ಸಾಮಾನ್ಯವಾಗಿ ಸಾಕಷ್ಟು ಜನರು ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರ ಬಳಿ ಹೋಗದೆ ನೇರವಾಗಿ ಮೆಡಿಕಲ್ ಸ್ಟೋರ್‌ಗೆ ಹೋಗಿ ಮಾತ್ರೆಗಳನ್ನು ಖರೀದಿಸುತ್ತಾರೆ. ಕೆಲವೊಮ್ಮೆ ಈ ಮಾತ್ರೆಗಳು ನಿಮ್ಮ ಸಮಸ್ಯೆಯನ್ನು ಗುಣಪಡಿಸಿದರೂ ಸಹ, ಕೆಲವೊಮ್ಮೆ ಇದರಿಂದ ಗಂಭೀರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ತಕ್ಷಣಕ್ಕೆ ನೋವಿನಿಂದ ಪರಿಹಾರ ನೀಡಬಲ್ಲ ಪೈನ್ ಕಿಲ್ಲರ್, ಆ್ಯಂಟಿ ಬಯೋಟಿಕ್ಗಳಂತಹ ಮಾತ್ರೆಗಳನ್ನು ಖರೀದಿಸುವಾಗ ಮಾತ್ರೆಗಳ ಪ್ಯಾಕೆಟ್ ಮೇಲೆ ಕೆಂಪು ಬಣ್ಣದ ದಪ್ಪ ಗೆರೆಗಳನ್ನು ನೀವು ಗಮನಿಸಿರುತ್ತೀರಿ. ಆದರೆ ಈ ಗೆರೆಯ ಅರ್ಥವೇನು ಎಂದು ನಿಮಗೆ ತಿಳಿದಿದೆಯೇ?
ವಾಸ್ತವವಾಗಿ, ಮಾತ್ರೆಗಳ ಪ್ಯಾಕೆಟ್ ಮೇಲಿನ ಕೆಂಪು ಗೆರೆ ಅರ್ಥವೆನೇಂದರೆ ‘ಮಾತ್ರೆಯನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಲಾಗುವುದಿಲ್ಲ ಅಥವಾ ವೈದ್ಯರ ಸಲಹೆಯಿಲ್ಲದೆ ಬಳಸಲಾಗುವುದಿಲ್ಲ’ ಎಂಬ ಅರ್ಥವನ್ನು ನೀಡುತ್ತದೆ. ಆದ್ದರಿಂದ ಪ್ರತಿಜೀವಕಗಳ ದುರುಪಯೋಗವನ್ನು ತಡೆಗಟ್ಟಲು, ಔಷಧಿಗಳ ಮೇಲೆ ಕೆಂಪು ಗೆರೆಯನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯವು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ.
Medicines, especially antibiotics that have a red vertical line on the packaging, should never be consumed without consulting a qualified doctor. Be aware, Be safe. #AntibioticResistance #ReadTheRed pic.twitter.com/D9LBSLJ6PN
— Ministry of Health (@MoHFW_INDIA) March 11, 2024
ಇದನ್ನೂ ಓದಿ: ಮಾತ್ರೆಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಏಕೆ ಪ್ಯಾಕ್ ಮಾಡಲಾಗುತ್ತದೆ ಎಂದು ತಿಳಿದಿದೆಯೇ?
ಕೆಂಪು ಗೆರೆಯ ಹೊರತಾಗಿ, ಔಷಧದ ಮೇಲೆ ಬರೆಯಲಾದ ಅನೇಕ ಉಪಯುಕ್ತ ವಿಷಯಗಳಿವೆ, ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಕೆಲವು ಔಷಧಿಗಳ ಪ್ಯಾಕೇಟ್ ಮೇಲೆ Rx ಎಂದು ಬರೆಯಲಾಗಿದೆ, ಅಂದರೆ ಔಷಧಿಯನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು. ಇದಲ್ಲದೆ ಕೆಲವು ಔಷಧಿಗಳ ಪ್ಯಾಕೆಟ್ ಮೇಲೆ XRx ಎಂದು ಬರೆಯಲಾಗಿದೆ ಮತ್ತು ಇದರರ್ಥ ಔಷಧಿಯನ್ನು ವೈದ್ಯರಿಂದ ಮಾತ್ರ ತೆಗೆದುಕೊಳ್ಳಬಹುದು. ವೈದ್ಯರು ಈ ಔಷಧಿಯನ್ನು ನೇರವಾಗಿ ರೋಗಿಗೆ ನೀಡಬಹುದು. ವೈದ್ಯರು ಬರೆದ ಪ್ರಿಸ್ಕ್ರಿಪ್ಷನ್ ಇದ್ದರೂ ರೋಗಿಯು ಅದನ್ನು ಯಾವುದೇ ಮೆಡಿಕಲ್ ಸ್ಟೋರ್‌ನಿಂದ ಖರೀದಿಸಲು ಸಾಧ್ಯವಿಲ್ಲ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Tue, 12 March 24