Viral: ವಿದ್ಯುತ್ ಇಲ್ಲದೆಯೇ ಬೆಳಕು ನೀಡುತ್ತೆ ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಈ ಕರೆಂಟ್‌ ಫ್ರೀ ಬಲ್ಬ್‌; ಇದು ಹೇಗೆ ವರ್ಕ್‌ ಆಗುತ್ತೆ ಗೊತ್ತಾ?

ಇತ್ತೀಚಿಗೆ ಹೆಚ್ಚಿನ ಕಡೆ ವಿದ್ಯುತ್‌ ದರ ಏರಿಕೆಯಾಗಿದ್ದು, ಬಡ ವರ್ಗದ ಅನೇಕ ಜನರಿಗೆ ಈ ವೆಚ್ಚವನ್ನು ಭರಿಸುವುದು ಕಷ್ಟ ಸಾಧ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಏಷ್ಯಾದ ಈ ಒಂದು ದೇಶದ ಜನ ವಿದ್ಯುತ್‌ ಉಳಿತಾಯ ಮಾಡಲು ಹಾಗೂ ದುಬಾರಿ ಕರೆಂಟ್‌ ಬಿಲ್‌ ಪಾವತಿಸುವುದನ್ನು ತಪ್ಪಿಸಲು ಸೂರ್ಯನ ಬೆಳಕಿನಿಂದ ಚಾರ್ಜ್‌ ಮಾಡಲಾದ ಕರೆಂಟ್‌ ಫ್ರೀ ಬಲ್ಬ್‌ಗಳನ್ನು ಮನೆಗಳಲ್ಲಿ ಬಳಸುತ್ತಿದ್ದಾರಂತೆ. ಪ್ಲಾಸಿಕ್‌ ಬಾಟಲಿಯಿಂದ ತಯಾರಿಸಲಾದ ಈ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಹೇಗೆ ವರ್ಕ್‌ ಆಗುತ್ತೆ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

Viral: ವಿದ್ಯುತ್ ಇಲ್ಲದೆಯೇ ಬೆಳಕು ನೀಡುತ್ತೆ ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಈ ಕರೆಂಟ್‌ ಫ್ರೀ ಬಲ್ಬ್‌; ಇದು ಹೇಗೆ ವರ್ಕ್‌ ಆಗುತ್ತೆ ಗೊತ್ತಾ?
ಸಾಂದರ್ಭಿಕ ಚಿತ್ರ
Edited By:

Updated on: Mar 14, 2025 | 12:00 PM

ವಿದ್ಯುತ್‌ (Electricity) ಇಲ್ಲದೆ ಇಂದಿನ ಜೀವನವನ್ನು ಕಲ್ಲಿಸಿಕೊಳ್ಳುವುದು ಕಷ್ಟ. ಆದ್ರೆ ಇತ್ತೀಚಿಗೆ ಹೆಚ್ಚಿನ ಕಡೆ ವಿದ್ಯುತ್‌ (electricity) ದರ (cost) ಏರಿಕೆಯಾಗಿದ್ದು, ಅನೇಕ ಬಡ ವರ್ಗದ ಜನರಿಗೆ (Poor people) ಇಂದಿನ ವಿದ್ಯುತ್‌ ವೆಚ್ಚವನ್ನು ಭರಿಸುವುದು ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಏಷ್ಯಾ ಖಂಡದ ಈ ಒಂದು ದೇಶದಲ್ಲಿ ಬಡ ಜನರು ಹಾಗೂ ಸ್ಲಂ ನಿವಾಸಿಗಳು ವಿದ್ಯುತ್‌ ಉಳಿಸಲು ಹಾಗೂ ದುಬಾರಿ ವಿದ್ಯುತ್‌ ಬಿಲ್‌ ಪಾವತಿಸುವ (electricity bill) ತಲೆ ಬಿಸಿ ನಮ್ಗೆ ಬೇಡ್ವೇ ಬೇಡ ಎಂದು ಸೂರ್ಯನ ಬೆಳಕಿನಿಂದ (Sun Light) ಚಾರ್ಜ್‌ ಮಾಡಲಾದ ಕರೆಂಟ್‌ ಫ್ರೀ ಬಲ್ಬ್‌ಗಳನ್ನು (bulb) ಮನೆಗಳಲ್ಲಿ ಬಳಸುತ್ತಿದ್ದಾರಂತೆ. ಯಾವುದೇ ಖರ್ಚಿಲ್ಲದೆ ಬರೀ ಪ್ಲಾಸಿಕ್‌ ಬಾಟಲಿಯಿಂದ ತಯಾರಿಸಲಾದ ಈ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಹೇಗೆ ವರ್ಕ್‌ ಆಗುತ್ತೆ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಫಿಲಿಪೈನ್ಸ್‌ ದೇಶದ ಬಡ ಹಾಗೂ ಸ್ಲಂ ನಿವಾಸಿಗಳು ಹೆಚ್ಚುತ್ತಿರುವ ವಿದ್ಯುತ್‌ ವೆಚ್ಚವನ್ನು ನಿಭಾಯಿಸಲು ಯಾವುದೇ ಖರ್ಚಿಲ್ಲದೆ ಬರೀ ಪ್ಲಾಸಿಕ್‌ ಬಾಟಲಿಯಿಂದ ತಯಾರಿಸಲಾದ ಈ ಸನ್‌ಲೈಟ್‌ ಪವರ್ಡ್‌ ಬಲ್ಬ್‌ಗಳನ್ನು ಮನೆಗಳಲ್ಲಿ ಬಳಸುತ್ತಾರೆ. ಈ ಲೀಟರ್ ಆಫ್ ಲೈಟ್ ಯೋಜನೆಯನ್ನು ಫಿಲಿಪೈನ್ಸ್ ಮೂಲದ ಸರ್ಕಾರೇತರ ಸಂಸ್ಥೆಯಾದ ಮೈ ಶೆಲ್ಟರ್ ಫೌಂಡೇಶನ್ ಪ್ರಾರಂಭಿಸಿತು. ಈ ಯೋಜನೆಯು ವಿದ್ಯುತ್‌ ಇಲ್ಲದ ಒಂದು ಮಿಲಿಯನ್‌ ಮನೆಗಳಿಗೆ ಬೆಳಕನ್ನು ಒದಗಿಸುವ ಗುರಿಯನ್ನು ಹೊಂದಿತ್ತು. ಹೆಚ್ಚುತ್ತಿರುವ ವಿದ್ಯುತ್‌ ವೆಚ್ಚ ಅನೇಕ ಬಡ ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಬಡ ಹಾಗೂ ವಿದ್ಯುತ್‌ ವಂಚಿತ ಜನರಿಗೆ ಬೆಳಕನ್ನು ನೀಡಬೇಕೆಂದು ಸನ್‌ಲೈಟ್‌ ಪವರ್ಡ್‌ ಬಲ್ಬ್‌ಗಳನ್ನು ಮನೆಗಳಿಗೆ ಅಳವಡಿಸುವ ಯೋಜನೆಯನ್ನು ಈ ಸಂಸ್ಥೆ ಪ್ರಾರಂಭಿಸಿತು. ಈ ಯೋಜನೆಯ ಭಾಗವಾಗಿ ಕತ್ತಲಲ್ಲಿದ್ದ ಅನೇಕ ಕುಟುಂಬಗಳು ಬೆಳಕನ್ನು ಕಂಡಿವೆ.

