ಇದು ಜನರೇಷನ್ ಝೆಡ್ ಡೇಟಿಂಗ್ ಎಫೆಕ್ಟ್; ಪ್ರೀತಿ ಹೆಸರಿನಲ್ಲಿ ರಿಲೇಷನ್ಶಿಪ್‌ಗೆ ನಾನಾ ಅರ್ಥ ನೀಡಿದ್ದಾರೆ ಯುವಜನತೆ
ಇತ್ತೀಚೆಗಿನ ದಿನಗಳಲ್ಲಿ ಪ್ರೀತಿ ಹೆಸರಿನಲ್ಲಿ ಕೈಕೊಡುವುದು ಕಾಮನ್ ಆಗಿ ಬಿಟ್ಟಿದೆ. ಹೀಗಾಗಿ ಸಂಬಂಧಗಳು ಅರ್ಥವನ್ನು ಕಳೆದುಕೊಳ್ಳುತ್ತಿದೆ. ಇಂದಿನ ಯುವಜನತೆ ರಿಲೇಷನ್ಶಿಪ್ ಗಳಿಗೆ ಸಿಚುವೇಶನ್ ಶಿಪ್, ಬ್ರೆಡ್ ಕ್ರಂಬಿಂಗ್, ಘೋಸ್ಟಿಂಗ್, ಪಿಂಕ್ ಫ್ಲಾಗ್ ಹೀಗೆ ನಾನಾ ಹೆಸರನ್ನು ಕೊಟ್ಟಿದ್ದಾರೆ. ಹಾಗಾದ್ರೆ ಈ ಸಂಬಂಧಗಳ ಅರ್ಥಗಳ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಇಂದು ಯುವಜನತೆ ಸಂಬಂಧಗಳಲ್ಲಿ ಹೊಸದನ್ನು ಹುಡುಕುತ್ತಿದ್ದಾರೆ
- ಡೇಟಿಂಗ್‌ನಲ್ಲಿ ಸಂಬಂಧಗಳ ವ್ಯಾಖ್ಯಾನಗಳು ಬದಲಾಗುತ್ತಿದೆ
- ಈಗಿನ ಡೇಟಿಂಗ್‌ನಲ್ಲಿ ಸಂಬಂಧಕ್ಕೆ ಸಿಚುವೇಶನ್ ಶಿಪ್, ಬ್ರೆಡ್ ಕ್ರಂಬಿಂಗ್ ಹೀಗೆ ನಾನಾ ಅರ್ಥಗಳಿವೆ
ಯುವಜನತೆ ಡಿಜಿಟಲ್ ಮಾಧ್ಯಮಗಳಿಗೆ (Digital platform) ತೆರೆದುಕೊಳ್ಳುತ್ತಿದ್ದಂತೆ ಸಂಬಂಧಗಳನ್ನು ಹೊಸ ರೀತಿಯಲ್ಲಿ ನೋಡುತ್ತಿದ್ದಾರೆ. ಜೆನ್ ಝೆಡ್ ಡೇಟಿಂಗ್‌ನಲ್ಲಿ (Gen Z Dating) ನಾನಾ ಹೆಸರುಗಳನ್ನು ನೀಡುತ್ತಿದ್ದಾರೆ. ಆದರೆ 1990 ಹಾಗೂ 2000 ರ ದಶಕದ ಆರಂಭದಲ್ಲಿ ಡೇಟಿಂಗ್ ಅನ್ನೋದು ತುಂಬಾ ವಿಭಿನ್ನವಾಗಿತ್ತು. ಯಾರನ್ನಾದರೂ ಇಷ್ಟಪಟ್ಟರೆ ಮೊಬೈಲ್ ನಂಬರ್ ಎಕ್ಸ್ ಚೇಂಜ್ ಆಗುತ್ತಿತ್ತು. ಅಲ್ಲೇ ಪ್ರೀತಿ ಚಿಗುರೊಡೆಯುತ್ತಿತ್ತು. ಆದರೆ, ಈಗ ಡೇಟಿಂಗ್ ನಲ್ಲಿ ಸಂಬಂಧಗಳ ವ್ಯಾಖ್ಯಾನಗಳು ಬದಲಾಗುತ್ತಿದೆ. ಸಿಚುವೇಶನ್ ಶಿಪ್, ಬ್ರೆಡ್ ಕ್ರಂಬಿಂಗ್ ಹೀಗೆ ಯುವಜನತೆ ನಾನಾ ರೀತಿಯ ಹೆಸರನ್ನು ನೀಡುತ್ತಿದ್ದಾರೆ. ಇಂದಿನ ಯುವಜನರು ಬಳಸುವ ಅತ್ಯಂತ ಜನಪ್ರಿಯ ಹಾಗೂ ಟ್ರೆಂಡಿಂಗ್ ಡೇಟಿಂಗ್ ಪದಗಳು ಸಾಕಷ್ಟು ಇವೆ. ನೀವೇನಾದ್ರೂ ರಿಲೇಷನ್ಶಿಪ್‌ನಲ್ಲಿದ್ದರೆ ನಿಮ್ಮ ಸಂಬಂಧಕ್ಕೆ ಯಾವ ಅರ್ಥ ಎಂದು ತಿಳಿದುಕೊಳ್ಳಿ.
