ಕೆಫೆಟೇರಿಯಾದಲ್ಲಿ ಕೆಲಸ ಮಾಡುವ ಮಹಿಳೆಗೆ ಸಪ್ರೈಸ್ ಗಿಪ್ಟ್ ನೀಡಿದ ವಿದ್ಯಾರ್ಥಿಗಳು: ವೀಡಿಯೋ ವೈರಲ್
ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಕೆಫೆಟೇರಿಯಾದಲ್ಲಿ ಕೆಲಸ ಮಾಡುವ ಮಹಿಳೆಗೆ ಸಪ್ರೈಸ್ ಗಿಪ್ಟ್ ನೀಡುವ ಮೂಲಕ ಸಂತಸಪಡಿಸಿದ್ದಾರೆ.

ಕೆಲವು ಹೃದಯಸ್ಪರ್ಶಿ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗಿ ನೆಟ್ಟಿಗರನ್ನು ಸೆಳೆಯುತ್ತಿರುತ್ತದೆ. ಇಲ್ಲೊಂದು ಅಪರೂಪದ ವೀಡಿಯೋ ಕ್ಲಿಪ್ ವೈರಲ್ ಆಗಿದೆ. ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಕೆಫೆಟೇರಿಯಾದಲ್ಲಿ (cafeteria) ಕೆಲಸ ಮಾಡುವ ಮಹಿಳೆಗೆ ಸಪ್ರೈಸ್ ಗಿಪ್ಟ್ ನೀಡುವ ಮೂಲಕ ಸಂತಸಪಡಿಸಿದ್ದಾರೆ. ಬ್ರೆಜಿಲ್ನಲ್ಲಿ ಈ ಘಟನೆ ನಡೆದಿದೆ. ಸದಾ ಕಾಲ ಕೆಫೆಟೇರಿಯಾಗೆ ಬರುವವರ ಇಷ್ಟದಂತೆ ಆಹಾರವನ್ನು ಪೂರೈಸುವ ಮಹಿಳೆಗೆ ವಿಶೇಷ ಉಡುಗೊರೆಯನ್ನು ನೀಡಿ ಧನ್ಯವಾದ ತಿಳಿಸಿದ್ದಾರೆ.
ಗುಡ್ ನ್ಯೂಸ್ ಕರೆಸ್ಪಾಂಡೆಂಟ್ ಎನ್ನುವ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ, ವೀಡಿಯೋದಲ್ಲಿ ನಾಲ್ಕೈದು ವಿದ್ಯಾರ್ಥಿನಿಯರು ಕೆಫೆಟೇರಿಯಾಗೆ ಬರುತ್ತಾರೆ. ಅವರಲ್ಲಿ ಒಬ್ಬರು ಮಹಿಳೆಯ ಕಣ್ಣುಗಳನ್ನು ಮುಚ್ಚುತ್ತಾರೆ. ನಂತರ ಎದುರಿನಿಂದ ಮತ್ತಿಬ್ಬರು ಗಿಪ್ಟ್ ಕವರ್ ಹಿಡಿದು ಒಳಗೆ ಪ್ರವೇಶಿಸುತ್ತಾರೆ. ಅದನ್ನು ನೋಡಿ ಮಹಿಳೆ ಖುಷಿಯಿಂದ ಕಣ್ಣುಗಳನ್ನು ಅರಳಿಸಿಸುತ್ತಾರೆ. ಈ ವಿಡಿಯೋ ನೋಡಿ ನೆಟ್ಟಿಗರು ವಿದ್ಯಾರ್ಥಿಗಳ ಸ್ಪಂದಿಸುವ ಮನಸ್ಥಿತಿಯನ್ನು ಮೆಚ್ಚಿಕೊಂಡಿದ್ದಾರೆ. ಇತರರ ಕಷ್ಟಗಳಿಗೆ ಸ್ಪಂದಿಸುವ, ಇತರರ ಮುಖದಲ್ಲಿ ನಗು ತರಿಸುವ ಕೆಲವೊಂದಿಷ್ಟು ಕೆಲಸಗಳನ್ನು ಹಲವರು ಮಾಡುತ್ತಾರೆ.
LET’S CHANGE THE WORLD WITH KINDNESS! Group of students in Brazil surprise their cafeteria worker at school with a gift basket in appreciation of her hard work & kindness. ❤?❤ pic.twitter.com/FsDjpQyL45
— GoodNewsCorrespondent (@GoodNewsCorres1) December 14, 2021
ವಿದೇಶಗಳಲ್ಲಿ ಸಾರ್ವಜನಿಕವಾಗಿ ಇತರರ ಬಗ್ಗೆ ಇರುವ ಕಾಳಜಿಯನ್ನು ಪರೀಕ್ಷಿಸುವ ಕೆಲಸಗಳನ್ನು ಹಲವು ತಂಡಗಳು ಮಾಡುತ್ತಿವೆ. ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಕುರುಡ ವ್ಯಕ್ತಿ ಬೆಲೆಬಾಳುವ ವಸ್ತುಗಳನ್ನು ಹಿಡಿದು ಹೋಗುತ್ತಿದ್ದಾಗ ಬಿದ್ದಾಗ ಸುತ್ತಲೂ ಇರುವ ಜನರ ಪ್ರತಿಕ್ರಿಯೆಯನ್ನು ತಿಳಿಯುವ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿದ್ದವು. ಇದೀಗ ವಿದ್ಯಾರ್ಥಿಗಳ ಸಹಾಯ ಮನೋಭಾವದ ವೀಡಿಯೋ ವೈರಲ್ ಆಗಿದೆ. ಟ್ವಿಟರ್ನಲ್ಲಿ ಈ ವೀಡಿಯೋ 13 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
ಇದನ್ನೂ ಓದಿ:
ಉದ್ಯೋಗಿಗಳಿಗೆ 2 ಉಚಿತ ಮನೆಗಳನ್ನು ನೀಡುವುದಾಗಿ ಘೋಷಿಸಿದ ಕಂಪನಿ; ಇದಕ್ಕೆ ಮೀಸಲಿಟ್ಟ ಹಣವೆಷ್ಟು?
Cleanest Air: ಭಾರತದಲ್ಲಿ ಪರಿಶುದ್ಧ ಗಾಳಿ ಸಿಗುವ ಪ್ರದೇಶಗಳಾವುವು; ಇಲ್ಲಿದೆ ಕುತೂಹಲಕರ ಮಾಹಿತಿ