
ರಾಜಸ್ಥಾನ, ಜುಲೈ, 12: ದುಬಾರಿ ಬೆಲೆಯ ಐಫೋನ್ (iPhone) ಎಂದ್ರೆ ಯುವಕರಿಗಂತೂ ಪಂಚ ಪ್ರಾಣ. ಹಣ ಇಲ್ಲದಿದ್ರೆ ಏನಂತೆ ಸಾಲ ಮಾಡಿಯಾದ್ರೂ ಈ ದುಬಾರಿ ಫೋನ್ ಖರೀದಿಸುವವರಿದ್ದಾರೆ. ಹೀಗೆ ಅದೆಷ್ಟೋ ಜನ ಈಎಮ್‌ಐ ಮೂಲಕ ಐಫೋನ್ ಖರೀದಿಸಿದ್ದಾರೆ. ಹೀಗಿರುವಾಗ ಈ ದುಬಾರಿ ಫೋನ್ ಕಳೆದು ಹೋದ್ರೆ ಜೀವವೇ ಹೋದಂತಾಗುತ್ತದೆ ಅಲ್ವಾ. ಇಂತಹದ್ದೇ ಹೃದಯ ವಿದ್ರಾವಕ ಘಟನೆಯೊಂದು ಜೈಪುರದಲ್ಲಿ (Jaipur) ನಡೆದಿದ್ದು, ಐಫೋನ್ ಕಳೆದು ಹೋಯ್ತೆಂದು ಯುವಕನೊಬ್ಬ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಹೌದು ರಸ್ತೆಯಲ್ಲಿ ಮಳೆ ನೀರು ನಿಂತ ಪರಿಣಾಮ ದಾರಿ ಕಾಣದೆ ಆಕ್ಟಿವಾದಲ್ಲಿ ಹೋಗುತ್ತಿದ್ದ ಆ ಯುವಕ ರಸ್ತೆ ಗುಂಡಿಗೆ ಬಿದ್ದಿದ್ದಾನೆ. ಜೊತೆಗೆ ಆತನ ಮೊಬೈಲ್ ನೀರಲ್ಲಿ ಕಳೆದು ಹೋಗಿದ್ದು, ಎಷ್ಟೇ ಹುಡುಕಿದರೂ ಮೊಬೈಲ್ ಸಿಗದೇ ಹೋದಾಗ ಬೇಸರಗೊಂಡ ಯುವಕ ಕಣ್ಣೀರು ಸುರಿಸಿದ್ದಾನೆ. ಈ ದೃಶ್ಯ ಇದೀಗ ವೈರಲ್ ಆಗುತ್ತಿದೆ.
ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಫೋನ್ ನೀರಲ್ಲಿ ಹೋಯ್ತು ಎಂದು ಯುವಕನೊಬ್ಬ ಅತ್ತಿದ್ದಾನೆ. ರಸ್ತೆಯಲ್ಲಿ ನೀರು ತುಂಬಿದ್ದ ಕಾರಣ ಆ ಯುವಕನ ಆಕ್ಟಿವಾ ರಸ್ತೆ ಗುಂಡಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಆತನ ಜೋಬಿನಲ್ಲಿದ್ದ ಮೊಬೈಲ್ ನೀರಿಗೆ ಬಿದ್ದಿದೆ. ಕಷ್ಟಪಟ್ಟು ಖರೀದಿಸಿದ್ದ ಮೊಬೈಲ್ ಹೋಯ್ತಲ್ಲ ಎಂದು ಆ ಯುವಕ ರಸ್ತೆ ಮಧ್ಯದಲ್ಲೇ ನಿಂತು ಗಳಗಳನೆ ಕಣ್ಣೀರು ಸುರಿಸಿದ್ದಾನೆ.
ವರದಿಗಳ ಪ್ರಕಾರ, “ಹಲ್ದಾರ್ ಎಂಬ ಯುವಕ ತನ್ನ ಆಕ್ಟಿವಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಆತನ ಮೊಬೈಲ್ ರಸ್ತೆಯಲ್ಲಿ ನಿಂತ ನೀರಿಗೆ ಬಿದ್ದಿದೆ. ಎಷ್ಟೇ ಹುಡುಕಿದರೂ ಫೋನ್ ಸಿಗದೇ ಹೋದಾಗ ಆತ ಹತಾಶನಾಗಿ ಕಣ್ಣೀರು ಸುರಿಸಿದ್ದು, ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಜನ ಪಾಪ ಪರದಾಡಬೇಕಿದೆ ಎಂದು ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.
Guy breaking down in tears after his mobile phone reportedly slipped into rainwater in Jaipur.
pic.twitter.com/JBx0dwQziw— Ghar Ke Kalesh (@gharkekalesh) July 10, 2025
Ghar Ke Kalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ರಸ್ತೆಯಲ್ಲಿ ನಿಂತ ಮಳೆ ನೀರಲ್ಲಿ ತನ್ನ ಫೋನ್‌ಗಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯವನ್ನು ಕಾಣಹುದು. ಎಷ್ಟೇ ಹುಡುಕಿದರೂ ಫೋನ್ ಸಿಗದೇ ಹೋದಾಗ, ಅಯ್ಯೋ ನನ್ನ ಫೋನ್ ಹೋಯ್ತು, ನಾನು ಏನ್ ಮಾಡ್ಲಿ ಈಗ ಎಂದು ಅಲ್ಲೇ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
ಇದನ್ನೂ ಓದಿ: ನೋ ಮೋರ್ ಬ್ಯಾಕ್ ಬೆಂಚರ್ಸ್; ಸಿನಿಮಾದಿಂದ ಪ್ರೇರಣೆ ಪಡೆದು ಹೊಸ ಆಸನ ವ್ಯವಸ್ಥೆಯನ್ನು ಅಳವಡಿಸಿಕೊಂಡ ಕೇರಳದ ಶಾಲೆಗಳು
ಜುಲೈ 10 ರಂದು ಶೇರ್ ಮಾಡಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಮೂಲ್ಯ ವಸ್ತುಗಳು ಕಳೆದು ಹೋದ್ರೆ ಎಷ್ಟು ನೋವಾಗುತ್ತೆ ಎಂದು ನನಗೂ ತಿಳಿದಿದೆ. ಈ ಭ್ರಷ್ಟ ನಾಯಕರು ಹಾಗೂ ಕಳಪೆ ವ್ಯವಸ್ಥೆಯಿಂದ ಜನಸಾಮಾನ್ಯರು ನೋವು ಅನುಭವಿಸುವಂತಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಮಾಯಕರು ಈ ರೀತಿ ರಸ್ತೆ ಮಧ್ಯೆ ನಿಂತು ಅಳುವುದಕ್ಕೆ ನಾವು ಇಷ್ಟೊಂದೆಲ್ಲಾ ತೆರಿಗೆ ಪಾವತಿ ಮಾಡುತ್ತಿದ್ದೇವೆʼ ಎಂದು ವ್ಯವಸ್ಥೆಯ ಬಗ್ಗೆ ಟೀಕಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