Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಸರ್ಪಗಳೆಂದರೆ ಇವರಿಗೆ ಭಯವೇ ಇಲ್ಲ; ಈ ಬುಡಕಟ್ಟಿನ ಮಕ್ಕಳಿಗೂ ಹಾವಿನಿಂದ ವಿಷ ತೆಗೆಯುವ ವಿದ್ಯೆ ಗೊತ್ತಿದೆಯಂತೆ

ಭಾರತದಲ್ಲಿ ಒಂದು ವಿಶೇಷ ಬುಡಕಟ್ಟು ಜನಾಂಗವಿದ್ದು, ಇವರುಗಳು ಬರಿ ಕೈಗಳಿಂದ ವಿಷಕಾರಿ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುವುದರಲ್ಲಿ ನಿಪುಣರಾಗಿದ್ದಾರೆ. ಈ ಬುಡಕಟ್ಟು ಜನಾಂಗದ ಮಕ್ಕಳಿಗೂ ಸಹ ಹಾವುಗಳ ವಿಷ ತೆಗೆಯುವ ವಿದ್ಯೆ ಗೊತ್ತಿದೆಯಂತೆ. ಇವರು ಸಂಗ್ರಹಿಸಿದ ಈ ವಿಷವನ್ನು ಬಳಸಿಕೊಂಡು ವಿಜ್ಞಾನಿಗಳು ಹಾವು ಕಡಿತಕ್ಕೆ ಹಾಗೂ ಇತರೆ ಔಷಧ ತಯಾರಿಸಿ ಪ್ರಪಂಚದಾದ್ಯಂತ ಪೂರೈಸುತ್ತಿದ್ದಾರೆ. ಅಷ್ಟಕ್ಕೂ ಇದು ಯಾವ ಬುಡಕಟ್ಟು ಜನಾಂಗ ಎಂಬುದನ್ನು ನೋಡೋಣ ಬನ್ನಿ.

Viral: ಸರ್ಪಗಳೆಂದರೆ ಇವರಿಗೆ ಭಯವೇ ಇಲ್ಲ; ಈ ಬುಡಕಟ್ಟಿನ ಮಕ್ಕಳಿಗೂ ಹಾವಿನಿಂದ ವಿಷ ತೆಗೆಯುವ ವಿದ್ಯೆ ಗೊತ್ತಿದೆಯಂತೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 12, 2025 | 5:44 PM

ಹಾವುಗಳೆಂದರೆ (Snakes) ಯಾರಿಗೆ ಭಯವಿಲ್ಲ ಹೇಳಿ. ವಿಷಕಾರಿ (Poisonous) ಬಿಡಿ ಸಣ್ಣ ಪುಟ್ಟ ಹಾವುಗಳನ್ನು ಕಂಡರೂ ಎದ್ನೋ ಬಿದ್ನೋ ಅಂತ ಮಾರು ದೂರ ಓಡಿ ಹೋಗುವವರೇ ಹೆಚ್ಚಿದ್ದಾರೆ. ಹೀಗೆ ಹಾವು ಕಚ್ಚಿದರೆ ಸತ್ತು ಹೋಗುವ ಸಾಧ್ಯತೆ ಹೆಚ್ಚಿರುವ ಕಾರಣಕ್ಕೆ ಬಹುತೇಕ ಹೆಚ್ಚಿನವರು ಹಾವುಗಳನ್ನು ಕಂಡರೆ ಭಯಪಟ್ಟುಕೊಳ್ಳುತ್ತಾರೆ. ಅಂತದ್ರಲ್ಲಿ ಇಲ್ಲೊಂದು ಬುಡಕಟ್ಟು ಜನಾಂಗದ (Tribe) ಜನರು ಯಾವುದೇ ಭಯವಿಲ್ಲದೆ ವಿಷಕಾರಿ ಹಾವುಗಳ ಜೊತೆಯೇ ಸರಸವಾಡುತ್ತಾರಂತೆ. ಹೌದು ಈ ಜನರು ವಿಷಪೂರಿತ ಹಾವುಗಳನ್ನು (Poisonous Snake) ಆಟಿಕೆಗಳಂತೆ ಬರಿ ಕೈಗಳಿಂದ ಎತ್ತಿ ಅವುಗಳ ವಿಷವನ್ನು ಹೊರ ತೆಗೆಯುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ. ಈ ಬುಡಕಟ್ಟು ಜನಾಂಗದ ಮಕ್ಕಳಿಗೂ ಸಹ ಹಾವುಗಳ ವಿಷ ತೆಗೆಯುವ ವಿದ್ಯೆ ಗೊತ್ತಿದೆಯಂತೆ. ಇವರು ಸಂಗ್ರಹಿಸಿದ ಈ ವಿಷವನ್ನು ಬಳಸಿಕೊಂಡು ವಿಜ್ಞಾನಿಗಳು ಹಾವು ಕಡಿತಕ್ಕೆ ಹಾಗೂ ಇತರೆ ಔಷಧ (medicine) ತಯಾರಿಸಿ ಪ್ರಪಂಚದಾದ್ಯಂತ ಪೂರೈಸುತ್ತಿದ್ದಾರೆ. ಅಷ್ಟಕ್ಕೂ ಇದು ಯಾವ ಬುಡಕಟ್ಟು ಜನಾಂಗ ಎಂಬುದನ್ನು ನೋಡೋಣ ಬನ್ನಿ.

ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಭಾಗದಲ್ಲಿ ಹರಡಿರುವ ʼಇರುಳ ಬುಡಕಟ್ಟುʼ ಜನಾಂಗದವರು ಹಾವುಗಳನ್ನು ಹಿಡಿಯುವ ಮತ್ತು ವಿಷಕಾರಿ ಹಾವುಗಳ ವಿಷವನ್ನು ತೆಗೆಯುವ ಪ್ರಾಚೀನ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸುಮಾರು 3 ಲಕ್ಷ ದಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ಬುಡಕಟ್ಟು ಜನಾಂಗದ ಶೇಕಡಾ 90 ಕ್ಕಿಂತ ಹೆಚ್ಚು ಜನರು ಹಾವುಗಳನ್ನು ಪತ್ತೆಹಚ್ಚುವ ಮತ್ತು ಹಾವು ಹಿಡಿಯುವ ಪರಿಣತಿಯನ್ನು ಹೊಂದಿದ್ದಾರೆ. ತಲೆಮಾರುಗಳಿಂದ ಈ ಬುಡಕಟ್ಟು ಜನಾಂಗದವರು ಹಾವುಗಳಿಂದ ವಿಷವನ್ನು ತೆಗೆಯುತ್ತಿದ್ದು, ಇವರು ಸಂಗ್ರಹಿಸಿದ ಈ ವಿಷಗಳಿಂದ ಪ್ರತಿವರ್ಷ ಹಾವು ಕಡಿತದಿಂದ ಜೀವ ಉಳಿಸುವ ಔಷಧಗಳನ್ನು ವಿಜ್ಞಾನಿಗಳು ತಯಾರಿಸುತ್ತಿದ್ದಾರೆ.

ಈ ವಿಷ ನಿರೋಧಕ ಇಂಜೆಕ್ಷನ್ ತಯಾರಿಕೆ:

ವಿಜ್ಞಾನಿಗಳು ಇರುಳ ಬುಡಕಟ್ಟಿನ ಜನರು ಸಂಗ್ರಹಿಸಿದ ಹಾವುಗಳ ವಿಷವನ್ನು ತೆಗೆದುಕೊಂಡು ಅದರಿಂದ ವಿಷ ನಿರೋಧಕ ಇಂಜೆಕ್ಷನ್ ತಯಾರಿಸುತ್ತಾರೆ. ಇದನ್ನು ಹಾವು ಕಡಿತದ ಸಂದರ್ಭದಲ್ಲಿ ಬಳಸಲಾಗುತ್ತದೆ. ಈ ಬುಡಕಟ್ಟು ಜನ ಹಲವು ತಲೆಮಾರುಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. ಮಕ್ಕಳು, ವೃದ್ಧರು ಮಾತ್ರವಲ್ಲ ಮಹಿಳೆಯರು ಕೂಡ ಹಾವುಗಳನ್ನು ಹಿಡಿಯುವುದರಲ್ಲಿ ಮತ್ತು ಅವುಗಳ ವಿಷವನ್ನು ಸಂಗ್ರಹಿಸುವುದರಲ್ಲಿ ಪರಿಣಿತರಾಗಿದ್ದಾರೆ. ಇವರು ವಾರ್ಷಿಕವಾಗಿ 13 ಸಾವಿರ ಹಾವುಗಳನ್ನು ಹಿಡಿದು ವಿಷವನ್ನು ತೆಗೆಯುವ ಸರ್ಕಾರಿ ಪರವಾನಗಿಯನ್ನು ಹೊಂದಿದ್ದಾರೆ. ಈ ವಿಷ ಸಂಗ್ರಹಣೆಯ ಮೂಲಕ ಈ ಸಮುದಾಯ ಪ್ರತಿ ವರ್ಷ ಅಂದಾಜು 25 ಕೋಟಿ ರೂ. ಆದಾಯ ಗಳಿಸುತ್ತಿದೆ.

