ಕೆಲಸ ಮಾಡುವಾಗ ಬ್ರೇಕ್​ಗಳನ್ನು ತೆಗೆದುಕೊಳ್ಳುವುದು ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರಿಗೂ ಪ್ರಯೋಜನಕಾರಿ: ಅಧ್ಯಯನ

|

Updated on: Mar 19, 2021 | 6:25 PM

ಸಮೀಕ್ಷೆಯಲ್ಲಿ ಪಾಲ್ಗೊಂಡವರ ನಿದ್ರೆಯ ಗುಣಮಟ್ಟ, ದಣಿವಿನ ಹಂತಗಳು, ಕೆಲಸದಲ್ಲಿ ಅವರು ತೊಡಗಿಸಿಕೊಳ್ಳುವ ರೀತಿ ಮತ್ತು ಆಯಾ ದಿನದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಅವರ ಅನುಭವ ಮೊದಲಾದ ಆಂಶಗಳ ಮೇಲೆ ಸಮೀಕ್ಷೆಯ ಪ್ರಶ್ನೆಗಳು ಆಧಾರಗೊಂಡಿದ್ದವು.

ಕೆಲಸ ಮಾಡುವಾಗ ಬ್ರೇಕ್​ಗಳನ್ನು ತೆಗೆದುಕೊಳ್ಳುವುದು ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರಿಗೂ ಪ್ರಯೋಜನಕಾರಿ: ಅಧ್ಯಯನ
ಆನ್​ಲೈನ್ ಮೀಟಿಂಗ್ ವೇಳೆ ಸಮಸ್ಯೆ
Follow us on

ಇತ್ತೀಚಿನ ಸಂಶೋಧನೆಗಳ ಪ್ರಕಾರ ಕೆಲಸ ಮಾಡುವ ಸ್ಥಳಗಳಲ್ಲಿ ದಣಿವಾದಾಗ ಉದ್ಯೋಗಿಗಳು ಚಿಕ್ಕ-ಪುಟ್ಟ (ಮೈಕ್ರೋಬ್ರೇಕ್) ಬ್ರೇಕ್​ಗಳನ್ನು ತೆಗೆದುಕೊಳ್ಳುವುದು ಅತ್ಯಂತ ಸಹಜ ಮತ್ತು ಅದು ಖಂಡಿತವಾಗಿಯೂ ತಪ್ಪಲ್ಲ. ಹಾಗೆ ತೆಗೆದುಕೊಳ್ಳುವ ಬ್ರೇಕ್​ಗಳು ಉದ್ಯೋಗಿಗಳಿಗೆ ಆಯಾಸವನ್ನು ನಿವಾರಿಸಿಕೊಳ್ಳುವ ಜೊತೆ ಪುನಃ ಹೆಚ್ಚಿನ ಉತ್ಸಾಹದೊಂದಿಗೆ ಕೆಲಸದಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಉದ್ಯೋಗಿಗಳು ಸ್ವ-ಇಚ್ಛೆಯಿಂದ ತೆಗೆದುಕೊಳ್ಳುವ ಬ್ರೇಕ್​ಗಳು ಚುಟುಕಾಗಿರುತ್ತವೆ ಮತ್ತು ಅವುಗಳಿಗೆ ಸೂಕ್ತ ಹಿನ್ನೆಲೆಯಿರುವುದಿಲ್ಲ. ಸ್ನಾಕ್ ತಿನ್ನುವುದು, ಸಹೋದ್ಯೋಗಿ ಜೊತೆ ಹರಟೆ, ಸ್ಪಲ್ಪ ತಿರುಗಾಟ ಮತ್ತು ಪದಬಂದದಂಥ ಒಂದು ಸಣ್ಣ ಚಟುವಟಿಕೆ; ಮೊದಲಾದವು ಮೈಕ್ರೋಬ್ರೇಕ್ ಎನಿಸಿಕೊಳ್ಳತ್ತವೆ.

