
ರ‍್ಯಾಂಪ್ ವಾಕ್ (Ramp Walk) ಎಂದರೆ ಮೊದಲು ನೆನಪಿಗೆ ಬರುವುದೇ ಮಾಡೆಲ್‌ಗಳು ಹಾಗೂ ಸೆಲೆಬ್ರಿಟಿಗಳು. ಹೌದು ಆಕರ್ಷಕ ಹಾಗೂ ಸ್ಟೈಲಿಶ್ ಉಡುಗೆ ತೊಟ್ಟು ವೇದಿಕೆಯ ಮೇಲೆ ನಡೆದುಕೊಂಡು ಬರುತ್ತಿದ್ದರೆ ನೋಡಲು ಎರಡು ಕಣ್ಣು ಸಾಲದು. ಆದರೆ ಪುಟಾಣಿಗಳು ಪುಟ್ಟ ಹೆಜ್ಜೆಯಿಟ್ಟು ರ‍್ಯಾಂಪ್ ವಾಕ್ ಮಾಡಿದ್ರೆ ಹೇಗೆ ಇರುತ್ತದೆ ಎಂದು ನೀವು ಒಮ್ಮೆಯಾದ್ರೂ ಊಹಿಸಿದ್ರಾ. ಇದೀಗ ಶಾಲಾ ಶಿಕ್ಷಕರು (school teachers) ತರಗತಿಯಲ್ಲಿ ಆಯೋಜಿಸಲಾಗಿದ್ದ ರ‍್ಯಾಂಪ್ ವಾಕ್‌ನಲ್ಲಿ ಮಾಡೆಲ್‌ಗಳಿಲ್ಲ, ಸೆಲೆಬ್ರಿಟಿಗಳಿಲ್ಲ, ಈ ಪುಟಾಣಿಗಳೇ ಹೈಲೈಟ್. ತರಗತಿಯಲ್ಲಿ ಈ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕ್ಯಾಟ್ ವಾಕ್ ಮಾಡಿ ಶಿಕ್ಷಕರು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ (social media) ಆಕರ್ಷಕ ರ‍್ಯಾಂಪ್ ವಾಕ್ ವಿಡಿಯೋ ವೈರಲ್ ಆಗಿದೆ.
thecasualindia ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ಪುಟಾಣಿಗಳ ಮುಖದಲ್ಲಿ ಸಂತೋಷ ನೋಡಿ, ಪ್ರೀತಿಯಿಂದ ಕಲಿಸಿದ ದೃಶ್ಯವು ಹೀಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಶಿಕ್ಷಕರು ಆಯೋಜಿಸಿದ್ದ ರ‍್ಯಾಂಪ್ ವಾಕ್ ನಲ್ಲಿ ಯಾವುದೇ ಸೆಲೆಬ್ರಿಟಿಗಳು ಹಾಗೂ ಮಾಡೆಲ್ ಗಳು ಇಲ್ಲ. ತರಗತಿ ಕೊಠಡಿಯಲ್ಲಿ ಡೆಸ್ಕ್‌ಗಳ ನಡುವೆ ಇರುವ ಜಾಗದಲ್ಲಿ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿಯೇ ರ‍್ಯಾಂಪ್ ವಾಕ್ ಮಾಡಿಕೊಂಡು ಬರುತ್ತಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಸನ್ನೆಗಳು, ಸ್ಟೈಲ್ ಗಳು. ಬೆಕ್ಕಿನ ನಡಿಗೆಯಲ್ಲಿ ಸಾಲಾಗಿ ಬರುತ್ತಾ ಇರುವವರನ್ನು ಕಂಡು ಉಳಿದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿರುವುದನ್ನು ಕಾಣಬಹುದು. ಸಹಪಾಠಿಗಳು ಈ ವಿಭಿನ್ನ ಅನುಭವ ಸಖತ್ ಎಂಜಾಯ್ ಮಾಡಿದ್ದು ಜೋರಾಗಿ ನಗುತ್ತಿದ್ದಾರೆ.
ಇದನ್ನೂ ಓದಿ : Video :ಚೀನಾದ ಬೀದಿಯಲ್ಲಿ ಕ್ಷೌರ ಮಾಡಿಸಿಕೊಂಡ ಭಾರತೀಯ, ಅನುಭವ ಹೇಗಿತ್ತು ನೋಡಿ
ಈ ವಿಡಿಯೋವೊಂದು ಈಗಾಗಲೇ 8 ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ನನಗೆ ನನ್ನ ಶಾಲಾ ದಿನಗಳು ನೆನಪಾದವು, ಆ ದಿನಗಳ ನೆನಪುಗಳು ಎಂದೆಂದಿಗೂ ಶಾಶ್ವತ ಎಂದಿದ್ದಾರೆ. ಇನ್ನೊಬ್ಬರು, ಈ ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಈ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಬ್ಬರು, ಶಾಲಾ ದಿನಗಳಲ್ಲಿ ಶಿಕ್ಷಕರ ಸಣ್ಣ ಸಣ್ಣ ಪ್ರಯತ್ನಗಳು ವಿದ್ಯಾರ್ಥಿಗಳ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ ಎಂದಿದ್ದಾರೆ. ಇನ್ನು ಕೆಲವರು ಈ ಶಿಕ್ಷಕರು ನಿಜಕ್ಕೂ ತುಂಬಾ ಒಳ್ಳೆಯವ್ರು ಕಾಣಿಸ್ತದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Thu, 3 July 25