Video: ಚಾಲಕನ ಕಷ್ಟ ಅರಿತು ತಾನೇ ಕ್ಯಾಬ್ ಓಡಿಸಿ ಲಖನೌ ತಲುಪಿದ ಪ್ರಯಾಣಿಕ

ಅಪರಿಚಿತ ವ್ಯಕ್ತಿಗಳಿಗೆ ಸಹಾಯ ಮಾಡುವವರನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇದೀಗ ನಿದ್ದೆಯಲ್ಲಿದ್ದು ಆಯಾಸಗೊಂಡಿದ್ದ ಕ್ಯಾಬ್ ಡ್ರೈವರ್ ನನ್ನು ಗಮನಿಸಿದ ಪ್ರಯಾಣಿಕನೊಬ್ಬ ತಾನೇ ಕ್ಯಾಬ್ ಓಡಿಸಿ ತಲುಪಬೇಕಾದ್ದಲ್ಲಿಗೆ ತಲುಪಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಯುವಕನ ಈ ಮಾನವೀಯ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Video: ಚಾಲಕನ ಕಷ್ಟ ಅರಿತು ತಾನೇ ಕ್ಯಾಬ್ ಓಡಿಸಿ ಲಖನೌ ತಲುಪಿದ ಪ್ರಯಾಣಿಕ
ವೈರಲ್‌ ವಿಡಿಯೋ
Image Credit source: Instagram

Updated on: Sep 15, 2026 | 7:34 PM

ಈಗಿನ ಕಾಲದಲ್ಲಿ ಜನರ ಮನಸ್ಥಿತಿ ಅರಿತುಕೊಳ್ಳುವುದೇ ಕಷ್ಟ. ಹೀಗಿರುವಾಗ ಇನ್ನೊಬ್ಬರ ಕಷ್ಟ, ನೋವು ಅರಿತು ಸಹಾಯ (help) ಮಾಡುವ ಅಪರಿಚಿತ ವ್ಯಕ್ತಿಗಳು ಇದ್ದಾರೆ ಅಂದ್ರೆ ನೀವು ನಂಬುತ್ತಿರಾ. ಇದಕ್ಕೆ ಉದಾಹರಣೆಯಂತಿದ್ದಾನೆ ಈ ಪ್ರಯಾಣಿಕ. ಹೌದು, ಕ್ಯಾಬ್‌ ಡ್ರೈವರ್‌ನ ಆಯಾಸ ಅರಿತ ಪ್ರಯಾಣಿಕನೊಬ್ಬ ತಾನೇ ಕ್ಯಾಬ್ ಓಡಿಸಿ ಲಖನೌ ತಲುಪಿದ್ದಾನೆ. ಪ್ರಯಾಣಿಕನ ಒಳ್ಳೆತನಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಹರಿದಾಡುತ್ತಿದೆ.

 ಕ್ಯಾಬ್‌ ಚಾಲಕನ ಕಷ್ಟ ಅರಿತ ಪ್ರಯಾಣಿಕ ಮಾಡಿದ್ದೇನು?

ಟ್ರಾವೆಲರ್ ಮಿಶ್ರಾ (travellermishra) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಶಿವ ಮಿಶ್ರಾ ಎಂಬ ಯುವಕನು ನೋಯ್ಡಾದಿಂದ ಲಖನೌಗೆ ಕ್ಯಾಬ್ ಬುಕ್ ಮಾಡಿದ್ದಾನೆ. ಇದೇ ವೇಳೆ ಕ್ಯಾಬ್ ಚಾಲಕನು ಆಯಾಸಗೊಂಡಿದ್ದಾನೆಯೆಂದು ತಿಳಿದು ರೆಸ್ಟ್ ಮಾಡಲು ಹೇಳಿದ್ದಾನೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ನಾನೀಗ ನೋಯ್ಡಾದಿಂದ ಲಖನೌಗೆ ಪ್ರಯಾಣಿಸುತ್ತಿದ್ದೇನೆ. ನಾನು ಕ್ಯಾಬ್ ಬುಕ್ ಮಾಡಿದ್ದೆ. ಆದರೆ ಡ್ರೈವರ್ ಹಿಂದಿನ ದಿನ ಡ್ರೈವ್ ಮಾಡಿ ದಣಿದಿದ್ದರು. ಇಂತಹ ಸಂದರ್ಭ ಏರ್ಪಟ್ಟಾಗ ಚಾಲಕರ ಮೇಲೆ ಕೋಪಗೊಳ್ಳಬಾರದು ಎನ್ನುವುದು ಅನಿಸುತ್ತದೆ. ನಾನೇ ಸ್ವತಃ ಡ್ರೈವ್ ಮಾಡಿದೆ ಎಂದು ಬರೆದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಕ್ಯಾಬ್‌ನಲ್ಲಿ ಡ್ರೈವರ್‌ಗೆ ರೆಸ್ಟ್ ಮಾಡಲು ಹೇಳಿ ಪ್ರಯಾಣಿಕನೊಬ್ಬ ಕ್ಯಾಬ್ ಓಡಿಸುತ್ತಿರುವುದನ್ನು ಕಾಣಬಹುದು. ಯುವಕನ ಪಕ್ಕದಲ್ಲಿ ಆತನ ಸಹೋದರ ಕುಳಿತುಕೊಂಡಿದ್ದಾನೆ. ಆಯಾಸಗೊಂಡ ಕ್ಯಾಬ್‌ ಚಾಲಕನು ಕಾರಿನ ಹಿಂದಿನ ಸೀಟ್‌ನಲ್ಲಿ ಮಲಗಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಇದೇ ಕಣ್ರೀ ನಿಜವಾದ ಮಾನವೀಯತೆ; ರಸ್ತೆ ಬದಿಯಲ್ಲಿ ಮಲಗಿದ್ದ ವೃದ್ಧ ವ್ಯಕ್ತಿಗೆ ಸಹಾಯ ಮಾಡಿದ ವಿದೇಶಿಗ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಒಳ್ಳೆತನ ನಾನು ಮೆಚ್ಚಿದೆ ಎಂದಿದ್ದಾರೆ. ಇನ್ನೊಬ್ಬರು, ಸಹಾಯ ಮಾಡುವ ಗುಣ ಎಲ್ಲರನ್ನೂ ಇರಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಒಳ್ಳೆತನ ಹೀಗೆಯೇ ಇರಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us