Viral: ಇಫ್ತಾರ್‌ ಕೂಟದ ಉಚಿತ ಊಟಕ್ಕಾಗಿ ಮುಗಿಬಿದ್ದ ಪಾಕಿಸ್ತಾನಿಗರು; ವೈರಲ್‌ ಆಯ್ತು ವಿಡಿಯೋ

ನಮ್ಮ ಪಕ್ಕದ ದೇಶ ಪಾಕಿಸ್ತಾನದಲ್ಲಿ ನಡೆಯುವಂತಹ ಕೆಲವೊಂದು ವಿಚಿತ್ರ ಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣ ಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್‌ ಆಗಿದ್ದು, ರಂಜಾನ್‌ ಉಪವಾಸದ ಪ್ರಯುಕ್ತ ಆಯೋಜನೆ ಮಾಡಿದ್ದ ಇಫ್ತಾರ್‌ ಕೂಟದಲ್ಲಿ ಪಾಕಿಸ್ತಾನಿಯರು ಊಟ ಸವಿಯಲು ಮುಗಿಬಿದ್ದಿದ್ದಾರೆ. ಊಟಕ್ಕಾಗಿ ಜನ ತಳ್ಳಾಟ, ನೂಕಾಟ ನಡೆಸಿದ್ದು, ಇದೆಂಥಾ ಪರಿಸ್ಥಿತಿ ಎಂದು ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

Viral: ಇಫ್ತಾರ್‌ ಕೂಟದ ಉಚಿತ ಊಟಕ್ಕಾಗಿ ಮುಗಿಬಿದ್ದ ಪಾಕಿಸ್ತಾನಿಗರು; ವೈರಲ್‌ ಆಯ್ತು ವಿಡಿಯೋ
ವೈರಲ್​ ವಿಡಿಯೋ
Edited By:

Updated on: Mar 13, 2025 | 9:45 AM

ಪಾಕಿಸ್ತಾನ, ಮಾ. 12: ರಂಜಾನ್‌ (Ramdan) ತಿಂಗಳು ಆರಂಭವಾಗಿದೆ. ಪ್ರತಿವರ್ಷ ರಂಜಾನ್‌ ತಿಂಗಳಲ್ಲಿ ಮುಸ್ಲಿಮರು ಪ್ರತಿದಿನ ಉಪವಾಸ (fasting) ಮಾಡ್ತಾರೆ. ಈ ಆಚರಣೆಯ ವೇಳೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಬಿಡುತ್ತಾರೆ. ಇನ್ನೂ ಸೂರ್ಯಸ್ತದ ಸಮಯದಲ್ಲಿ ಮಸೀದಿ ಸೇರಿದಂತೆ ಹಲವೆಡೆ ಇಫ್ತಾರ್‌ (Iftar) ಕೂಟಗಳನ್ನು ಸಹ ಆಯೋಜನೆ ಮಾಡುತ್ತಾರೆ. ಇದೀಗ ಇಲ್ಲೊಂದು ಇಫ್ತಾರ್‌ ಕೂಟಕ್ಕೆ ಸಂಬಂಧಿಸಿದ ವಿಡಿಯೋ ವೈರಲ್‌ ಆಗಿದ್ದು, ಪಾಕಿಸ್ತಾನದ (Pakistan) ಮಸೀದಿಯೊಂದರಲ್ಲಿ ಆಯೋಜನೆ ಮಾಡಿದ್ದ ಇಫ್ತಾರ್‌ ಕೂಟದ ಊಟವನ್ನು ಸವಿಯಲು ಜನ ಮುಗಿ ಬಿದ್ದಿದ್ದಾರೆ. ಊಟಕ್ಕಾಗಿ ಜನ ತಳ್ಳಾಟ, ನೂಕಾಟ ನಡೆಸಿದ್ದು, ಪರಿಸ್ಥಿತಿಯ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಶಾ ಫೈಸಲ್ ಮಸೀದಿಯಲ್ಲಿ ಉಚಿತ ಊಟಕ್ಕಾಗಿ ಜನರ ನೂಕಾಟ ತಳ್ಳಾಟದ ಕಾರಣದಿಂದ ಇಫ್ತಾರ್‌ ಕೂಟ ಅಸ್ತವ್ಯಸ್ತವಾಗಿದೆ. ಇಫ್ತಾರ್‌ ಕೂಟದ ಊಟವನ್ನು ಸವಿಯಲು ಜನ ಮುಗಿ ಬಿದ್ದಿದ್ದು, ತಳ್ಳಾಟ, ನೂಕಾಟದಿಂದಾಗಿ ಕಾಲ್ತುಳಿತ ಕೂಡಾ ಉಂಟಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಇದನ್ನೂ ಓದಿ
ಕೃಷ್ಣ ಸುಂದರಿʼಯ ಮದುವೆಯ ಫೋಟೋ ಝಲಕ್‌ ನೋಡಿ
ಐಸ್‌ಕ್ರೀಂ ತಿಂದ ತಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಗ
ಪ್ರೀತಿಯಲ್ಲಿ ಮೋಸ, ಅಶಾಂತಿ ಎಲ್ಲಾ ಸಮಸ್ಯೆಗಳಿಗೂ ಚಹಾ ಒಂದೇ ಪರಿಹಾರ
ಸ್ಲಿಮ್‌ ಆಗಿ ಕಾಣಲು ತೂಕ ಇಳಿಸಿಕೊಳ್ಳುವ ಭರದಲ್ಲಿ ಯುವತಿಯ ಪ್ರಾಣವೇ ಹೋಯ್ತು

