ಮಗುವನ್ನು ಟ್ರಾಲಿ ಬ್ಯಾಗ್​ನಲ್ಲಿರಿಸಿ 118 ಕಿ.ಮೀ ಪಾದಯಾತ್ರೆ ಹೊರಟ ದಂಪತಿ

ಮದುವೆಯಾಗಿ 12 ವರ್ಷಗಳ ಬಳಿಕ ಮನೆಯಲ್ಲಿ ಮಗುವಿನ ನಗು ಪ್ರತಿಧ್ವನಿಸಿದಾಗ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ. ಆಸೆ ಈಡೇರಿದ್ದು, ಮೊದಲೇ ಬೇಡಿಕೊಂಡಂತೆ ದೇವಸ್ಥಾನವೊಂದಕ್ಕೆ ದಂಪತಿ ಕಾಲ್ನಡಿಗೆಯಲ್ಲೇ ಪಯಣಿಸಿದ್ದಾರೆ. ಮಗುವನ್ನು ಟ್ರಾಲಿ ಬ್ಯಾಗ್​ಗೆ ಹಾಕಿ ಎಳೆದುಕೊಂಡು 118 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ.

ಮಗುವನ್ನು ಟ್ರಾಲಿ ಬ್ಯಾಗ್​ನಲ್ಲಿರಿಸಿ 118 ಕಿ.ಮೀ ಪಾದಯಾತ್ರೆ ಹೊರಟ ದಂಪತಿ
ಮಗು

Updated on: Oct 08, 2024 | 9:01 AM

ಮದುವೆಯಾಗಿ 12 ವರ್ಷಗಳ ಬಳಿಕ ಮನೆಯಲ್ಲಿ ಮಗುವಿನ ನಗು ಪ್ರತಿಧ್ವನಿಸಿದಾಗ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ. ಆಸೆ ಈಡೇರಿದ್ದು, ಮೊದಲೇ ಬೇಡಿಕೊಂಡಂತೆ ದೇವಸ್ಥಾನವೊಂದಕ್ಕೆ ದಂಪತಿ ಕಾಲ್ನಡಿಗೆಯಲ್ಲೇ ಪಯಣಿಸಿದ್ದಾರೆ. ಮಗುವನ್ನು ಟ್ರಾಲಿ ಬ್ಯಾಗ್​ಗೆ ಹಾಕಿ ಎಳೆದುಕೊಂಡು 118 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ.

ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ, ಬಿಲ್ವಾರಾ-ಕೋಟಾ ಹೆದ್ದಾರಿಯಲ್ಲಿ ಟ್ರಾಲಿ ಬ್ಯಾಗ್​ನಲ್ಲಿ ಮಗುವನ್ನು ನೋಡಿದ ಜನರು ಆಶ್ಚರ್ಯಚಕಿತರಾದರು.

ಮಾಹಿತಿ ಪ್ರಕಾರ ಜಿಲ್ಲೆಯ ಬಾಗೂರು ಬಳಿ ವಾಸವಿದ್ದ ದಂಪತಿ ಹನ್ನೆರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಮಗುವಾಗಿರಲಿಲ್ಲ. ಜೋಗನಿಯ ಮಾತೆಗೆ ಹರಕೆ ಕಟ್ಟಿಕೊಂಡಿದ್ದರು.

ಮಗು ಜನಿಸಿತು ಮತ್ತು ಅವರ ಆಸೆ ಈಡೇರಿದ ನಂತರ, ಅವರು ತಾಯಿಯ ಆಶೀರ್ವಾದ ಪಡೆಯಲು ನವರಾತ್ರಿಯಲ್ಲಿ ಕಾಲ್ನಡಿಗೆಯಲ್ಲಿ ಹೋಗಲು ನಿರ್ಧರಿಸಿದರು. ಮಗು ತುಂಬಾ ಚಿಕ್ಕದಾಗಿದೆ, ಅವನು ತನ್ನ ತಾಯಿ ಇಲ್ಲದೆ ಇರುವುದಿಲ್ಲ ಹಾಗಾಗಿ ಮಗುವನ್ನು ಕರೆದುಕೊಂಡು ಹೋಗಲು ಪ್ಲ್ಯಾನ್ ಮಾಡಿ ಟ್ರಾಲಿ ಬ್ಯಾಗ್​ನಲ್ಲಿ ಹಾಕಿದ್ದರು.

ಮತ್ತಷ್ಟು ಓದಿ:
ಸಾಮೂಹಿಕ ವಿವಾಹವಾದ್ರೆ ಹಣ ಸಿಗುತ್ತೆ ಎಂದು ಅಣ್ಣ, ತಂಗಿಯೇ ಮದುವೆಯಾದ್ರು

ಜೋಗನಿಯಾ ಮಾತಾ ಬಾಗೋರ್‌ನಿಂದ 118 ಕಿಲೋಮೀಟರ್ ದೂರದಲ್ಲಿದೆ. ಶನಿವಾರ ಸಂಜೆ ದಂಪತಿಗಳು ಬಾಗೋರಿನಿಂದ ಹೊರಟರು. ಭಾನುವಾರ ಬೆಳಗ್ಗೆ ಭಿಲ್ವಾರಾ ತಲುಪಿದ್ದಾರೆ. ಸೋಮವಾರ ಸಂಜೆ ಜೋಗನಿಯಾ ಮಾತೆಯನ್ನು ತಲುಪಲಿದ್ದಾರೆ. ಪಾದಯಾತ್ರೆ ವೇಳೆ ಚಪ್ಪಲಿ, ಶೂ ಧರಿಸಿರಲಿಲ್ಲ. ಅವರು ಬರಿಗಾಲಿನಲ್ಲಿ ಮಾತೆಯ ಆಸ್ಥಾನಕ್ಕೆ ಹೋಗಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us