Viral : ಆಗಾಗ ಗಿನ್ನೀಸ್ ದಾಖಲೆ ಬರೆದವರ ಬಗ್ಗೆ ಓದುತ್ತಿರುತ್ತೀರಿ. ಈ ಬಾರಿ ಅಮೆರಿಕದ ತಾನ್ಯಾ ಹರ್ಬರ್ಟ್ ಎನ್ನುವವರ ಬಗ್ಗೆ ನೀವು ಓದಬಹುದು. ಇವರು ತಮ್ಮ ಅತೀ ದೊಡ್ಡ ಪಾದಗಳಿಂದಾಗಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇವರ ಬಲಪಾದವು ಸುಮಾರು 33.1 ಸೆಂ.ಮೀ (13.3 ಇಂಚು), ಎಡಪಾದವರು 32.5 ಸೆಂ.ಮೀ (12.79 ಇಂಚು). ಇವರ ಚಪ್ಪಲಿಯ ಅಳತೆಯು 18. ಅಮೆರಿಕದಲ್ಲಿ ವಾಸಿಸುವ ಮಹಿಳೆಯರ ಎತ್ತರ ಸಾಮಾನ್ಯವಾಗಿ 6ರಿಂದ 9 ಅಡಿ. ಈಕೆ ರುಮೇಯ್ಸಾ ಗೆಲ್ಸಿಗಿಂತ ಮೂರು ಇಂಚು ಕಡಿಮೆ ಎತ್ತವನ್ನು ಹೊಂದಿದ್ದಾರೆ. ಇವರ ಎತ್ತರ 7.7 ಅಡಿ.
ಬೂಟು ಅಥವಾ ಚಪ್ಪಲಿಗಳಿಗಾಗಿ ಅಂಗಡಿಗಳನ್ನು ಹುಡುಕಾಡುವುದೇ ತನಗೆ ದೊಡ್ಡ ಕೆಲಸ ಎನ್ನುತ್ತಾರೆ ತಾನ್ಯಾ, ‘ಗಂಡಸರಿಗೆ ಸಾಮಾನ್ಯವಾಗಿ 16 ನಂಬರಿನ ಚಪ್ಪಲಿಗಳು ಲಭ್ಯ. ಆದರೆ ನನ್ನ ಚಪ್ಪಲಿಯ ಅಳತೆಯೇ 18. ಹೈಸ್ಕೂಲು ಓದುತ್ತಿದ್ದಾಗಲೇ ನನ್ನ ಪಾದಗಳು ಬಹಳ ಸಾಕಷ್ಟು ಉದ್ದವಿದ್ದವು. ನನ್ನ ಎತ್ತರದ ದೇಹದಿಂದಾಗಿ ನಾನು ಕುಗ್ಗುತ್ತಿದ್ದೆ. ಆದರೆ ನನ್ನ ಪೋಷಕರು ನನ್ನಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ತುಂಬುತ್ತ ಬೆಳೆಸಿದರು. ಬಹಳಷ್ಟು ಪ್ರೀತಿಸಿದರು. ನನ್ನ ಸ್ನೇಹಿತರೂ ನನ್ನ ಬಗ್ಗೆ ಬಹಳಷ್ಟು ಕಾಳಜಿ ವಹಿಸಿದರು. ಆದರೂ ಪಠ್ಯೇತರ ಚಟುವಟಿಕೆಗಳಲ್ಲಿ ನನಗೆ ಅಷ್ಟೊಂದು ಆಸಕ್ತಿ ಇರುತ್ತಿರಲಿಲ್ಲ. ಹೀಗಾಗಿ ಕ್ರೀಡಾ ತರಬೇತುದಾರರು ಈ ಬಗ್ಗೆ ಬೇಸರಗೊಳ್ಳುತ್ತಿದ್ದರು. ಏಕೆಂದರೆ ನಾನು ಬಾಸ್ಕೆಟ್ ಬಾಲ್ನಲ್ಲಿ ಕೌಶಲ ಸಾಧಿಸಬೇಕೆಂದು ಅವರು ಇಚ್ಛಿಸಿದ್ದರು. ಆದರೆ ನಾನು ಮಾತ್ರ ಯಾವಾಗಲೂ ಶಿಕ್ಷಣದ ಕಡೆಯೇ ಹೆಚ್ಚು ಗಮನ ಕೊಡುತ್ತಿದ್ದೆ.’ ಎಂದಿದ್ದಾರೆ.
‘ನಾನು ಯಾವಾಗಲೂ ಗಂಡಸರು ಧರಿಸುವ ಟೆನ್ನಿಸ್ ಬೂಟುಗಳನ್ನೇ ಖರೀದಿಸುತ್ತೇನೆ. ಅವು ಹಾಳಾಗದಂತೆ ಕಾಪಾಡಿಕೊಳ್ಳುತ್ತೇನೆ. ಸಾಮಾನ್ಯವಾಗಿ 12 ಅಥವಾ 13 ಸೈಝಿನ ಚಪ್ಪಲಿಗಳಿಗಾಗಿ ಮಹಿಳೆಯರು ಹುಡುಕಾಟ ನಡೆಸಿರುತ್ತಾರೆ. ಆದರೆ ನಾನು 18 ನಂಬರಿನ ಚಪ್ಪಲಿಯನ್ನು ಹುಡುಕುತ್ತಿರುತ್ತೇನೆ’ ಎಂದಿದ್ಧಾರೆ.
ಗಂಡಸರ ಚಪ್ಪಲಿ ಬೂಟು ಹುಡುಕುವುದು ಸುಲಭ. ಆದರೆ ಹೆಣ್ಣುಮಕ್ಕಳ ಚಪ್ಪಲಿ ಹುಡುಕುವುದು ಅತೀ ದುಸ್ತರದ ಕೆಲಸ ಅದರಲ್ಲೂ ನನ್ನ ವಿಷಯವಾಗಿ ಎಂದಿದ್ದಾರೆ ಆಕೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