
ಥೈಲ್ಯಾಂಡ್, ಜುಲೈ 13: ಪ್ರಾಣಿಗಳು ಮನುಷ್ಯರ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತವೆ. ತನ್ನನ್ನು ಯಾರು ಹೆಚ್ಚು ಪ್ರೀತಿ ಮಾಡುತ್ತಾರೋ ಅವರೆಂದರೆ ಅವುಗಳಿಗೆ ಅದೇನೋ ಸಲಿಗೆ, ಎಲ್ಲಿಲ್ಲದ ಪ್ರೀತಿ. ಇದೀಗ ಥೈಲ್ಯಾಂಡ್ ಉದ್ಯಾನವನವೊಂದರ (Elephant Park in Thailand) ಹೃದಯಸ್ಪರ್ಶಿ ಕ್ಷಣದ ದೃಶ್ಯವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಬಟೂಲ್ (Batool) ಹೆಸರಿನ ಮಹಿಳೆಯೊಬ್ಬಳು ಪಾರ್ಕ್‌ಗೆ ಭೇಟಿ ಕೊಟ್ಟ ವೇಳೆ ಮರಿಯಾನೆಯೊಂದು ಆಕೆಯ ಕೆನ್ನೆಗೆ ಮುತ್ತಿಟ್ಟಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
draroobabatool ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಇದುವರೆಗಿನ ಅತ್ಯಂತ ಅನಿರೀಕ್ಷಿತ ಮುತ್ತು. ನಾನು ಹಲೋ ಎಂದು ಹೇಳಲು ಹೋಗಿದ್ದೆ. ಆದರೆ, ಅದಕ್ಕೆ ಪ್ರತಿಯಾಗಿ ಮುತ್ತು ನಿರೀಕ್ಷಿಸಿರಲಿಲ್ಲ. ಈ ಮರಿಯಾನೆಯ ಹೆಸರು ಅಮೆಲಿಯಾ, ಆಕೆಗೆ ಮೂರು ವರ್ಷ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಇದರಲ್ಲಿ ಥೈಲ್ಯಾಂಡ್ ಉದ್ಯಾನವನಕ್ಕೆ ಭೇಟಿ ಕೊಟ್ಟ ಬಟೂಲ್ ಅವರು ಮೂರು ವರ್ಷದ ಅಮೆಲಿಯಾ ಮರಿಯಾನೆಯ ಹತ್ತಿರ ನಿಂತಿರುವುದನ್ನು ನೋಡಬಹುದು. ಮೊದಲಿಗೆ ಇಬ್ಬರ ನಡುವೆ ಶಾಂತ ಸಂವಹನವು ನಡೆಯುವಂತೆ ಕಾಣುತ್ತಿದೆ. ಆ ಬಳಿಕ ಅಮೆಲಿಯಾ ತನ್ನ ಸೊಂಡಿಲನ್ನು ಮೇಲಕ್ಕೆತ್ತಿ ಮಹಿಳೆಯ ಕೆನ್ನೆಗೆ ಮುತ್ತನ್ನಿಟ್ಟಿದೆ.
ಇದನ್ನೂ ಓದಿ : Video : ರೈಲ್ವೆ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ : ಎರಡು ಗಂಟೆಗಳ ಕಾಲ ಸ್ಥಗಿತಗೊಂಡ ರೈಲು
ಈ ವಿಡಿಯೋ ನಾಲ್ಕು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು, ಈ ದೃಶ್ಯ ನೋಡಲು ನಿಜಕ್ಕೂ ಮುದ್ದಾಗಿದೆ, ಕ್ಯೂಟಿ ಎಂದಿದ್ದಾರೆ. ಇನ್ನೊಬ್ಬರು, ನಾನು ನೋಡಿದ ಅದ್ಭುತ ಹೃದಯ ಸ್ಪರ್ಶಿ ವಿಡಿಯೋ ಎಂದಿದ್ದಾರೆ. ಮತ್ತೊಬ್ಬರು, ನಾನು ಈ ವಿಡಿಯೋವನ್ನು ನಾಲ್ಕರಿಂದ ಐದು ಬಾರಿ ನೋಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Sun, 13 July 25