ಇದನ್ನೂ ಓದಿ
ಕೃಷ್ಣ ಸುಂದರಿʼಯ ಮದುವೆಯ ಫೋಟೋ ಝಲಕ್‌ ನೋಡಿ
ಐಸ್‌ಕ್ರೀಂ ತಿಂದ ತಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಗ
ಪ್ರೀತಿಯಲ್ಲಿ ಮೋಸ, ಅಶಾಂತಿ ಎಲ್ಲಾ ಸಮಸ್ಯೆಗಳಿಗೂ ಚಹಾ ಒಂದೇ ಪರಿಹಾರ
ಸ್ಲಿಮ್‌ ಆಗಿ ಕಾಣಲು ತೂಕ ಇಳಿಸಿಕೊಳ್ಳುವ ಭರದಲ್ಲಿ ಯುವತಿಯ ಪ್ರಾಣವೇ ಹೋಯ್ತು

ಇದನ್ನೂ ಓದಿ: ಸರ್ಕಾರಿ ಕೆಲಸಕ್ಕಾಗಿ ಗಂಡನನ್ನೇ ಕೊಂದ ಹೆಂಡತಿ; ಪೊಲೀಸ್‌ ತನಿಖೆಯಲ್ಲಿ ಕೊಲೆ ರಹಸ್ಯ ಬಯಲು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ:

ಸನ್‌ಲೈಟ್‌ ಪವರ್ಡ್‌ ಬಲ್ಬ್‌ಗಳು ಸೂರ್ಯನ ಬೆಳಕಿನಿಂದ ಚಾರ್ಜ್‌ ಮಾಡಲಾದ ಬಲ್ಬ್‌ಗಳಾಗಿವೆ. ಇದಕ್ಕೆ ಹೆಚ್ಚಿನ ಖರ್ಚಿಲ್ಲ. ಹಳೆಯ ಪ್ಲಾಸ್ಟಿಕ್‌ ಬಾಟಲಿಯಿಂದ ಈ ಬಲ್ಬ್‌ಗಳನ್ನು ತಯಾರಿಸಲಾಗುತ್ತದೆ. ಈ ಪ್ಲಾಸ್ಟಿಕ್‌ ಬಾಟಲಿಗಳಿಗೆ ನೀರು ತುಂಬಿಸಿ ಹಾಗೂ ಅದು ಪಾಚಿ ಹಿಡಿಯದಂತೆ ಅದಕ್ಕೆ ಒಂದಷ್ಟು ಬ್ಲೀಚಿಂಗ್‌ ಪೌಡರ್‌ ಸೇರಿಸಿ, ಮನೆಯ ಛಾವಣಿಯಲ್ಲಿ ರಂಧ್ರ ಮಾಡಿ ಅಳವಡಿಸಲಾಗುತ್ತದೆ. ಹೀಗೆ ಸೂರ್ಯನ ಬೆಳಕಿನಿಂದ ಚಾರ್ಜ್‌ ಆದ ಈ ಬಲ್ಬ್‌ 55W ಗೆ ಸಮಾನವಾದ ಬೆಳಕನ್ನು ಕೋಣೆಗೆ ನೀಡುತ್ತದೆ.ಈ ಸುಲಭ ತಂತ್ರಜ್ಞಾನ ಫಿಲಿಫೈನ್ಸ್‌, ಆಫ್ರಿಕಾ ಸೇರಿದಂತೆ ಇನ್ನೂ ಹೆಚ್ಚಿನ ಕಡೆಯ ಬಡ ಜನರಿಗೆ ಉಪಯೋಗವಾಗಿದೆ. ಈ ಕುರಿತ ವಿಡಿಯೋವನ್ನು Interesting STEM ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು, ಈ ಒಂದು ಸುಲಭ ತಂತ್ರಜ್ಞಾನಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