ಆರಿಫ್‌ ಆಜಕಿಯಾ (arifaajakia) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, “ಇದು ಹಿಂದುಳಿದ ಪ್ರದೇಶವಲ್ಲ, ಇದು ಪಾಕಿಸ್ತಾನದ ಅಭಿವೃದ್ಧಿ ಹೊಂದಿದ ನಗರವಾದ ಇಸ್ಲಾಮಾಬಾದ್‌ನ ದೃಶ್ಯ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮಸೀದಿಯೊಂದರಲ್ಲಿ ಆಯೋಜಿಸಲಾಗಿದ್ದ, ಇಫ್ತಾರ್‌ ಕೂಟದ ಊಟವನ್ನು ಸವಿಯಲು ಜನ ಮುಗಿ ಬೀಳುತ್ತಿರುವಂತಹ ದೃಶ್ಯವನ್ನು ಕಾಣಬಹುದು. ನೂರಾರು ಜನ ಒಮ್ಮೆಲೆ ಮುಗಿಬಿದ್ದು ನೂಕಾಟ ತಳ್ಳಾಟ ನಡೆಸಿದ್ದು, ಪರಿಣಾಮ ಈ ಕಾರ್ಯಕ್ರಮವೇ ಅಸ್ತವ್ಯಸ್ತವಾಗಿದೆ.

ಇದನ್ನೂ ಓದಿ: ಸರ್ಪಗಳೆಂದರೆ ಇವರಿಗೆ ಭಯವೇ ಇಲ್ಲ; ಈ ಬುಡಕಟ್ಟಿನ ಮಕ್ಕಳಿಗೂ ಹಾವಿನಿಂದ ವಿಷ ತೆಗೆಯುವ ವಿದ್ಯೆ ಗೊತ್ತಿದೆಯಂತೆ

ಮಾರ್ಚ್‌ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼ100 ಪ್ಲೇಟ್‌ ಊಟಕ್ಕೆ 150 ಜನ ಸೇರಿದ್ದಾರೆʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೊದಲು ಸರ್ಕಾರ ಜನರನ್ನು ಬಡತನದಿಂದ ಹೊರ ತರುವ ಕೆಲಸವನ್ನು ಮಾಡಲಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾವು ಭಾರತೀಯರು ಪುಣ್ಯವಂತರು, ಇಲ್ಲಿ ಉತ್ತಮ ಜೀವನವನ್ನು ಸಾಗಿಸುತ್ತಿದ್ದೇವೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ಸರ್ಕಾರದ ತಪ್ಪು ನೀತಿಗಳಿಂದಾಗಿ ಜನರು ಬಡವರಾಗಿದ್ದಾರೆ. ಈಗ ಜನರು ಆಹಾರಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಕಾಮೆಂಟ್‌ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