Sand Sculpture: ಕಲೆ ತನ್ನೊಂದಿಗೆ ತಾನು ಇರುವುದು ಹೇಗೆ ಎನ್ನುವ ತಾಳ್ಮೆಯನ್ನು ಮನುಷ್ಯನಿಗೆ ಕಲಿಸಿಕೊಡುತ್ತದೆ. ತನ್ನೊಳಗಿನ ನಿರಾಕಾರಕ್ಕೆ ಆಕಾರ ಕೊಟ್ಟುಕೊಳ್ಳುವುದು ಹೇಗೆಂದು ನಿರ್ದೇಶಿಸುತ್ತದೆ. ತನ್ನ ಸುತ್ತಮುತ್ತಲಿನದನ್ನು ಸಾವಧಾನವಾಗಿ ಅರ್ಥ ಮಾಡಿಕೊಳ್ಳುವ ಬಗೆ ಹೇಗೆಂದು ತಿಳಿಸಿಕೊಳ್ಳುತ್ತದೆ. ಅನ್ಯದ ಕಡೆ ಆಸಕ್ತಿ ಮೂಡುವಂತೆ ಮಾಡಿ ಅದರೊಂದಿಗೆ ಒಳಗೊಳ್ಳುವುದು ಹೇಗೆಂದು ಯೋಚಿಸಲು ಸಹಾಯ ಮಾಡುತ್ತದೆ. ಆದರೆ ಕಲೆಯ ಧ್ಯಾನ ಮತ್ತು ಸ್ಪರ್ಶದಿಂದ ದೂರ ಉಳಿದ ಮನುಷ್ಯ ತನ್ನ ವಿಕಾರಗಳನ್ನೆಲ್ಲ ಸಮಯ, ಸಂದರ್ಭ, ಸ್ಥಳವನ್ನು ಗಮನಿಸದೇ ಹೊರಹಾಕುವ ಸಾಧ್ಯತೆ ಇರುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ.
The artist quickly came back and restored his work https://t.co/GoSmsNMC8b
— Crazy Clips (@crazyclipsonly) June 12, 2023
ಈ ವಿಡಿಯೋ ಸೆರೆಯಾಗಿರುವುದು ರಾಯಲ್ ಹವಾಯಿನ್ ಹೋಟೆಲ್ನಲ್ಲಿ. ಇಲ್ಲೊಂದು ಮರಳ ಶಿಲ್ಪವಿದೆ. ಒಬ್ಬಾಕೆ ಇದರ ಮೇಲೆ ವಸ್ತುಗಳನ್ನೆಸೆದು ಧ್ವಂಸ ಮಾಡಲು ಯತ್ನಿಸುತ್ತಿದ್ದಾಳೆ. ಇನ್ನೊಬ್ಬಾಕೆ ಮೊಬೈಲ್ನಲ್ಲಿ ಈ ದೃಶ್ಯವನ್ನು ಸೆರೆಹಿಡಿಯುತ್ತಿದ್ದಾಳೆ. ಇವರಿಬ್ಬರೂ ಹೀಗೆ ಯಾಕೆ ಸೂಕ್ಷ್ಮತೆ ಕಳೆದುಕೊಂಡು ವರ್ತಿಸುತ್ತಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಇವರಿಬ್ಬರ ಬೇಜವಾಬ್ದಾರಿ ವರ್ತನೆಯ ವಿರುದ್ಧ ಕ್ರಮ ಕೈಗೊಂಡ ಹೊನೊಲುಲು ಪೊಲೀಸರು ಇವರಿಬ್ಬರನ್ನೂ ಬಂಧಿಸಿದ್ದಾರೆ. ಸದ್ಯ, ಈ ಕಲಾಕೃತಿಯ ಕರ್ತೃ ತಕ್ಷಣವೇ ಅದನ್ನು ಮರುರೂಪಿಸಿ ಒಪ್ಪಗೊಳಿಸಿದ್ದಾರೆ.
ಇದನ್ನೂ ಓದಿ : Viral: ಟೈ ಕಟ್ಟಿಕೊಳ್ಳುವುದು ಹೀಗೆ; ಸಂದರ್ಶನಕ್ಕೆ ಹೊರಟಿದ್ದ ಯುವಕನಿಗೆ ಅಜ್ಜನ ಪಾಠ
ಈತನಕ 23 ಮಿಲಿಯನ್ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಇವರಿಬ್ಬರ ಕೃತ್ಯಕ್ಕೆ ಅನೇಕರು ಬೇಸತ್ತು ಪ್ರತಿಕ್ರಿಯಿಸುತ್ತಿದ್ದಾರೆ. ಸ್ವಾದವಿರದ ಬರ್ಗರ್, ಪಿಝಾ ತಟ್ಟೆಗಳಿಗಿಂತ ವೇಗವಾಗಿ ಈಕೆ ಮರಳಿನ ಶಿಲ್ಪವನ್ನು ಧ್ವಂಸ ಮಾಡುತ್ತಿದ್ದಾರೆ. ಪುಣ್ಯಕ್ಕೆ ಗಾಜನ್ನು ಆಕೆ ಒಡೆದಿಲ್ಲ. ಈಕೆಯ ಬಗ್ಗೆ ಕನಿಕರವಾಗುತ್ತಿದೆ, ಪೋಷಕರು ಶಿಸ್ತಿನ ಜೀವನದ ಬಗ್ಗೆ ಹೇಳಿಕೊಟ್ಟಿದ್ದರೆ ಈಕೆ ಹೀಗೆ ವರ್ತಿಸುತ್ತಿರಲಿಲ್ಲ… ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ಧಾರೆ.
ಎಲ್ಲವನ್ನೂ ಪೋಷಕರ ತಲೆಗೇ ಕಟ್ಟಿದರೆ ಹೇಗೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:50 pm, Tue, 13 June 23