Shocking News: 10 ವರ್ಷದಿಂದ ದಿನವೂ ಗಂಡನ ಚಿತಾಭಸ್ಮ ತಿನ್ನುತ್ತಾಳೆ ಈ ಮಹಿಳೆ!

Viral News: 2009ರಲ್ಲಿ ಮದುವೆಯಾಗಿದ್ದ ಇಂಗ್ಲೆಂಡ್​ನ 26 ವರ್ಷದ ಕ್ಯಾಸಿಯ ಗಂಡ 2011ರಲ್ಲಿ ಸಾವನ್ನಪ್ಪಿದ್ದ. ಆತನ ನೆನಪಿಗಾಗಿ ಚಿತಾಭಸ್ಮವನ್ನು ಇಟ್ಟುಕೊಂಡು ಎಲ್ಲೇ ಹೋದರೂ ತೆಗೆದುಕೊಂಡು ಹೋಗುವ ಕ್ಯಾಸಿ ದಿನವೂ ಅದನ್ನು ಸೇವಿಸುತ್ತಾಳೆ.

Shocking News: 10 ವರ್ಷದಿಂದ ದಿನವೂ ಗಂಡನ ಚಿತಾಭಸ್ಮ ತಿನ್ನುತ್ತಾಳೆ ಈ ಮಹಿಳೆ!
ಗಂಡನ ಚಿತಾಭಸ್ಮ ತಿನ್ನುತ್ತಿರುವ ಮಹಿಳೆ
Edited By:

Updated on: Oct 21, 2021 | 1:20 PM

ಆಕೆಗೆ ತನ್ನ ಗಂಡನೆಂದರೆ ಪ್ರಾಣ. ಬಹಳ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದ ಅವರ ಮೇಲೆ ಯಾರ ಕಣ್ಣು ಬಿತ್ತೋ ಏನೋ ಮದುವೆಯಾಗಿ 2 ವರ್ಷಗಳಲ್ಲಿ ಆಕೆಯ ಗಂಡ ಸಾವನ್ನಪ್ಪಿದ್ದ. ಗಂಡನ ಶವವನ್ನು ಸುಟ್ಟ ಬಳಿಕ ಚಿತಾಭಸ್ಮವನ್ನು ಒಂದು ಡಬ್ಬಿಯಲ್ಲಿ ಹಾಕಿಟ್ಟುಕೊಂಡ ಆ ಮಹಿಳೆ ಅಂದಿನಿಂದ ಇಂದಿನವರೆಗೂ ದಿನವೂ ಆ ಬೂದಿಯನ್ನು ತಿನ್ನುತ್ತಾಳೆ! ಕಳೆದ 10 ವರ್ಷಗಳಿಂದ ಆಕೆ ದಿನವೂ ಆತನ ನೆನಪಾದಾಗಲೆಲ್ಲ ಗಂಡನ ಚಿತಾಭಸ್ಮವನ್ನು ತಿನ್ನುತ್ತಾಳೆ. ಬೂದಿಯಲ್ಲಿ ಬೆರಳನ್ನಿಟ್ಟು ಆ ಬೆರಳನ್ನು ನೆಕ್ಕುತ್ತಾ ಆಕೆ ತನ್ನ ಗಂಡನನ್ನು ನೆನೆಯುತ್ತಾಳೆ.

2009ರಲ್ಲಿ ಮದುವೆಯಾಗಿದ್ದ ಇಂಗ್ಲೆಂಡ್​ನ 26 ವರ್ಷದ ಕ್ಯಾಸಿಯ ಗಂಡ 2011ರಲ್ಲಿ ಸಾವನ್ನಪ್ಪಿದ್ದ. ಆತನ ನೆನಪಿಗಾಗಿ ಚಿತಾಭಸ್ಮವನ್ನು ಇಟ್ಟುಕೊಂಡು ಎಲ್ಲೇ ಹೋದರೂ ತೆಗೆದುಕೊಂಡು ಹೋಗುವ ಕ್ಯಾಸಿ ದಿನವೂ ಅದನ್ನು ಸೇವಿಸುತ್ತಾಳೆ. ಅಸ್ತಮಾದಿಂದಾಗಿ ಸಾವನ್ನಪ್ಪಿದ ಗಂಡನ ಅಂತ್ಯಸಂಸ್ಕಾರ ಮಾಡಿದ ನಂತರ ಆತನ ಚಿತಾಭಸ್ಮವನ್ನು ತನ್ನೊಂದಿಗೆ ಇಟ್ಟುಕೊಂಡಿದ್ದಾಳೆ. 2011ರಿಂದ ನಾನು ಎಲ್ಲೇ ಹೋದರೂ ಗಂಡನ ಚಿತಾಭಸ್ಮವನ್ನು ತೆಗೆದುಕೊಂಡು ಹೋಗುತ್ತೇನೆ. ಗಂಡನ ನೆನಪಾದಾಗಲೆಲ್ಲಾ ಚಿತಾಭಸ್ಮವನ್ನು ಸೇವಿಸುತ್ತೇನೆ ಎಂದಿದ್ದಾಳೆ.

ಮನೆಯಲ್ಲಿ ಮಾತ್ರವಲ್ಲದೆ ದಿನಸಿ ಅಂಗಡಿ, ರೆಸ್ಟೋರೇಂಟ್​, ಪ್ರವಾಸ ಎಲ್ಲೇ ಹೋದರೂ ಗಂಡನ ಚಿತಾಭಸ್ಮವನ್ನು ತೆಗೆದುಕೊಂಡು ಹೋಗುತ್ತೇನೆ. ದಿನಕ್ಕೆ ಮೂರು ಅಥವಾ 4 ಬಾರಿ ಬೂದಿಯನ್ನು ತಿನ್ನುತ್ತೇನೆ. ನನ್ನನ್ನು ನೋಡಿದವರು ಗೇಲಿ ಮಾಡುತ್ತಾರೆ. ಹೀಗಾಗಿ, ಈ ಅಭ್ಯಾಸವನ್ನು ಬಿಟ್ಟುಬಿಡಬೇಕು ಎಂದು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ, ನನಗೆ ಸಾಧ್ಯವಾಗಲಿಲ್ಲ. ನನ್ನ ಗಂಡನ ಚಿತಾಭಸ್ಮ ಖಾಲಿಯಾದ ನಂತರ ಏನು ಮಾಡಬೇಕೆಂಬುದೇ ನನಗೆ ಗೊತ್ತಾಗುತ್ತಿಲ್ಲ ಎಂದು ಕ್ಯಾಸಿ ಮಾಧ್ಯಮಗಳಿಗೆ ಹೇಳಿದ್ದಾಳೆ.

ಇದನ್ನೂ ಓದಿ: Shocking News: ಮೊಬೈಲ್ ಕೊಡಲಿಲ್ಲ ಎಂದು ಗಂಡನ ತುಟಿಯನ್ನೇ ಕತ್ತರಿಸಿದ ಹೆಂಡತಿ!

Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

Published On - 1:18 pm, Thu, 21 October 21

Web contact

TV9 Kannada

Read More
Follow Us