‘ಮೈಕ್ರೋಬ್ರೇಕ್​ ವ್ಯಾಖ್ಯಾನವೇ ಚಿಕ್ಕದು’ ಎಂದು ಈ ಸಂಶೋಧನೆಯಲ್ಲಿ ಭಾಗಿಯಾಗಿರುವ ಅಮೆರಿಕಾದ ನಾರ್ಥ್ ಕೆರೊಲಿನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಮನಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿರುವ ಸೋಫಿಯಾ ಚೋ ಹೇಳುತ್ತಾರೆ.

‘ಸೂಕ್ತವಾದ ಸಮಯದಲ್ಲಿ ತೆಗೆದುಕೊಳ್ಳುವ 5-ನಿಮಿಷದ ಬ್ರೇಕ್ ಒಬ್ಬ ಉದ್ಯೋಗಿಯಲ್ಲಿ ಚಮತ್ಕಾರವನ್ನು ಸೃಷ್ಟಿಸಬಲ್ಲದು. ನಮ್ಮ ಸಂಶೋಧನೆಯ ಪ್ರಕಾರ ಉದ್ಯೋಗದಾತ ಕಂಪನಿಗಳು ತಮ್ಮ ನೌಕರರಿಗೆ ಚಿಕ್ಕ-ಪುಟ್ಟ ಬ್ರೇಕ್​ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕು. ಅದು ಉದ್ಯೋಗಿಗಳಿಗೆ ತಮ್ಮ ಶಕ್ತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ದಿನವಡೀ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ನೆರವಾಗುತ್ತದೆ,’ ಎಂದು ಚೋ ಹೇಳಿದ್ದಾರೆ.

ಕೆಲಸ ಮಾಡುವಾಗ ಬ್ರೇಕ್​ಗಳು ಬೇಕು

ಚೋ ಮತ್ತು ಅವರ ಸಂಗಡಿಗರು ಮಂಡಿಸಿರುವ ಪೇಪರ್; ವಾರದ ದಿನವೊಂದರಲ್ಲಿ ಉದ್ಯೋಗಿಗಳು ತೆಗೆದುಕೊಳ್ಳುವ ಮೈಕ್ರೋಬ್ರೇಕ್​ಗಳಿಗೆ ಸಂಬಂಧಿಸಿದ ಅಧ್ಯಯನಗಳ ಮೇಲೆ ಆಧಾರಿತವಾಗಿದೆ. ಸದರಿ ಅಧ್ಯಯನವು ನಿರ್ದಿಷ್ಟವಾಗಿ, ಉದ್ಯೋಗಿಗಳು ದಿನದ ಕೆಲಸವನ್ನು ಆರಂಭಿಸುವಾಗಲೇ ದಣಿದಿದ್ದರೂ ತಮ್ಮ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳುವ ಮತ್ತು ಅದನ್ನು ದಿನವಿಡೀ ಅದನ್ನು ಕಾಯ್ದುಕೊಳ್ಳುವ ಆಯಾಮದ ಮೇಲೆ ಕೇಂದ್ರೀಕೃತವಾಗಿತ್ತು. ಅವರು ಬ್ರೇಕ್ ತೆಗೆದುಕೊಳ್ಳಲು ಪ್ರೇರೇಪಿಸಿದ ಕಾರಣಗಳು ಮತ್ತು ಆ ಅಲ್ಪಾವಧಿಯಲ್ಲ ಅವರ ಏನು ಮಾಡಿದರು ಎನ್ನುವುದನ್ನು ಸಂಶೋಧಕರು ಪರಿಶೀಲಿಸಿದರು.

