
ಇತ್ತೀಚೆಗಿನ ದಿನಗಳಲ್ಲಿ ತಮಗೆ ಬೇಕಾದ ಪ್ರತಿಯೊಂದು ವಸ್ತುಗಳನ್ನು ಆನ್ಲೈನ್ ನಲ್ಲಿ ಖರೀದಿ ಮಾಡುವವರೇ ಹೆಚ್ಚು. ಕೆಲವೊಮ್ಮೆ ಪ್ರಾಡಕ್ಟ್ ಇಷ್ಟವಾಗದೇ ಇದ್ರೆ ಅಥವಾ ಆರ್ಡರ್ ಮಾಡಿದಾಗ ಪ್ರಾಡಕ್ಟ್ ಅಲ್ಲದೇ ಹೋದ್ರೆ ರಿಟರ್ನ್ ಮಾಡುತ್ತೇವೆ. ಆದರೆ ಇದೀಗ ಫ್ಲಿಪ್‌ಕಾರ್ಟ್ ನಲ್ಲಿ (Flipkart) ವ್ಯಕ್ತಿಯೊಬ್ಬ ಟಿ ಶರ್ಟ್ ಆರ್ಡರ್ ಮಾಡಿದ್ದಾನೆ. ಆದರೆ ಈ ಪಾರ್ಸೆಲ್ ನೊಳಗಿದ್ದ ಚೀಟಿ ಸದ್ಯ ವೈರಲ್ ಆಗಿದೆ. ಹೌದು, ಚೀಟಿಯಲ್ಲಿ ಮಾರಾಟಗಾರನು ಗ್ರಾಹಕನಿಗೆ ಈ ಆರ್ಡರ್ ರಿಟರ್ನ್ ಮಾಡ್ಬೇಡಿ ಎಂದು ಮನವಿ ಮಾಡಿದ್ದೇನೆ. ಹೀಗೆನ್ನಲು ಮಾರಾಟಗಾರ ನೀಡಿದ ಅಸಲಿ ಕಾರಣ ತಿಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಸದ್ಯ ಈ ಚೀಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಲ್ಪೇಶ್ ಕೋಲಿ (kalpesh koli) ಎಂಬ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡು ಫ್ಲಿಪ್‌ಕಾರ್ಟ್ ನಲ್ಲಿ ನಾನು ಪ್ರಾಡಕ್ಟ್ ಆರ್ಡರ್ ಮಾಡಿದೆ, ಆದ್ರೆ ನನಗೆ ಬಾಕ್ಸ್‌ನಲ್ಲಿ ಸಿಕ್ಕಿದ್ದು ಇದು, ಪ್ರಾಮಾಣಿಕ ಮಾರಾಟಗಾರ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪಾರ್ಸೆಲ್ ಜತೆಗೆ ಸಣ್ಣ ಬಿಳಿ ಚೀಟಿ ಇರುವುದನ್ನು ನೀವು ಗಮನಿಸಬಹುದು. ಈ ಚೀಟಿಯಲ್ಲಿ ಈಗಾಗಲೇ ನಾನು ನಷ್ಟದಲ್ಲಿದ್ದೇನೆ, ದಯವಿಟ್ಟು ರಿಟರ್ನ್ ಮಾಡಬೇಡಿ ಎಂದು ಬರೆದಿರುವುದನ್ನು ಕಾಣಬಹುದು.
ಇದನ್ನೂ ಓದಿ: ಅಡುಗೆ ಮಾಡುವವರಿಗೊಂದು ವಾಟ್ಸ್ಆ್ಯಪ್ ಗ್ರೂಪ್! ಬೆಂಗಳೂರಿನ ಫ್ಲ್ಯಾಟ್‌ಮೇಟ್‌ಗಳ ಐಡಿಯಾ ಈಗ ವೈರಲ್
ಅಕ್ಟೋಬರ್ 24 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮಾರಾಟಗಾರನ ಕಷ್ಟವನ್ನೊಮ್ಮೆ ನೋಡಿ, ಎಲ್ಲರೂ ಕೂಡ ಈ ರೀತಿ ಬರೆಯಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, ಕ್ರಿಯೇಟಿವ್ ದಾರಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