
ಪಾಕಿಸ್ತಾನಕ್ಕೆ ಸಂಬಂಧಿಸಿದ ಕೆಲವೊಂದಷ್ಟು ವಿಡಿಯೋಗಳು ಆಗೊಮ್ಮೆ ಈಗೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದರ ಜೊತೆಗೆ ಒಂದಷ್ಟು ಟೀಕೆಗೂ ಗುರಿಯಾಗುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ವಿಡಿಯೋವೊ ವೈರಲ್ ಆಗಿದ್ದು, ಪಾಕ್ ಪ್ರಧಾನಿ ರ್‍ಯಾಲಿಯೊಂದರಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವ ಸಂದರ್ಭದಲ್ಲಿ ʼಅಭಿವೃದ್ಧಿಯ ವಿಚಾರದಲ್ಲಿ ಭಾರತವನ್ನು ನಾನು ಸೋಲಿಸುತ್ತೇನೆ. ನಾವು ಭಾರತವನ್ನು ಮೀರಿ ಬೆಳೆಯದಿದ್ದರೆ ನನ್ನ ಹೆಸರು ಶೆಹಜಾಬ್ ಷರೀಫ್ ಅಲ್ಲʼ ಎಂದು ದಿಟ್ಟ ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ. . ಪಾಕ್ ಪ್ರಧಾನಿಯ ಈ ಹೇಳಿಕೆ ಇದೀಗ ಟ್ರೋಲ್‌ಗೆ ಗುರಿಯಾಗಿದ್ದು, ಮೊದಲು ನೀವು ನಿಮ್ಮ ಆರ್ಥಿಕತೆಯನ್ನು ಸ್ಥಿರಗೊಳಿಸುವತ್ತ ಗಮನಹರಿಸಿ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್‌ನಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯೊಂದರಲ್ಲಿ ಪಾಕ್ ಪ್ರಧಾನಿ ಶೆಹಜಾಬ್ ಷರೀಫ್ “ಪಾಕಿಸ್ತಾನವು ಆರ್ಥಿಕತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಭಾರತವನ್ನು ಹಿಂದಿಕ್ಕದಿದ್ದರೆ, ನನ್ನ ಹೆಸರು ಶಹಬಾಜ್ ಷರೀಫ್ ಅಲ್ಲ” ಎಂಬ ಹೇಳಿಕೆನ್ನು ನೀಡಿದ್ದಾರೆ.
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ, ತಮ್ಮ ಸರ್ಕಾರ ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಿದೆ ಎಂದು ಹೇಳಿದರು. ಪಾಕಿಸ್ತಾನದ ಪರಿಸ್ಥಿತಿಯನ್ನು ಸುಧಾರಿಸಲು ನಾವು ಹಗಲಿರುಳು ಶ್ರಮಿಸುತ್ತೇವೆ. ಪ್ರಕೃತಿಯ ಆಶೀರ್ವಾದ ಪಾಕಿಸ್ತಾನದ ಮೇಲಿದೆ. ನಮ್ಮ ಪ್ರಯತ್ನಗಳಿಂದಾಗಿ ಪಾಕಿಸ್ತಾನವು ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಭಾರತವನ್ನು ಮೀರದಿದ್ದರೆ, ನನ್ನ ಹೆಸರು ಶಹಬಾಜ್ ಷರೀಫ್ ಅಲ್ಲ ಎಂದು ಗುಡುಗಿದ್ದಾರೆ. ನನ್ನ ನಾಯಕತ್ವದಲ್ಲಿ ಪಾಕಿಸ್ತಾನವು ಸಾಲದ ಮೇಲೆ ಅವಲಂಬಿತವಾಗುವ ಬದಲು ಸ್ವಾವಲಂಬಿ ಆರ್ಥಿಕತೆಯನ್ನು ನಿರ್ಮಿಸುವತ್ತ ಗಮನ ಹರಿಸಲಿದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲದೆ ತಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಾಗ ದೇಶದಲ್ಲಿ ಹಣದುಬ್ಬರ ಶೇ. 40 ರಷ್ಟಿತ್ತು, ಇಂದು ಅದು ಕೇವಲ ಶೇ. 2% ಕ್ಕೆ ಇಳಿದಿದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಜೊತೆಗೆ ಅಭಿವೃದ್ಧಿಯ ವಿಚಾರದಲ್ಲಿ ಭಾರತವನ್ನು ಸೋಲಿಸುವ ಪ್ರತಿಜ್ಞೆಯನ್ನು ಕೂಡಾ ಮಾಡಿದ್ದಾರೆ. ಈ ಹೇಳಿಕೆ ಟ್ರೋಲ್‌ಗೆ ಗುರಿಯಾಗಿದೆ.
If I don’t defeat #India, my name is not Shehbaz Sharif,” says PM Shehbaz, pledging to outpace regional rivals like India in development. Speaking in Dera Ghazi Khan, he emphasized the need for unprecedented federal-provincial collaboration to steer Pakistan towards progress.… pic.twitter.com/nQudEuLH2K
— Ghulam Abbas Shah (@ghulamabbasshah) February 22, 2025
ಈ ಕುರಿತ ವಿಡಿಯೋವನ್ನು ghulamabbasshah ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ಈ ವಿಡಿಯೋ ತುಣುಕಿನಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ನಾವು ಭಾರತವನ್ನು ಮೀರಿ ಬೆಳೆಯದಿದ್ದರೆ ನನ್ನ ಹೆಸರು ಶೆಹಜಾಬ್ ಷರೀಫ್ ಅಲ್ಲ ಎಂದು ಪಾಕ್ ಪ್ರಧಾನಿ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿಕೆ ನೀಡಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಖಡಕ್ ಲೇಡಿ ಡಿಎಸ್ಪಿ ಮಾತ್ರವಲ್ಲ ಫಿಟ್ನೆಸ್ ರಾಣಿಯೂ ಹೌದು; ಬಾಲಿವುಡ್ ಬೆಡಗಿಯರನ್ನೇ ಮೀರಿಸುವ ಸುಂದರ ಅಧಿಕಾರಿ ಇವರು
ಫೆಬ್ರವರಿ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.7 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಭಾರತವನ್ನು ಸೋಲಿಸುವ ಕನಸನ್ನು ಮತ್ತೆ ಕಾಣಿ, ಮೊದಲು ನಿಮ್ಮ ಜನರ ಮೇಲೆ ಗಮನವನ್ನು ಕೇಂದ್ರೀಕರಿಸಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹಾಸ್ಯ ತುಂಬಾ ಚೆನ್ನಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆಯೇ ಕನಸು ಕಾಣುತ್ತಾ ಇರಿʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