ಯುವಜನತೆ ಸಂಬಂಧಕ್ಕೆ ನೀಡಿರುವ ನಾನಾ ಅರ್ಥಗಳೇನು?
ಸಿಚುವೇಶನ್‌ಶಿಪ್: ಈ ಹೆಸರೇ ಹೇಳುವಂತೆ ಸಂದರ್ಭಕ್ಕೆ ಹುಟ್ಟಿಕೊಂಡ ಸಂಬಂಧ. ಈ ರಿಲೇಷನ್ಶಿಪ್ ಸ್ಪಷ್ಟವಾದ ಹೆಸರಿಲ್ಲ, ಇಲ್ಲಿ ಯಾವುದೇ ಬದ್ಧತೆಯಿರಲ್ಲ. ಈ ರೀತಿ ಸಂಬಂಧಗಳು ಪ್ರೀತಿಯ ರೂಪ ತಾಳಿರುವುದಿಲ್ಲ.
ಬೀಜ್ ಫ್ಲ್ಯಾಗ್: ಸಂಗಾತಿಯ ಅಥವಾ ಪಾರ್ಟ್ನರ್ ನಡವಳಿಕೆಯಲ್ಲಿ ಸದಾ ಬೇಸರವಿರುತ್ತದೆ. ಇಲ್ಲವಾದರೆ ಯಾವುದೇ ವಿಶೇಷತೆಯಿಲ್ಲದ ಅಭ್ಯಾಸಗಳಿರುತ್ತದೆ. ಇದು ರೆಡ್ ಫ್ಲ್ಯಾಗ್ ಚಿಹ್ನೆ ಅಲ್ಲದಿದ್ದರೂ ಬೋರ್ ಎನಿಸುವ ವಿಷಯವಾಗಿರುತ್ತದೆ. ಇದು ಸಂಬಂಧದಲ್ಲಿ ಆಪ್ತತೆ ಕಡಿಮೆಯಾಗಲು ಕಾರಣವಾಗಬಹುದು.
ಘೋಸ್ಟಿಂಗ್: ಇಂದಿನ ಯುವಜನತೆ ಮನಸ್ಸು ಚಂಚಲ. ಈ ರೀತಿ ಸಂಬಂಧಗಳಲ್ಲಿ ಯಾವುದೇ ಮುನ್ಸೂಚನೆ ಸ್ಪಷ್ಟನೆ ನೀಡದೆ, ಇದ್ದಕ್ಕಿದ್ದಂತೆ ಆನ್‌ಲೈನ್‌ನಲ್ಲಿ ಹುಡುಗ ಅಥವಾ ಹುಡುಗಿ ಸಂಪರ್ಕ ಕಡಿತಗೊಳಿಸಿ ದೂರ ಉಳಿಯುವುದು. ಇಂತಹ ಸಂಬಂಧಗಳು ಹಾಗೂ ವ್ಯಕ್ತಿಗಳು ನಂಬಿಕೆಗೆ ಅರ್ಹರಾಗಿರುವುದಿಲ್ಲ.
ಸಾಫ್ಟ್ ಲಾಂಚಿಂಗ್: ಸೋಶಿಯಲ್ ಮೀಡಿಯಾದಲ್ಲಿ ರಿಲೇಷನ್ ಶಿಪ್ ನಲ್ಲಿ ಇರುವ ಬಗ್ಗೆ ಸಣ್ಣಪುಟ್ಟ ಸುಳಿವನ್ನು ನೀಡುವುದು. ಹುಡುಗ ಅಥವಾ ಹುಡುಗಿ ಹೊಸ ಸಂಗಾತಿಯ ಮುಖವನ್ನು ತೋರಿಸದೆ, ಅವರ ಕೈ, ಗಡಿಯಾರ ಅಥವಾ ಜೊತೆಯಾಗಿ ಊಟ ಮಾಡುತ್ತಿರುವ ಫೋಟೋವನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಾರೆ.
