
ಮರಿಯಾನೆಗಳು (baby elephant) ಏನು ಮಾಡಿದ್ರು ಮುದ್ದಾಗಿ ಕಾಣಿಸುತ್ತವೆ. ಅವುಗಳ ಆಟ ತುಂಟಾಟಗಳನ್ನು ನೋಡುವುದೇ ಖುಷಿ. ಇದೀಗ ಮರಿಯಾನೆ ತನ್ನ ತಾಯಿಯ ಜತೆಗೆ ಕುಳಿತಿದ್ದ ಮಾಲೀಕ ಕಂಡು ಅಸೂಯೆ ಪಟ್ಟುಕೊಂಡಿದೆ. ನೀನು ಇಲ್ಲಿ ಕೂತ್ಕೋಬಾರದು ಎಂಬಂತೆ ಎದ್ದು ಓಡಿಸಿದೆ. ಈ ಕ್ಯೂಟ್ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಂಜಿತಾ ರಾಜ (Ranjitha Raja) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ತಾಯಾನೆಯ ಪಕ್ಕದಲ್ಲಿ ಮಾಲೀಕನು ಕುಳಿತುಕೊಂಡಿರುವುದನ್ನು ಕಾಣಬಹುದು. ಇದೇ ವೇಳೆ ಮಾಲೀಕನು ತನ್ನ ತಾಯಿಯ ಜತೆಗೆ ಕುಳಿತುಕೊಂಡದ್ದನ್ನು ಕಂಡು ಒಂದೊಳ್ಳೆ ಉಪಾಯ ಮಾಡಿದೆ. ಕೊನೆಗೆ ಮಾಲೀಕನನ್ನು ತನ್ನ ಪುಟಾಣಿ ಸೊಂಡಿಲಿನಿಂದ ಮಾಲೀಕನನ್ನು ತಳ್ಳಿ ಓಡಿಸಿ ಕ್ಯೂಟ್ ರಿಯಾಕ್ಷನ್ ನೀಡಿರುವುದನ್ನು ಕಾಣಬಹುದು.
ಇದನ್ನೂ ಓದಿ: ತಾಯಿಯ ಹಿಂದೆ ಓಡುತ್ತಾ ಮುಗ್ಗರಿಸಿ ಬಿದ್ದ ಮರಿಯಾನೆ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಹತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಪುಟಾಣಿ ಆನೆಗೆ ಹೊಟ್ಟೆ ಕಿಚ್ಚು ನೋಡಿ ಎಂದಿದ್ದಾರೆ. ಇನ್ನೊಬ್ಬರು, ಕ್ಯೂಟ್ ಆದ ದೃಶ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಪ್ರಾಣಿಗಳೇ ಇರಲಿ, ಮನುಷ್ಯರೇ ಇರಲಿ ಭಾವನೆಗಳು ಇದ್ದೆ ಇರುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:02 pm, Thu, 24 September 26