
ಈಗಿನ ಕಾಲದ ಮದುವೆಯೇ (marriage) ಹಾಗೆ, ಅದ್ದೂರಿತನದಿಂದ ಕೂಡಿರುತ್ತದೆ. ಕೈಯಲ್ಲಿ ಕಾಸಿಲ್ಲ ಅಂದ್ರು ಸಾಲ ಮಾಡಿ ಅದ್ಧೂರಿಯಾಗಿ ಮದುವೆ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಯುವಕನಿಗೆ ಹೆತ್ತವರು ಅದ್ಧೂರಿಯಾಗಿ ಮದ್ವೆ ಮಾಡಲು ವೈಯುಕ್ತಿಕ ಸಾಲ ಪಡೆಯಲು ಒತ್ತಾಯಿಸಿದ್ದಾರೆ. ಯುವಕನು ರೆಡ್ಡಿಟ್ ಪೋಸ್ಟ್‌ನಲ್ಲಿ ಅಳಲು ತೋಡಿಕೊಂಡಿದ್ದಾನೆ. ಈ ಪೋಸ್ಟ್ ಸದ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಲಕ್ಷಾನುಗಟ್ಟಲೇ ಸಾಲ ಮಾಡಿ ಮದ್ವೆ ಆಗ್ಬೇಡಿ ಎಂದು ಸಲಹೆ ನೀಡಿದ್ದಾರೆ.
ಆರ್ ಇಂಡಿಯನ್ ಫೈನಾನ್ಸ್ (r/ Indian Finance) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇಲ್ಲಿ ತನ್ನ ಪ್ರೇಮ ವಿವಾಹಕ್ಕೆ ಹೆತ್ತವರು ಒಪ್ಪಿ ಕೊಂಡಿದ್ರು ಷರತ್ತುಗಳನ್ನು ಹಾಕಿ ನನ್ನನ್ನು ಕಟ್ಟಿ ಹಾಕಿದ್ದಾರೆ. ನನ್ನ ಹೆತ್ತವರದ್ದು ಮದುವೆ ತಮ್ಮಿಷ್ಟದಂತೆ ಅದ್ಧೂರಿಯಾಗಿಯೇ ನಡೆಸಬೇಕೆಂಬ ಆಸೆ. ಹೀಗಾಗಿ ತಂದೆ ತಾಯಿ ಮದುವೆಗೆ ಕನಿಷ್ಠ 50 ಲಕ್ಷ ರೂ. ಖರ್ಚು ಮಾಡಬೇಕೆಂದು ಹೇಳಿದ್ದಾರೆ. ಇದಕ್ಕಾಗಿ ನನ್ನ ಬಳಿ 45 ಲಕ್ಷ ರೂ. ವೈಯಕ್ತಿಕ ಸಾಲ ಪಡೆಯುವಂತೆ ಒತ್ತಾಯೊಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾನೆ.
ಈಗಾಗಲೇ ನನ್ನ ತಂದೆಗೆ 50 ಲಕ್ಷ ಬ್ಯಾಂಕ್ ಸಾಲವಿದೆ. ನಮ್ಮ ಆಸ್ತಿ ಮಾರಿ ಸಾಲ ತೀರಿಸುವುದಾಗಿ ಹೇಳಿದ್ದಾರೆ. ಆದರೆ ನನಗೆ ಬರುವ ಮಾಸಿಕ ಸಂಬಳ 2.5 ಲಕ್ಷ ರೂ. ಇತ್ತ ಭಾವಿ ಪತ್ನಿ ಸಾಲವನ್ನು ಒಟ್ಟಾಗಿ ಸಾಲ ತೀರಿಸಲು ಸಿದ್ದರಿದ್ದಾಳೆ. ಆದರೆ ಈ ಸಾಲ ಇಟ್ಟುಕೊಂಡು ವೈವಾಹಿಕ ಜೀವನ ನಡೆಸುವುದು ಹೇಗೆಂಬುದು ನಮ್ಮ ಮುಂದಿರುವ ಬಹು ದೊಡ್ಡ ಪ್ರಶ್ನೆ ಎಂದಿದ್ದಾನೆ.
ಆದರೆ ನನ್ನ ಕೈ ಹಿಡಿಯುವಾಕೆಯ ಮನೆಯವರು 15 ಲಕ್ಷ ರೂ ಒಳಗೆ ಮದುವೆಗೆ ಸಿದ್ಧರಿದ್ದಾರೆ. ನನ್ನ ಹೆತ್ತವರದ್ದು ಅದ್ಧೂರಿಯಾಗಿ ಮದುವೆ ಮಾಡಬೇಕೆಂಬ ಆಸೆ. ಆದ್ರೆ ಮದುವೆಗೆ ಇಷ್ಟು ದೊಡ್ಡ ಸಾಲ ಹೊರೆ ಪಡೆದುಕೊಳ್ಳುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾನೆ.
Parents want a ₹50L wedding funded with a personal loan. Am I being unreasonable for not wanting this debt?
by
u/United-Fault2612 in
IndiaFinance
ಇದನ್ನೂ ಓದಿ: ಭಾರತೀಯರು ಕೈಯಲ್ಲಿ ಊಟ ಮಾಡೋದನ್ನು ಅಣಕಿಸಿದ ಅಮೆರಿಕನ್ ವ್ಯಕ್ತಿಗೆ ತಿಳಿವಳಿಕೆ ಹೇಳಿದ ಸಂಜೀವ್ ಸನ್ಯಾಲ್
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸಾಲ ಮಾಡಿ ಮದುವೆ ಆಗಬೇಡಿ ಎಂದಿದ್ದಾರೆ. ಇನ್ನೊಬ್ಬರು, ಹೆತ್ತವರ ಆಸೆ ಈಡೇರಿಸಬೇಕು ನಿಜ, ಆದರೆ ಹೆಗಲ ಮೇಲೆ ಆರ್ಥಿಕ ಹೊರೆಯನ್ನು ಹಾಕಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಸಾಲ ಮಾಡುವ ಮುನ್ನ ಯೋಚಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