ಅಮೇರಿಕಾದ 98 ಉದ್ಯೋಗಿಗಳ ಸಮೀಕ್ಷೆಯನ್ನು ಸಂಶೋಧಕರು ನಡೆಸಿದರು. 10 ದಿನಗಳ ಕಾಲ ಸತತವಾಗಿ ಕೆಲಸ ಮಾಡಿದ ಅವರಿಗೆ ಪ್ರತಿದಿನ ಎರಡು ಸರ್ವೇ ಫಾರಂಗಳನ್ನು ಭರ್ತಿ ಮಾಡಲು ಹೇಳಲಾಗಿತ್ತು. ಸರ್ವೆಯನ್ನು ಬೆಳಗಿನ ಸಮಯ ಮತ್ತು ದಿನದ ಕೆಲಸ ಮುಗಿದ ನಂತರ ಮಾಡಲಾಗಿತ್ತು. ಮತ್ತೊಂದು ಅಧ್ಯಯನ ದಕ್ಷಿಣ ಕೊರಿಯಾದಲ್ಲಿ ನಡೆದು ಅಲ್ಲಿನ 222 ಉದ್ಯೋಗಿಗಳನ್ನು ಸಮೀಕ್ಷೆಗೆ ಆರಿಸಿಕೊಳ್ಳಲಾಗಿತ್ತು. ಈ ಅಧ್ಯಯನದಲ್ಲಿ ಪಾಲ್ಗೊಂಡವರಿಗೆ ಐದು ವಾರದ ದಿನಗಳಲ್ಲಿ (ಕೆಲಸ ಮಾಡುವ ದಿನಗಳು) ಪ್ರತಿದಿನ ಮೂರು ಸರ್ವೆ ಫಾರಂಗಳನ್ನು-ಮುಂಜಾನೆ, ಲಂಚ್​ ಸಮಯ ಮತ್ತು ದಿನದ ಕೆಲಸ ಮುಗಿದ ನಂತರ ಭರ್ತಿ ಮಾಡಲು ಹೇಳಲಾಗಿತ್ತು.

ಸಮೀಕ್ಷೆಯಲ್ಲಿ ಪಾಲ್ಗೊಂಡವರ ನಿದ್ರೆಯ ಗುಣಮಟ್ಟ, ದಣಿವಿನ ಹಂತಗಳು, ಕೆಲಸದಲ್ಲಿ ಅವರು ತೊಡಗಿಸಿಕೊಳ್ಳುವ ರೀತಿ ಮತ್ತು ಆಯಾ ದಿನದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಅವರ ಅನುಭವ ಮೊದಲಾದ ಆಂಶಗಳ ಮೇಲೆ ಸಮೀಕ್ಷೆಯ ಪ್ರಶ್ನೆಗಳು ಆಧಾರಗೊಂಡಿದ್ದವು. ಹಾಗೆ ಉದ್ಯೋಗಿಗಳಿಂದ ಲಭ್ಯವಾದ ಮಾಹಿತಿಯನ್ನು ಅಂಕಿ-ಅಂಶಗಳ ಉಪಕರಣಗಳಿಂದ ಸಂಶೋಧಕರು ಪರಿಶೀಲಿದರು. ಅವರ ನಿದ್ರಾ ಗುಣಮಟ್ಟ, ದಣಿವು, ಕೆಲಸ ಮಾಡುವಾಗಿನ ವರ್ತನೆ, ಮತ್ತು ಮೈಕ್ರೋಬ್ರೇಕ್ ತೆಗೆದುಕೊಂಡಾಗ ಅವರು ಮಾಡಿದ್ದೇನು ಮೊದಲಾದಗಳಲ್ಲಿ ದಿನದಿಂದ ದಿನಕ್ಕೆ ಆದ ಬದಲಾವಣೆಗಳನ್ನು ಅವರು ಅಧ್ಯಯನ ಮಾಡಿದರು.

