Video: ಓಡುತ್ತಿದ್ದ ಕಂದಮ್ಮನ ಬಾಲ ಹಿಡಿದು ಎಳೆದು ನಿಲ್ಲಿಸಿದ ತಾಯಾನೆ, ವೈರಲ್‌ ಆಯ್ತು ದೃಶ್ಯ

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ ಪ್ರಪಂಚಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ತಾಯಾನೆ ಹಾಗೂ ಮರಿಯಾನೆ ಬಾಂಧವ್ಯ ಸಾರುವ ವಿಡಿಯೋ ಇದಾಗಿದೆ. ಓಟಕ್ಕಿತ್ತ ಮರಿಯಾನೆಯ ಬಾಲ ಹಿಡಿದು ತಾಯಾನೆಯೊಂದು ಬೀಳದಂತೆ ತಡೆದು ನಿಲ್ಲಿಸಿದ ದೃಶ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಓಡುತ್ತಿದ್ದ ಕಂದಮ್ಮನ ಬಾಲ ಹಿಡಿದು ಎಳೆದು ನಿಲ್ಲಿಸಿದ ತಾಯಾನೆ, ವೈರಲ್‌ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Jul 22, 2026 | 1:03 PM

ತಾಯಿಯ (mother) ಪ್ರೀತಿಯೇ ಹಾಗೆ, ಈ ವಿಚಾರದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ. ಕಂದಮ್ಮಗಳ ಮೇಲೆ ಕಾಳಜಿ ವಹಿಸುವ ವಿಡಿಯೋಗಳನ್ನು ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಹೃದಯ ಸ್ಪರ್ಶಿ ವಿಡಿಯೋ ಇದಾಗಿದೆ. ಮರಿಯಾನೆ ಓಡಲು ಶುರು ಮಾಡಿದ್ದು, ಇದೇ ವೇಳೆ ತಾಯಾನೆಯೊಂದು (mother elephant) ತನ್ನ ಕಂದಮ್ಮನ ಬಾಲ ಹಿಡಿದು ಓಡದಂತೆ ತಡೆದು ನಿಲ್ಲಿಸಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.

ಗ್ಲೋಬಲ್ ನೇಚರ್ ರಿಸರ್ವ್ (globalnaturereserve) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮರಿಯಾನೆಯೊಂದು ಒಂದೇ ಸಮನೆ ಓಡಲು ಶುರು ಮಾಡಿದೆ. ಇದನ್ನು ನೋಡಿದ ತಾಯಾನೆ ಮರಿಯಾನೆಯ ಬಾಲ ಹಿಡಿದು ಓಡಿ ಹೋಗದಂತೆ ತಡೆದು ನಿಲ್ಲಿಸಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಾಯಾನೆಯಂತೆ ಮರಳನ್ನು ಮೈ ಮೇಲೆ ಎರಚಿಕೊಂಡು ಸ್ನಾನ ಮಾಡಿದ ಮರಿಯಾನೆ

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ತಾಯಿ ಪ್ರೀತಿಗೆ ಸರಿಸಾಟಿ ಇಲ್ಲ ಎಂದಿದ್ದಾರೆ. ಇನ್ನೊಬ್ಬರು, ಕ್ಯೂಟ್ ಎಂದರೆ, ಮತ್ತೊಬ್ಬರು, ಮರಿಯಾನೆಗಳು ಏನು ಮಾಡಿದ್ರೂ ಚಂದನೇ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us