ಇದನ್ನೂ ಓದಿ
Image
ರಸ್ತೆಯಲ್ಲಿ ಹೋಗುವಾಗ ಅಡ್ಡ ಬಂದ ಬೆಕ್ಕನ್ನೇ ಜೀವಂತ ಸುಟ್ಟು ಹಾಕಿದ ಮಹಿಳೆ
Image
ವರನಿಗೆ ಮೆಸೇಜ್‌ ಮಾಡಿ ಮದುವೆ ಹಿಂದಿನ ದಿನ ನಾಪತ್ತೆಯಾದ ವಧು
Image
ಪ್ರವಾಸಿಗರೆದುರೇ ಮರಿಗೆ ಜನ್ಮ ನೀಡಿದ ಆನೆ
Image
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌

ಇದನ್ನೂ ಓದಿ: ಸನಾತನ ಸಂಪ್ರದಾಯದಂತೆ ನಡೆದ ಶ್ರೀಕೃಷ್ಣನ ಭಕ್ತೆಯ ವಿವಾಹ ಮಹೋತ್ಸವ; ʼಕೃಷ್ಣ ಸುಂದರಿʼಯ ಮದುವೆಯ ಫೋಟೋ ಝಲಕ್‌ ನೋಡಿ

ಭಾರತದಲ್ಲಿ ಯಾವ ಹಾವುಗಳಿಂದ ವಿಷವನ್ನು ಹೊರತೆಗೆಯಲು ಅನುಮತಿ ಇದೆ?

ಭಾರತದಲ್ಲಿ, ವಿಷವನ್ನು ಹೊರತೆಗೆಯಲು ಕೆಲವೊಂದು ಸೀಮಿತ ಹಾವುಗಳನ್ನು ಮಾತ್ರ ಹಿಡಿಯಲು ಅನುಮತಿ ಇದೆ. ನಿಯಮಗಳ ಪ್ರಕಾರ, ವಿಷವನ್ನು ಹೊರತೆಗೆಯಲು ಕೇವಲ ನಾಲ್ಕು ಜಾತಿಯ ಹಾವುಗಳನ್ನು ಹಿಡಿಯಬಹುದು. ಇವುಗಳಲ್ಲಿ ಕಿಂಗ್ ಕೋಬ್ರಾ, ಕ್ರೈಟ್, ರಸೆಲ್ ವೈಪರ್ ಮತ್ತು ಇಂಡಿಯನ್ ಸಾ ಸ್ಕ್ರೋಲ್ಡ್ ವೈಪರ್ ಸೇರಿವೆ. ಈ ನಾಲ್ಕು ಜಾತಿ ಹಾವುಗಳ ವಿಷವು ತುಂಬಾ ಅಪಾಯಕಾರಿಯಾಗಿದ್ದು, ಅದರ ಒಂದು ಹನಿ ವಿಷಕ್ಕೆ ಒಬ್ಬ ವ್ಯಕ್ತಿಯನ್ನು ಕೊಲ್ಲುವ ಶಕ್ತಿಯಿದೆ. ಹೀಗಿರುವಾಗ ಇರುಳ ಬುಡಕಟ್ಟಿನ ಸಲೀಸಾಗಿ ಈ ವಿಷಪೂರಿತ ಹಾವುಗಳ ವಿಷವನ್ನು ತೆಗೆದು ಸಂಗ್ರಹಣೆ ಮಾಡ್ತಾರೆ.

ಇರುಳ ಬುಡಕಟ್ಟಿನ ಜನರು ಹಾವುಗಳಿಂದ ವಿಷವನ್ನು ಹೇಗೆ ಹೊರತೆಗೆಯುತ್ತಾರೆ?