ಪಿಂಕ್ ಫ್ಲಾಗ್: ಸಂಬಂಧಗಳಲ್ಲಿ ಸಮಸ್ಯೆಗಳ ಆರಂಭದ ಸೂಚನೆಯೇ ಪಿಂಕ್ ಫ್ಲಾಗ ಆಗಿರುತ್ತದೆ. ಪ್ರಾರಂಭದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಆಗಿದ್ರೂ ಮುಂದೆ ದೊಡ್ಡದಾಗುತ್ತದೆ. ಇಂತಹ ಸಂಬಂಧಗಳು ಸೇಫ್ ಅಲ್ಲ, ಯಾವಾಗ ಬೇಕಾದ್ರೂ ಮುರಿದು ಬೀಳಬಹುದು.
ರಿಜ್: ತನ್ನ ಚಾಕಚಕ್ಯತೆ ಅಥವಾ ಮಾತಿನ ಶೈಲಿಯಿಂದ ಯಾರನ್ನಾದರೂ ಆಕರ್ಷಿಸುವುದು. ಇದು ಮರಳು ಮಾಡಲು ಸಾಮರ್ಥ್ಯವಾಗಿದೆ.
ಸಾಫ್ಟ್ ಬ್ರೇಕ್: ಸಂಬಂಧದಲ್ಲಿ ಇಬ್ಬರೂ ವ್ಯಕ್ತಿಗಳ ನಡುವೆ ನಂಬಿಕೆ, ಬದ್ಧತೆ ಕಡಿಮೆ ಇರುತ್ತದೆ. ನಿಧಾನವಾಗಿ ಬ್ರೇಕಪ್ ಮಾಡಿಕೊಳ್ಳುತ್ತಾರೆ.
ಲವ್ ಬಾಂಬಿಂಗ್: ಸಂಬಂಧದಲ್ಲಿ ಹುಡುಗ ಅಥವಾ ಹುಡುಗಿ ಅತಿಯಾದ ಪ್ರೀತಿ ತೋರುವುದು. ಆದರೆ ಈ ಪ್ರೀತಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು. ತಮ್ಮ ಕೆಲಸ ಆಗುವ ತನಕ ಮಾತ್ರ ಈ ಸಂಬಂಧಗಳು ಉಳಿಯುತ್ತದೆ.
ಬ್ರೆಡ್ ಕ್ರಂಬಿಂಗ್: ಸಂಬಂಧಗಳಲ್ಲಿ ಪಾರ್ಟ್ನರ್ ಗಳು ಇಷ್ಟವಿದ್ದಂತೆ ನಟಿಸುವುದು. ಹೀಗಾಗಿ ಸಣ್ಣಪುಟ್ಟ ಸಂದೇಶ ಕಳುಹಿಸುವುದು. ಸ್ವಲ್ಪ ಗಮನ ನೀಡುವುದು. ಭೇಟಿ ಅಂತಹ ಸಂದರ್ಭದಲ್ಲಿ ಕುಂಟು ನೆಪಗಳನ್ನು ಹೇಳುವುದು. ಇಂತಹ ವ್ಯಕ್ತಿಗಳು ಸಂಬಂಧದಲ್ಲಿ ಬದ್ಧತೆ ಹೊಂದಿರುವುದಿಲ್ಲ.
ಡೆಲ್ಲುಲು: ಇಲ್ಲಿ ಸಂಬಂಧವು ಖಂಡಿತ ಯಶಸ್ವಿಯಾಗುತ್ತದೆ ಎಂದು ಅತಿಯಾದ ಆಶಾಭಾವನೆಯಿರುತ್ತದೆ. ಆದರೆ ಈ ಭಾವನೆ ಸತ್ಯಗಳಿಗೆ ವಿರುದ್ಧವಾಗಿರುತ್ತದೆ.
ಇದನ್ನೂ ಓದಿ: ಬೇಸಿಗೆ ರಜೆ ಮುಗಿಸಿ ಅಜ್ಜಿ ಮನೆಯಿಂದ ಹೊರಟ ಮೊಮ್ಮಗನನ್ನು ಕಂಡು ಭಾವುಕರಾದ ಅಜ್ಜಿ
ಆರ್ಬಿಟಿಂಗ್: ಈ ಸಂಬಂಧಗಳಲ್ಲಿ ಇಬ್ಬರೂ ವ್ಯಕ್ತಿಗಳು ಮೆಸೇಜ್ ಗಳಿಗೆ ಯಾವುದೇ ಉತ್ತರ ನೀಡಲ್ಲ. ಆದರೆ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೋರಿಗಳನ್ನು ನೋಡುತ್ತಿರುತ್ತಾರೆ ಹಾಗೂ ಲೈಕ್ ಮಾಡುತ್ತಿರುತ್ತಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:47 pm, Mon, 6 July 26




