Video: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಕ್ಕಳ ಮೊಬೈಲ್ ಒಡೆದು ಹಾಕಿದ ಪೋಷಕರ ಸಂಘ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 17, 2024 | 12:54 PM

ಮೊಬೈಲ್ ಕೈಗೆ ಬಂದ ಮೇಲೆ ವಿದ್ಯಾರ್ಥಿಗಳ ಗಮನ ಹೆಚ್ಚಾಗಿ ಅದರ ಕಡೆಯೇ ಹೋಗಿದ್ದು, ಕೆಲವರಂತೂ ಓದಿನ ಬಗ್ಗೆ ತಲೆಯೇ ಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ಈ ವಿದ್ಯಾರ್ಥಿಗಳ ಚಳಿ ಬಿಡಿಸಲು ಇಲ್ಲೊಂದು ಶಾಲೆಯಲ್ಲಿ ಪೋಷಕರ ಸಂಘವು ವಿದ್ಯಾಭ್ಯಾಸದಲ್ಲಿ ಹಿಂದಿರುವ ವಿದ್ಯಾರ್ಥಿಗಳ ಮೊಬೈಲ್ ಅನ್ನೇ ಕಲ್ಲಿನಿಂದ ಜಜ್ಜಿ ಒಡೆದು ಹಾಕಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಪೋಷಕರ ಸಂಘದ ಈ ನಿರ್ಧಾರಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.

Video: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಕ್ಕಳ ಮೊಬೈಲ್ ಒಡೆದು ಹಾಕಿದ ಪೋಷಕರ ಸಂಘ
ವೈರಲ್​ ವಿಡಿಯೋ
Follow us on

ಒಂದು ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಮಕ್ಕಳು, ಯುವಕರು ಶಿಕ್ಷಣದ ಮೂಲಕ ಅವರ ಒಂದು ಭದ್ರ ಭವಿಷ್ಯ ಜೊತೆಗೆ ದೇಶದ ಬೆಳವಣಿಗೆಗೂ ಕಾರಣರಾಗುತ್ತಾರೆ. ಆದ್ದರಿಂದ ಪ್ರತಿಯೊಂದು ದೇಶದಲ್ಲೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆದ್ರೆ ಈ ಸ್ಮಾರ್ಟ್ ಫೋನ್ ಕೈಗೆ ಬಂದ ಮೇಲೆ ಈ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕಡೆಗೆ ಗಮನ ನೀಡುತ್ತಿಲ್ಲ. ಯಾವಾಗಲೂ ಮೊಬೈಲ್ ನಲ್ಲಿಯೇ ಸಮಯ ಕಳೆಯುತ್ತಿರುತ್ತಾರೆ. ಇಂತಹ ವಿದ್ಯಾರ್ಥಿಗಳ ಚಳಿ ಬಿಡಿಸಲು ಇಲ್ಲೊಂದು ಶಾಲೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಕಳಪೆ ಮಟ್ಟದ ಪ್ರದರ್ಶನ ನೀಡಿದ್ದಕ್ಕೆ ಆ ಶಾಲೆಯ ಪೋಷಕರ ಸಂಘ ವಿದ್ಯಾರ್ಥಿಗಳ ಮೊಬೈಲ್ ಒಡೆದು ಹಾಕಿದೆ. ಈ ಕುರಿತ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಪೋಷಕರ ಸಂಘದ ಈ ನಿರ್ಧಾರಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.

ವರದಿಗಳ ಪ್ರಕಾರ ಈ ಘಟನೆ ನೈಜೀರಿಯಾದಲ್ಲಿ ನಡೆದಿದ್ದು, ವಿದ್ಯಾಭ್ಯಾಸದಲ್ಲಿ ಕಳಪೆ ಮಟ್ಟದ ಪ್ರದರ್ಶನ ನೀಡಿದ್ದಕ್ಕಾಗಿ ಶಾಲೆಯ ಪೋಷಕರ ಸಂಘ ಸ್ವತಃ ವಿದ್ಯಾರ್ಥಿಗಳಿಂದಲೇ ಅವರ ಮೊಬೈಲ್ ಗಳನ್ನು ಹೊಡೆದು ಹಾಕಿಸಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ:


ಈ ಕುರಿತ ಪೋಸ್ಟ್ ಒಂದನ್ನು lindaikejiblogofficialಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ವಿದ್ಯಾರ್ಥಿಗಳು ಕಳಪೆ ಮಟ್ಟದ ಶೈಕ್ಷಣಿಕ ಪ್ರದರ್ಶನ ನೀಡಿದ್ದಾಕ್ಕಾಗಿ ಪೋಷಕರ ಸಂಘವು ಅವರ ಫೋನ್ ಗಳನ್ನು ಒಡೆದು ಹಾಕಿಲು ಆದೇಶಿಸಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಪೋಷಕರ ಸಂಘದ ಆದೇಶದ ಮೇರೆಗೆ ವಿದ್ಯಾರ್ಥಿಗಳು ಬಹಳ ದುಃಖದಿಂದ ತಮ್ಮ ತಮ್ಮ ಫೋನ್ ಗಳನ್ನು ಕಲ್ಲಿನಿಂದ ಜಜ್ಜಿ ಒಡೆದು ಹಾಕುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಉಬರ್​​ನಲ್ಲಿ ಪ್ರಯಾಣಿಸುವುದು ಇಷ್ಟೊಂದು ದುಬಾರಿಯೇ…. 1.8 ಕಿಮೀಗೆ 699 ರೂ. ಬೆಲೆ ನೋಡಿ ಯುವಕ ಶಾಕ್

ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ತುಂಬಾ ಕಠೋರವಾಗಿ ಕಾಣಿಸಬಹುದು ಆದರೆ ಇದು ವಿದ್ಯಾರ್ಥಿಗಳ ಮನಸ್ಸನ್ನು ಸಂಪೂರ್ಣವಾಗಿ ಫೋನ್‌ಗಳಿಂದ ತೆಗೆದುಹಾಕಲು ಮತ್ತು ವಿದ್ಯಾಭ್ಯಾಸದ ಮೇಲೆ ಕೇಂದ್ರೀಕರಿಸಲು ಇದು ಉತ್ತಮ ಆಯ್ಕೆಯಾಗಿದೆ’ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದು ಅಷ್ಟೇನೂ ಒಳ್ಳೆಯ ನಿರ್ಧಾರವಲ್ಲ. ಫೋನ್ ಅನ್ನು ನಾಶಪಡಿಸುವ ಬದಲು ಅವರಿಂದ ತೆಗೆದಿಡಬಹುದಿತ್ತು’ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