Viral: ಮುಸ್ಲಿಂ ಗೆಳತಿಯ ಜೊತೆ ರಂಜಾನ್‌ ಉಪವಾಸ ಆಚರಿಸಿದ ಹಿಂದೂ ಯುವತಿ; ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 26, 2025 | 10:19 AM

ರಂಜಾನ್‌ ತಿಂಗಳಲ್ಲಿ ಮುಸಲ್ಮಾನರು ಒಂದು ತಿಂಗಳ ಉಪವಾಸ (ರೋಜಾ) ಆಚರಿಸುತ್ತಾರೆ. ಇದೀಗ ರಂಜಾನ್‌ ತಿಂಗಳು ನಡೆಯುತ್ತಿದ್ದು, ಮುಸ್ಲಿಮರೆಲ್ಲರೂ ಕಟ್ಟುನಿಟ್ಟಾಗಿ ಉಪವಾಸ ಆಚರಿಸುತ್ತಾರೆ. ಇದೀಗ ಈ ಉಪವಾಸದ ಅನುಭವವನ್ನು ಪಡೆಯಲು ಹಿಂದೂ ಯುವತಿಯೊಬ್ಬಳು ತನ್ನ ಮುಸ್ಲಿಂ ಗೆಳತಿಯೊಂದಿಗೆ ಒಂದು ದಿನದ ಮಟ್ಟಿಗೆ ರಂಜಾನ್‌ ಉಪವಾಸವನ್ನು ಆಚರಿಸಿದ್ದಾಳೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗಿತ್ತಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ಭಾರೀ ಜೋರಾಗಿ ನಡಿತಿದೆ.

Viral: ಮುಸ್ಲಿಂ ಗೆಳತಿಯ ಜೊತೆ ರಂಜಾನ್‌ ಉಪವಾಸ ಆಚರಿಸಿದ ಹಿಂದೂ ಯುವತಿ; ವಿಡಿಯೋ ವೈರಲ್‌
ವೈರಲ್​​ ವಿಡಿಯೋ
Follow us on

ಮುಸ್ಲಿಮರ (Muslims) ಪಾಲಿಗೆ ರಂಜಾನ್‌ (Ramdan) ತಿಂಗಳು ಅತಿ ಪವಿತ್ರವಾದ ಮಾಸವಾಗಿದೆ. ಈ ತಿಂಗಳಲ್ಲಿ ಮುಸ್ಲಿಮರು ಕಡ್ಡಾಯವಾಗಿ ಉಪವಾಸ (fasting) ಆಚರಿಸುತ್ತಾರೆ. ಸೂರ್ಯೋದಯದಿಂದ ಸೂರ್ಯಸ್ತದವರೆಗೂ ಉಪವಾಸವಿದ್ದು, ಸೂರ್ಯಾಸ್ತದ ಬಳಿಕ ಖರ್ಜೂರ ಸೇವಿಸುವ ಮೂಲಕ ರೋಜಾ (Roza) ಪೂರ್ಣಗೊಳಿಸುತ್ತಾರೆ. ಈ ಉಪವಾಸ ಹೇಗಿರುತ್ತೆ ಎಂಬ ಅನುಭವವನ್ನು ಪಡೆಯಲು ಹಿಂದೂ ಯುವತಿಯೊಬ್ಬಳು (Hindu girl) ತನ್ನ ಮುಸ್ಲಿಂ ಗೆಳತಿಯೊಂದಿಗೆ ಒಂದು ದಿನದ ಮಟ್ಟಿಗೆ ರಂಜಾನ್‌ ಉಪವಾಸವನ್ನು ಆಚರಿಸಿದ್ದಾಳೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗಿತ್ತಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ಭಾರೀ ಜೋರಾಗಿ ನಡಿತಿದೆ.

