Video: ಶಾಲೆ ಬಿಟ್ಟೊಡನೆ ಪುಸ್ತಕವನ್ನು ಚರಂಡಿಗೆ ಎಸೆದು ಹೋದ ಪುಟಾಣಿ

ಪುಟಾಣಿಗಳೇ ಹಾಗೆನೇ ಬಿಡಿ, ಪುಸ್ತಕ ಕಂಡರೆ ಓಡಿ ಹೋಗ್ತಾರೆ. ಹೀಗಾಗಿ ಮಕ್ಕಳ ಜೊತೆಗೆ ಕುಳಿತು ಹೋಮ್ ವರ್ಕ್ ಮಾಡಿಸುವುದೆಂದರೆ ಹೆತ್ತವರಿಗೆ ತಲೆ ನೋವು. ಆದರೆ ಪುಟ್ಟ ಹುಡುಗಿಯೂ ಶಾಲೆ ಬಿಟ್ಟೊಡನೆ ಪುಸ್ತಕವನ್ನು ಚರಂಡಿಗೆ ಎಸೆದು ಹೋದ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಶಾಲೆ ಬಿಟ್ಟೊಡನೆ ಪುಸ್ತಕವನ್ನು ಚರಂಡಿಗೆ ಎಸೆದು ಹೋದ ಪುಟಾಣಿ
ವೈರಲ್‌ ವಿಡಿಯೋ
Image Credit source: Facebook

Updated on: Feb 24, 2026 | 1:10 PM

ಈಗಿನ ಮಕ್ಕಳಿಗೂ (children) ಕೂಡ ಶಾಲೆಗೆ ಹೋಗೋದು, ಓದೋದು, ಹೋಮ್ ವರ್ಕ್ (home work) ಮಾಡುವುದೆಂದರೆ ದೊಡ್ಡ ತಲೆ ನೋವು. ಅದರಲ್ಲೂ ಈಗಿನ ಕಾಲದ ಮಕ್ಕಳಿಗೆ ಮುದ್ದು ಜಾಸ್ತಿ. ಮಕ್ಕಳು ಹೋಮ್ ವರ್ಕ್ ಮಾಡಲ್ಲ ಎಂದು ಹಠ ಹಿಡಿದರೆ ಅಮ್ಮನೇ ಹೋಮ್ ವರ್ಕ್ ಮಾಡಿಸಿಕೊಡುವಷ್ಟು ಮುದ್ದು ಹೆಚ್ಚಾಗಿದೆ. ಆದರೆ ಈ ವಿಡಿಯೋ ನೋಡಿದ ಮೇಲೆ ಈ ಪುಟಾಣಿಗೆ ಎಷ್ಟು ಟೆನ್ಶನ್ ಇದೆ ಎಂದು ತಿಳಿಯುತ್ತೆ. ಹೌದು, ಶಾಲೆಯಿಂದ ಮನೆಗೆ ಹೊರಟ ಪುಟಾಣಿಯೂ ಬ್ಯಾಗ್‌ನಲ್ಲಿದ್ದ ಪುಸ್ತಕ ತೆಗೆದು ಚರಂಡಿಗೆ ಎಸೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ  ನೆಟ್ಟಿಗರು ಈ ಪುಟಾಣಿ ಮಾಡಿದ ಕೆಲಸ ನೋಡಿ ಶಾಕ್ ಆಗಿದ್ದಾರೆ.

Bineesh kodiyeri ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಯೊಂದು ಶಾಲೆಯಿಂದ ಮನೆಗೆ ಹೋಗುತ್ತಿರುವುದನ್ನು ಕಾಣಬಹುದು. ಬ್ಯಾಗ್ ಹಾಕಿಕೊಂಡ ಈ ಪುಟ್ಟ ಹುಡುಗಿ ಚರಂಡಿ ಪಕ್ಕ ಬಂದು ನಿಲ್ಲುತ್ತಾಳೆ. ಆ ಬಳಿಕ ತನ್ನ ಬ್ಯಾಗ್‌ನಲ್ಲಿದ್ದ ಪುಸ್ತಕ ತೆಗೆದು ತನ್ನನ್ನು ಯಾರಾದರೂ ನೋಡುತ್ತಾರೆಯೇ ಎಂದು ಖಚಿತ ಪಡಿಸಿಕೊಂಡಿದ್ದು, ಪುಸ್ತಕವನ್ನು ಮೆಲ್ಲನೆ ಚರಂಡಿಯೊಳಗೆ ಹಾಕುತ್ತಾಳೆ. ಕೊನೆಗೆ ಖುಷಿಯಿಂದಲೇ ಕುಣಿಯುತ್ತ ಮನೆಯತ್ತ ಹೋಗುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಲಿಫ್ಟ್‌ನಲ್ಲಿ ಸಿಲುಕಿದ್ದ ಕಂದಮ್ಮಗಳನ್ನು ರಕ್ಷಿಸಿ ದೇವರಾದ ಪುಟ್ಟ ಬಾಲಕಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಪುಟ್ಟ ಹುಡುಗಿಯ ಐಡಿಯಾ ಅದ್ಭುತ ಎಂದಿದ್ದಾರೆ. ಮತ್ತೊಬ್ಬರು, ಎನ್ ತಲೆ ಗುರು ಈ ಪುಟಾಣಿಯದ್ದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಸಮಸ್ಯೆ ಕೊನೆಗೂ ಪರಿಹಾರ ಸಿಕ್ತು ಎಂದು ತಮಾಷೆಯಾಗಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:10 pm, Tue, 24 February 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us