ಇರುಳ ಬುಡಕಟ್ಟಿನ ಜನ ನೇರವಾಗಿ ಹಾವಿನ ಕುತ್ತಿಗೆಯನ್ನು ಹಿಡಿದು ಅದರಿಂದ ವಿಷವನ್ನು ಹೊರತೆಗೆಯುತ್ತಾರೆ. ವಾಸ್ತವವಾಗಿ, ಅವರು ಹಾವಿನ ತಲೆಯನ್ನು ಹಿಡಿದು ಅದರ ಹಲ್ಲುಗಳ ನಡುವೆ ಜಾಡಿ ಅಥವಾ ಭರಣಿಯನ್ನು ಇಡುತ್ತಾರೆ. ಹೀಗೆ ಕುತ್ತಿಗೆಯ ಮೇಲಿನ ನಿರಂತರ ಒತ್ತಡದಿಂದಾಗಿ, ಹಾವು ಆಕ್ರಮಣಕಾರಿಯಾಗುತ್ತದೆ ಮತ್ತು ಜಾಡಿಯನ್ನು ವೇಗವಾಗಿ ಕಚ್ಚಲು ಪ್ರಾರಂಭಿಸುತ್ತದೆ. ಹೀಗೆ ಬಂದ ವಿಷವು ಜಾಡಿಯಲ್ಲಿ ಸಂಗ್ರಹವಾಗುತ್ತದೆ. ಈ ಬುಡಕಟ್ಟು ಜನಾಂಗದವರು ʼಇರುಳ ಹಾವು ಹಿಡಿಯುವವರ ಕೈಗಾರಿಕಾ ಸಹಕಾರ ಸಂಘʼವನ್ನು ಸಹ ರಚಿಸಿಕೊಂಡಿದ್ದಾರೆ. ಇದು ಹಾವಿನ ವಿಷವನ್ನು ಸಂಗ್ರಹಿಸುವ ವಿಶ್ವದ ಅತಿದೊಡ್ಡ ಸಂಘಗಳಲ್ಲಿ ಒಂದಾಗಿದೆ. 1978 ರಲ್ಲಿ ಸ್ಥಾಪನೆಯಾದ ಈ ಸಂಘ ಇಂದು ನೂರಾರು ಸದಸ್ಯರನ್ನು ಹೊಂದಿದೆ.

ಇರುಳು ಬುಡಕಟ್ಟು ಜನರು ಹಾವಿನ ವಿಷವನ್ನು ಹೊರತೆಗೆದು ಔಷಧ ಕಂಪನಿಗಳಿಗೆ ಹೆಚ್ಚಿನ ಮಾರಾಟ ಮಾಡುತ್ತಾರೆ. ಈ ಕೆಲಸವನ್ನು ಸರ್ಕಾರದ ಅನುಮೋದನೆಯೊಂದಿಗೆ ಮಾಡಲಾಗುತ್ತದೆ. ಈ ಸರ್ಪದ ವಿಷದಿಂದ ವಿಷ ವಿರೋಧಿ ಇಂಜೆಕ್ಷನ್ ತಯಾರಿಸುತ್ತಾರೆ. ಸ್ವಾತಂತ್ರ್ಯಕ್ಕೂ ಮುನ್ನ ಈ ಸಮುದಾಯವು ಬ್ರಿಟಿಷರಿಗೆ ಹಾವುಗಳನ್ನು ಮಾರಾಟ ಮಾಡುತ್ತಿತ್ತು. ನಂತರ 1972 ರಲ್ಲಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ, ಹಾವು ಬೇಟೆಯನ್ನು ನಿಷೇಧಿಸಲಾಯಿತು. ಇದರಿಂದಾಗಿ ಅವರ ಗಳಿಕೆಯೂ ನಿಂತುಹೋಯಿತು. ನಂತರ ವಿಜ್ಞಾನಿ ರೊಮುಲಸ್ ವಿಟೇಕರ್ 1978 ರಲ್ಲಿ ಇರುಳ ಬುಡಕಟ್ಟು ಜನಾಂಗಕ್ಕಾಗಿ ಸೊಸೈಟಿಯನ್ನು ರೂಪಿಸಿದರು. ಈ ಸಂಘಟನೆಯ ಮುಖಾಂತರ ಹಾವುಗಳ ವಿಷ ತೆಗೆಯುವ ಕಾಯಕವನ್ನು ಮಾಡುವ ಮೂಲಕ ಇವರು ಉತ್ತಮ ಆದಾಯ ಗಳಿಸಲು ಶುರು ಮಾಡಿದರು.

ಇಂದು, ಈ ಸೊಸೈಟಿಯು 100 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ವಾರ್ಷಿಕವಾಗಿ 13,000 ಹಾವುಗಳನ್ನು ಹಿಡಿದು ವಿಷವನ್ನು ಹೊರತೆಗೆಯುವ ಸರ್ಕಾರಿ ಪರವಾನಗಿಯನ್ನು ಹೊಂದಿದೆ. ಹೀಗೆ ಹಾವಿನ ವಿಷ ಸಂಗ್ರಹಣೆ ಮಾಡುವ ಮೂಲಕ ಈ ಸೊಸೈಟಿ ಪ್ರತಿ ವರ್ಷ ಅಂದಾಜು 25 ಕೋಟಿ ರೂ. (ಸುಮಾರು $3 ಮಿಲಿಯನ್) ಗಳಿಸುತ್ತದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Wed, 12 March 25

ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