ಸುಮಾರು ಮೂರು ವರ್ಷಗಳಿಂದ ತನ್ನ ಮುಸ್ಲಿಂ ಸ್ನೇಹಿತೆ ರಂಜಾನ್‌ ತಿಂಗಳಲ್ಲಿ ಉಪವಾಸ ಆಚರಿಸುವುದನ್ನು ಕಂಡ ಹಿಂದೂ ಯುವತಿ ಇದರ ಅನುಭವವನ್ನು ನಾವು ಪಡೆಯಬೇಕೆಂದು ಒಂದು ದಿನದ ಮಟ್ಟಿಗೆ ಉಪವಾಸವನ್ನು ಆಚರಿಸಿದ್ದಾಳೆ. ಈ ಒಂದು ದಿನದ ರೋಜಾ ಅನುಭವ ತುಂಬಾನೇ ಚೆನ್ನಾಗಿತ್ತು ಎಂದು ಆಕೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ವೈರಲ್​​ ವಿಡಿಯೋ ಇಲ್ಲಿದ ನೋಡಿ:

ಸುಹಾನಾ (suha_hana88) ಎಂಬ ಯುವತಿ ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಒಂದು ತಿಂಗಳ ಕಾಲ ಉಪವಾಸ ಮಾಡುವವರಿಗೆ ವಂದನೆಗಳು ಮತ್ತು ದಯವಿಟ್ಟು ನಾನು ಮಾಡಿದ ಉಪವಾಸ ಕ್ರಮದಲ್ಲಿ ತಪ್ಪಿದ್ದರೆ ನನ್ನನ್ನು ಕ್ಷಮಿಸಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾಳೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಆ ಯುವತಿ ನಾನು ಮುಸ್ಲಿಂ ಅಲ್ಲ ಆದ್ರೆ ನಾನು ರಂಜಾನ್‌ ಉಪವಾಸವನ್ನು ಆಚರಿಸುತ್ತಿದ್ದೇನೆ ಎಂದು ಹೇಳಿ ಮುಂಜಾನೆ ಬೇಗ ಎದ್ದು ಏನು ತಿಂದೆ, ಉಪವಾಸದ ದಿನ ಏನೆಲ್ಲಾ ಮಾಡಿದೆ ಎಂಬುದನ್ನು ಹೇಳಿರುವ ದೃಶ್ಯವನ್ನು ಕಾಣಬಹುದು. ಜೊತೆಗೆ ಆಕೆ ತನ್ನ ಮುಸ್ಲಿಂ ಸ್ನೇಹಿತೆಯ ಮನೆಯಲ್ಲಿ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ ಸುಂದರ ಅನುಭವವನ್ನು ಕೂಡಾ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ನಲ್ಲಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಯುಟ್ಯೂಬರ್‌

ನಾಲ್ಕು ದಿನಗಳ ಹಿಂದೆ ಶೇರ್‌ ಮಾಡಲಾದ ಈ ವಿಡಿಯೋ 5.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಜಾತ್ಯಾತೀತತೆಯ ಉತ್ತಮ ಉದಾಹರಣೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಕೂಡಾ ಹಿಂದೂ, ನಾನು ಕೂಡಾ ರಂಜಾನ್‌ ಉಪವಾಸ ಆಚರಿಸಿದ್ದೆʼ ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನವರಾತ್ರಿಯ ಸಂದರ್ಭದಲ್ಲಿ ನಿಮ್ಮ ಮುಸ್ಲಿಂ ಗೆಳತಿಗೂ ಉಪವಾಸ ಮಾಡುವಂತೆ ಹೇಳಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬರು ʼನಿಮ್ಮ ಸ್ನೇಹಿತೆ ಕೂಡಾ ಶಿವರಾತ್ರಿ ಮತ್ತು ನವರಾತ್ರಿಯಲ್ಲಿ ಉಪವಾಸ ಮಾಡಿದರೆ ಅದು ನಿಜವಾದ ಜಾತ್ಯಾತೀತತೆʼ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:18 am, Wed, 26 March 25