ಅಧ್ಯಯನ ಸಂಪೂರ್ಣಗೊಂಡ ನಂತರ ಅವರಿಗೆ ಸಿಕ್ಕಿದ್ದು ಸ್ಪಷ್ಟವಾದ ಫಲಿತಾಂಶಗಳು: ದಣಿದ ಭಾವದಿಂದಲೇ ಕೆಲಸಕ್ಕೆ ಬಂದವರು ಜಾಸ್ತಿ ಸಲ ಬ್ರೇಕ್​ಗಳನ್ನು ತೆಗೆದುಕೊಂಡಿದ್ದರು. ಆದರೆ, ಹಾಗೆ ಮೈಕ್ರೋಬ್ರೇಕ್​ ತೆಗೆದುಕೊಳ್ಳುವುದು ಅವರಿಗೆ ಸಾಮರ್ಥ್ಯದ ಮಟ್ಟವನ್ನು ಕಾಯ್ದುಕೊಳ್ಳಲು, ಕೆಲಸದಲ್ಲಿ ತೊಡಗಿಸಿಕೊಳ್ಳಲು ಮತ್ತು ಕೆಲಸಕ್ಕೆ ಸಂಬಂಧಿಸಿದ ಡಿಮ್ಯಾಂಡ್​ಗಳನ್ನು ಪೂರ್ಣಗೊಳಿಸಲು ನೆರವಾಗಿತ್ತು.

‘ವಾಸ್ತವದಲ್ಲಿ ಮೈಕ್ರೋಬ್ರೇಕ್​ಗಳು ಉದ್ಯೋಗಿಯೊಬ್ಬನಿಗೆ ದಿನದ ಕೆಲಸದಲ್ಲಿ ತನ್ನ ಸಾಮರ್ಥ್ಯದ ಮೂಲಗಳನ್ನು ಕ್ರೋಢೀಕರಿಸಿಕೊಳ್ಳಲು ಸಹಾಯ ಮಾಡುತ್ತವೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಉದ್ಯೋಗಿಯೊಬ್ಬ ದಿನದಾರಂಭದಲ್ಲೇ ದಣಿದಿದ್ದರೆ ಅವನಿಗೆ ಮೈಕ್ರೋಬ್ರೇಕ್​ಗಳು ಲಾಭಕಾರಿಯಾಗಿವೆ,’ ಎಂದು ಚೋ ಹೇಳುತ್ತಾರೆ.

ಅದರ ಜತೆಗೆ ಉದ್ಯೋಗದಾತನು ತಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಕಾಳಜಿಯುಳ್ಳವನಾಗಿದ್ದರೆ ಉದ್ಯೋಗಿಗಳು ಮೈಕ್ರೋಬ್ರೇಕ್ ತೆಗೆದುಕೊಳ್ಳುವುದನ್ನು ಹೆಚ್ಚು ಇಷ್ಟಪಡುತ್ತಾರೆ ಎನ್ನುವುದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.

‘ಕೆಲಸ ಮಾಡುವ ಜನರಿಗೆ ಸಂಬಳ ನೀಡುವ ಧಣಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿಯಿಟ್ಟುಕೊಂಡಿರುವುದು ಮನವರಿಕೆಯಾದರೆ ಅವರು ನಿರ್ಭೀತಿಯಿಂದ ಯಾವ ಬಗೆಯ ಬ್ರೇಕ್ ತೆಗೆದುಕೊಳ್ಳಬೇಕೆಂದು ನಿರ್ಧರಿಸುತ್ತಾರೆ. ಅಂತಿಮವಾಗಿ ಅದು ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರಿಗೂ ಪ್ರಯೋಜನಕಾರಿಯಾಗಿ ಪರಿಣಮಿಸುತ್ತದೆ,’ ಎಂದು ಚೋ ಹೇಳುತ್ತಾರೆ.

ಇದನ್ನೂ ಓದಿ: Facebook ಉದ್ಯೋಗಿಗಳಿಗೆ ಮುಂದಿನ ವರ್ಷವೂ Work From Home!

Published On - 6:24 pm, Fri, 19 March 21