂರಿನ ಮಹಿಳೆ
ನೆಟ್ಟಿಗರು ಈ ಎರಡೂ ಪ್ರಾಣಿಗಳ ವರ್ತನೆ ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ. ಬೆಕ್ಕು ಪ್ರಿಯರು, ನೋಡಿದಿರಾ ನಾಯಿಗಿಂತ ಬೆಕ್ಕೇ ಜಾಣ! ಎಂದು ಬೀಗುತ್ತಿದ್ದಾರೆ. ನಾಯಿಪ್ರಿಯರು, ಇಂಥ ಸಣ್ಣಪುಟ್ಟ ಸವಾಲುಗಳು ನಮಗೆ ಸಾಕಾಗುವುದಿಲ್ಲ, ಅದನ್ನು ನಾವು ನಿರ್ಲಕ್ಷಿಸುತ್ತೇವೆ ಎಂದು ಕಾಲರ್ ಏರಿಸಿಕೊಳ್ಳುತ್ತಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು? ನೀವು ಆಗಾಗ ನಿಮ್ಮ ನಾಯಿಬೆಕ್ಕುಗಳಿಗ ಇಂಥ ಸವಾಲುಗಳನ್ನು ಕೊಟ್ಟುನೋಡಿ. ಅವುಗಳ ವರ್ತನೆಯನ್ನು ಗಮನಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:54 pm, Fri, 7 July 23