AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತಾಯಾನೆಯಂತೆ ಮರಳನ್ನು ಮೈ ಮೇಲೆ ಎರಚಿಕೊಂಡು ಸ್ನಾನ ಮಾಡಿದ ಮರಿಯಾನೆ

ಸೋಷಿಯಲ್‌ ಮೀಡಿಯಾದಲ್ಲಿ ಪ್ರಾಣಿ ಸಾಮ್ರಾಜ್ಯಗಳಿಗೆ ಸಂಬಂಧಿಸಿದ ವಿಡಿಯೋಗಳು ವೈರಲ್‌ ಆಗುತ್ತವೆ. ಈ ಆನೆಗಳ ಆಟ ತುಂಟಾಟಗಳ ನೋಡುವುದೇ ಖುಷಿ. ಇದೀಗ ಮರಿಯಾನೆಯೊಂದು ತಾಯಿಯಂತೆ ಮರಳನ್ನು ಮೈ ಮೇಲೆ ಎರಚಿಕೊಂಡಿದೆ. ಈ ಕ್ಯೂಟೆಸ್ಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತಾಯಾನೆಯಂತೆ  ಮರಳನ್ನು ಮೈ ಮೇಲೆ ಎರಚಿಕೊಂಡು ಸ್ನಾನ ಮಾಡಿದ ಮರಿಯಾನೆ
ವೈರಲ್ ವಿಡಿಯೋImage Credit source: Twitter
ಸಾಯಿನಂದಾ
|

Updated on: Jul 20, 2026 | 2:35 PM

Share

ಮರಿಯಾನೆಗಳು (baby elephants) ಏನು ಮಾಡಿದ್ರೂ ನೋಡೋಕೆ ಚಂದ. ನೀವು ಈ ದೃಶ್ಯ ನೋಡಿದ್ರೆ ಮತ್ತೆ ಮತ್ತೆ ನೋಡ್ತೀರಾ. ಮರಿಯಾನೆಯೊಂದು ತನ್ನ ತಾಯಿಯನ್ನೇ ಅನುಕರಣೆ ಮಾಡಿದೆ. ತಾಯಾನೆಯಂತೆ ಮೈ ಮೇಲೆ ಮರಳನ್ನು ಎರಚಿಕೊಂಡು ಧೂಳಿನ ಸ್ನಾನ ಮಾಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಈ ಆನೆ ಮರಿಯ ತುಂಟಾಟ ಕ್ಕೆ ಫಿದಾ ಆಗಿದ್ದಾರೆ.

ಸಾಫ್ಫ್ರೆಂನ್ ಸ್ನೈಪರ್ (saffron sniper) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತಾಯಿಯೊಂದು ಮರಳನ್ನು ಮೈ ಮೇಲೆ ಎರಚಿಕೊಳ್ಳುತ್ತಿದೆ. ಇದನ್ನು ನೋಡಿದ ಮರಿಯಾನೆಯು ತನ್ನ ತಾಯಿಯಂತೆ ಮರಳನ್ನು ಮೈ ಮೇಲೆ ಎರಚಿಕೊಂಡು ಧೂಳಿನ ಸ್ನಾನ ಮಾಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಾಲೀಕನ ತೊಡೆ ಮೇಲೆ ತಲೆಯಿಟ್ಟು ಮಲಗಿದ ಮರಿಯಾನೆ

ಈ ವಿಡಿಯೋ ಮೂವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ತುಂಬಾ ಸುಂದರವಾದ ಕ್ಷಣ ಎಂದರೆ, ಮತ್ತೊಬ್ಬರು, ಈ ಪುಟಾಣಿ ಮರಿಯಾನೆ ಎಷ್ಟು ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಒಳ್ಳೆಯ ಕೆಲಸ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More