ರ‍್ಯಾಂಪ್ ವಾಕ್ ಮಾಡುವಾಗ ಮಾಡೆಲ್‌ಗಳು ನಗುವುದಿಲ್ಲ, ಯಾಕೆ ಗೊತ್ತಾ?

ಫ್ಯಾಷನ್ ಜಗತ್ತೇ ಹಾಗೆ, ಎಲ್ಲರನ್ನು ತನ್ನತ್ತ ಸುಲಭವಾಗಿ ಸೆಳೆಯುತ್ತದೆ. ಹಾಗಂತ ಎಲ್ಲರೂ ಮಾಡೆಲ್‌ಗಳಾಗಿ ಫ್ಯಾಷನ್ ಲೋಕದಲ್ಲಿ ಮಿಂಚಲು ಸಾಧ್ಯವಿಲ್ಲ. ಹೌದು, ವೇದಿಕೆಯ ಮೇಲೆ ಮಾಡೆಲ್‌ಗಳು ರ‍್ಯಾಂಪ್‌ ವಾಕ್ ಮಾಡುವುದನ್ನು ನೀವು ನೋಡಿರಬಹುದು. ಆತ್ಮವಿಶ್ವಾಸದ ನಡಿಗೆಯೊಂದಿಗೆ ಬಹಳ ಗಂಭೀರವಾಗಿರುತ್ತಾರೆ. ಹೌದು, ರ‍್ಯಾಂಪ್‌ ವಾಕ್ ವೇಳೆ ಈ ಮಾಡೆಲ್‌ಗಳು ನಗುವುದನ್ನು ನೀವು ನೋಡಿರಲು ಸಾಧ್ಯವೇ ಇಲ್ಲ. ಆದರೆ ಈ ಮಾಡೆಲ್‌ಗಳು ಯಾವುದೇ ಕಾರಣಕ್ಕೂ ನಗುವುದೇ ಇಲ್ಲ. ಇದರ ಹಿಂದಿನ ಕಾರಣವೇನು ಗೊತ್ತಾ? ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ರ‍್ಯಾಂಪ್ ವಾಕ್ ಮಾಡುವಾಗ ಮಾಡೆಲ್‌ಗಳು ನಗುವುದಿಲ್ಲ, ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Vishal Bhatnagar/NurPhoto via Getty Images

Updated on: Jul 06, 2025 | 6:43 PM

ಮಾಡೆಲ್‌ಗಳೆಂದರೆ (models) ಮೊದಲು ನೆನಪಿಗೆ ಬರುವುದೇ ಅವರ ಉಡುಗೆ ತೊಡುಗೆಗಳು ಹಾಗೂ ಕೇಶ ವಿನ್ಯಾಸ. ಫ್ಯಾಷನ್ ಶೋನಲ್ಲಿ ಮಾಡೆಲ್‌ಗಳು ತೊಟ್ಟ ಉಡುಗೆಯನ್ನು ಕಂಡಾಗ ಕೆಲವೊಮ್ಮೆ ನಗು ಕೂಡ ಬರುತ್ತದೆ. ಇದ್ಯಾವುದು ಹೊಸ ಪ್ಯಾಷನ್‌ ಎಂದು ಮನಸ್ಸಲ್ಲಿಯೇ ಅಂದುಕೊಳ್ಳುತ್ತೇವೆ. ಆದರೆ ಇವರುಗಳು ಸ್ಟೈಲಿಶ್ ಉಡುಗೆಯನ್ನು ತೊಟ್ಟು ವೇದಿಕೆ ಮೇಲೆ ರ‍್ಯಾಂಪ್ ವಾಕ್ ಮಾಡುತ್ತಿದ್ದರೆ ನೋಡಲು ಎರಡು ಕಣ್ಣು ಸಾಲದು. ಹೌದು, ಪ್ರತಿಯೊಂದು ಹೆಜ್ಜೆಯಲ್ಲಿಯೂ ಆತ್ಮವಿಶ್ವಾಸ ಮುಖವು ಅಷ್ಟೇ ಗಂಭೀರ. ಈ ಮಾಡೆಲ್‌ಗಳು ರ‍್ಯಾಂಪ್ ವಾಕ್ (ramp walk) ಮಾಡುವಾಗ ಸ್ವಲ್ಪ ಕೂಡ ನಗುವುದಿಲ್ಲ. ಯಾಕೆ ಹೀಗೆ? ಈ ಬಗ್ಗೆ ನೀವು ಎಂದಾದರೂ ಯೋಚನೆ ಮಾಡಿದ್ದೀರಾ? ಆದರೆ ನಾವು ಇವತ್ತು ನಿಮಗೆ ಈ ಬಗೆಗಿನ ಕುತೂಹಲಕಾರಿ ವಿಷಯಗಳನ್ನು ತಿಳಿಸುತ್ತೇವೆ.

