Video: ಭಾರತಕ್ಕೆ ಹೋಲಿಸಿದ್ರೆ ಸ್ವಿಟ್ಜರ್‌ಲ್ಯಾಂಡ್‌ ಬಲು ದುಬಾರಿ; ಕಾಸ್ಟ್ಲಿ ಜೀವನಶೈಲಿ ಬಗ್ಗೆ ವಿವರಿಸಿದ ದಂಪತಿ

ವಿದೇಶದಲ್ಲಿ ಜೀವನ ಸಾಗಿಸೋದು ತುಂಬಾನೇ ಕಷ್ಟ ಅನ್ನೋ ಮಾತಿದೆ. ಇದೀಗ ದಂಪತಿ ಸ್ವಿಟ್ಜರ್‌ಲ್ಯಾಂಡ್‌ನ ಆದಾಯವನ್ನು ಭಾರತದ ಸಂಬಳಕ್ಕೆ ಹೋಲಿಕೆ ಮಾಡಿದ್ದಾರೆ. ವಿದೇಶಿ ಜೀವನ ವೆಚ್ಚಗಳ ಬಗ್ಗೆ ಮಾತನಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

Video: ಭಾರತಕ್ಕೆ ಹೋಲಿಸಿದ್ರೆ ಸ್ವಿಟ್ಜರ್‌ಲ್ಯಾಂಡ್‌ ಬಲು ದುಬಾರಿ; ಕಾಸ್ಟ್ಲಿ ಜೀವನಶೈಲಿ ಬಗ್ಗೆ ವಿವರಿಸಿದ ದಂಪತಿ
ವೈರಲ್‌ ವಿಡಿಯೋ
Image Credit source: Instagram

Updated on: Jun 28, 2026 | 12:34 PM

ಹೆಚ್ಚಿನವರಿಗೆ ವಿದೇಶಕ್ಕೆ (foreign) ತೆರಳಬೇಕು ಎನ್ನುವುದಿರುತ್ತದೆ. ಅಲ್ಲೇ ಸೆಟ್ಲ್ ಆಗಬೇಕು ಹೀಗೆ ಸಾಕಷ್ಟು ಆಸೆಗಳಿರುತ್ತವೆ. ಆದರೆ, ಭಾರತಕ್ಕೆ ಹೋಲಿಸಿದ್ರೆ ವಿದೇಶಿ ಜೀವನ ದುಬಾರಿ. ಕೈತುಂಬಾ ಸಂಬಳ ಪಡೆದರೂ ಅಲ್ಲಿನ ಖರ್ಚು ವೆಚ್ಚಗಳು ಅಷ್ಟೇ ದುಬಾರಿಯಾಗಿರುತ್ತದೆ. ಇದೀಗ ಸ್ವಿಟ್ಜರ್‌ಲ್ಯಾಂಡ್‌ನ (Switzerland’s) 7 ಲಕ್ಷ ರೂಪಾಯಿ ಹಾಗೂ ಭಾರತದ 40,000 ರೂ ಆದಾಯವನ್ನು ಹೋಲಿಕೆ ಮಾಡಿದ್ದಾರೆ. ವಿದೇಶದ ಜೀವನಶೈಲಿ ದುಬಾರಿ ಎಂದು ತಮ್ಮ ಅನುಭವವನ್ನು ಹೇಳಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಇವರ ಮಾತನ್ನು ಒಪ್ಪಿಕೊಂಡಿದ್ದಾರೆ.

ಚಂತಾಲ್ ಹಾಗೂ ಗುರು (Chantal and Guru) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದಂಪತಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್‌ನಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಆದಾಯ 7 ಲಕ್ಷ ರೂಪಾಯಿ ಹಾಗೂ ಭಾರತದ ಆದಾಯ 40,000 ರೂಪಾಯಿ ಎಂದಿದ್ದಾರೆ. ಭಾರತದಲ್ಲಿ ಬಾಡಿಗೆ ಮನೆಗೆ 20,000 ರೂ ಖರ್ಚಾದರೆ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸುಮಾರು 2 ಲಕ್ಷ ರೂ ಬೇಕು. ಇನ್ನು, ಈ ದಿನಸಿ ಬಿಲ್‌ಗಳು, ಸಾರ್ವಜನಿಕ ಸಾರಿಗೆ, ಆರೋಗ್ಯ ವಿಮೆ, ಮಕ್ಕಳ ಆರೈಕೆ ಹಾಗೂ ಶಿಶುಪಾಲನಾ ವೆಚ್ಚಗಳು ಭಾರತದಲ್ಲಿ ಸುಮಾರು 5,000 ರೂ ಆಗುತ್ತದೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇದೆಲ್ಲದಕ್ಕೂ 1.5 ಲಕ್ಷ ರೂ ಖರ್ಚು ತಗಲುತ್ತವೆ. ವಿದೇಶದಲ್ಲಿ ಲಕ್ಷ ಲಕ್ಷ ರೂ ದುಡಿದ್ರೂ ಜೀವನ ವೆಚ್ಚವು ಆಯಾ ದೇಶದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಚಂತಾಲ್ ಅವರ ಪತಿ ಗುರುರವರು ವಿದೇಶದ ಆದಾಯದ ಬಗ್ಗೆ ಮಾತನಾಡಿದ್ದು, ತಿಂಗಳಿಗೆ 7 ಲಕ್ಷ ರೂ ಆದಾಯ ಇದೆ ಅಂದ್ರೆ ನಿಮಗೆ ಕೇಳಲು ಅದ್ಭುತ ಎನಿಸಬಹುದು. ಆದರೆ ಇಲ್ಲಿನ ಬಾಡಿಗೆ ಮೊತ್ತ ತಿಳಿದ್ರೆ ನಿಮ್ಮ ಆಯ್ಕೆ ಭಾರತವೋ ಅಥವಾ ಸ್ವಿಟ್ಜರ್‌ಲ್ಯಾಂಡ್‌ನೋ? ಎಂದು ಪ್ರಶ್ನೆ ಮಾಡಿರುವುದನ್ನು ನೋಡಬಹುದು.

ಇದನ್ನೂ ಓದಿ: ಮಹಿಳೆಯರಿಗೆ ಇದು ಸುರಕ್ಷಿತ ದೇಶ; ಬೆಳಗ್ಗಿನ ಜಾವ 4.30 ಕ್ಕೆ ಒಂಟಿಯಾಗಿ ಫ್ರಾನ್ಸ್ ಬೀದಿಯಲ್ಲಿ ಓಡಾಡಿದ ಯುವತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ವಿದೇಶದಲ್ಲಿ ಉಳಿತಾಯಕ್ಕಿಂತ ಖರ್ಚು ಹೆಚ್ಚು ಎಂದಿದ್ದಾರೆ. ಇನ್ನೊಬ್ಬರು, ಊರು ಬಿಟ್ಟು ವಿದೇಶಕ್ಕೆ ಹೋಗಿ ನೆಲೆಸಿದವರಿಗೆ ಮಾತ್ರ ಗೊತ್ತು ವಾಸ್ತವ ಸ್ಥಿತಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ವಿದೇಶದ ವ್ಯಾಮೋಹಕ್ಕೆ ಖರ್ಚು ವೆಚ್ಚಕ್ಕೆ ಹೊಂದಿಕೊಳ್ಳಲೇಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us