ರ‍್ಯಾಂಪ್ ವಾಕ್ ಮಾಡುವಾಗ ಮಾಡೆಲ್‌ಗಳು ನಗದಿರಲು ಮುಖ್ಯ ಕಾರಣಗಳಲ್ಲಿ ಇದು ಕೂಡ ಒಂದು. ಸಾಮಾನ್ಯವಾಗಿ ಮಾಡೆಲ್‌ಗಳು ಹೊಸ ಟ್ರೆಂಡ್‌ಗಳನ್ನು ಹೊಂದಿರುತ್ತಾರೆ. ಇವರು ಧರಿಸುವ ಉಡುಗೆಗಳು ವಿಭಿನ್ನವಾಗಿರುತ್ತದೆ. ಇಂತಹ ಬಟ್ಟೆಯ ವಿನ್ಯಾಸವನ್ನು ಇದುವರೆಗೆ ನೀವು ನೋಡಿರುವುದೇ ಇಲ್ಲ. ಕೇಶ ವಿನ್ಯಾಸವು ಅಷ್ಟೇ ವಿಭಿನ್ನ ಹಾಗೂ ಆಕರ್ಷಕವಾಗಿರುತ್ತದೆ. ರ‍್ಯಾಂಪ್ ವಾಕ್ ಮಾಡುವಾಗ ನಕ್ಕರೆ ಪ್ರೇಕ್ಷಕರ ಗಮನ ಮಾಡೆಲ್‌ಗಳ ಮುಖದ ಮೇಲೆ ಕೇಂದ್ರೀಕೃತವಾಗುತ್ತದೆ. ಈ ವೇಳೆಯಲ್ಲಿ ಪ್ರೇಕ್ಷಕರು ಮಾಡೆಲ್‌ಗಳು ಧರಿಸುವ ಬಟ್ಟೆ ಹಾಗೂ ಕೇಶವಿನ್ಯಾಸವನ್ನು ನೋಡದೇ ಇರಬಹುದು. ಹೀಗಾಗಿ ತಮ್ಮ ಬಟ್ಟೆಗಳ ಕಡೆ ಎಲ್ಲರ ಗಮನ ಸೆಳೆಯಲು ಮಾಡೆಲ್‌ಗಳು ಗಂಭೀರವಾಗಿಯೇ ಇರುತ್ತಾರಂತೆ.

ಇದನ್ನೂ ಓದಿ : Video : ತರಗತಿಯಲ್ಲಿ ಕಣ್ಮನ ಸೆಳೆದ ಪುಟಾಣಿಗಳ ರ‍್ಯಾಂಪ್ ವಾಕ್

ಇದನ್ನೂ ಓದಿ
ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಸ್ನೇಹಿತರೊಂದಿಗೆ ನೀರಿನಲ್ಲಿ ಆಡುತ್ತಿರುವಾಗ ಯುವಕನ ಮೇಲೆ ದಾಳಿ ಮಾಡಿದ ಹಾವು
ಭಾರತದ ಈ ವಿಚಾರಗಳು ರಷ್ಯಾದ ಮಹಿಳೆಗೆ ಇಷ್ಟವಂತೆ

ಯಾರೇ ಆಗಿರಲಿ ನಗುವ ಮುಖ ಹೊಂದಿದ್ದರೆ ಅವರು ಮಾತನಾಡಲು ಸಿದ್ಧವಿದ್ದಾರೆ ಎನ್ನುವುದು ಸೂಚಿಸುತ್ತದೆ. ಒಬ್ಬ ವ್ಯಕ್ತಿ ಯಾರ ಮುಂದೆಯಾದ್ರೂ ನಕ್ಕರೆ ಸಹಜವಾಗಿ ಎದುರಿಗಿರುವ ವ್ಯಕ್ತಿಯೂ ನಗುವುದಕ್ಕೆ ಮುಂದಾಗುತ್ತಾರೆ, ಇಲ್ಲವಾದರೆ ಮಾತಿಗಿಳಿಯುತ್ತಾರೆ. ಇದು ಸಮಾನತೆಯ ಭಾವವನ್ನು ಉಂಟು ಮಾಡುತ್ತದೆ. ಆದರೆ ತಾವು ಎಲ್ಲರಿಗಿಂತ ಭಿನ್ನ ಎನ್ನುವುದನ್ನು ತಿಳಿಸಲು ಮಾಡೆಲ್‌ಗಳು ರ‍್ಯಾಂಪ್ ವಾಕ್ ಮಾಡುವಾಗ ನಗುವುದಿಲ್ಲಎನ್ನಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