Dogs : ಅನೇಕರಿಗೆ ಸಾಕುಪ್ರಾಣಿಗಳೆಂದರೆ ಮನುಷ್ಯರಿಗಿಂತ ಹೆಚ್ಚು. ಒಂದರ್ಥದಲ್ಲಿ ಕುಟುಂಬ ಸದಸ್ಯರಂತೆಯೇ. ತಾವು ಎಲ್ಲಿಯೇ ಹೋದರೂ ಅವುಗಳನ್ನು ಕರೆದುಕೊಂಡು ಹೋಗುತ್ತಾರೆ. ಅವುಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಅರೆಗಳಿಗೆಯೂ ಅವುಗಳನ್ನು ಬಿಟ್ಟಿರಲಾರರು. ಹೀಗಿರುವಾಗ ಸಾಕಿದ ಪ್ರಾಣಿಯೊಂದು ಕಳೆದು ಹೋದರೆ ಹೇಗಾಗಬೇಡ? ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈ ದಂಪತಿಗೆ ಕಳೆದುಹೋದ ತಮ್ಮ ನಾಯಿ ಮತ್ತೆ ಸಿಕ್ಕಿದೆ. ಭಾವೋದ್ವೇಗದಿಂದ ಅದನ್ನು ಅಪ್ಪಿ ಮುದ್ದಾಡಿದ್ದಾರೆ.
ಮರಭೂಮಿಯಲ್ಲಿ ಪ್ರಯಾಣಿಸುತ್ತಿದ್ಧಾದ ಈ ನಾಯಿ ಇವರಿಂದ ತಪ್ಪಿಸಿಕೊಂಡಿದೆ. ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ. ನಾಲ್ಕು ದಿನಗಳ ಕಾಲ ದುಃಖದಲ್ಲಿಯೇ ಈ ದಂಪತಿ ದಿನ ಕಳೆದಿದ್ದಾರೆ. ಅಂತೂ ನಾಯಿಗೆ ಅವರು, ಅವರಿಗೆ ನಾಯಿ ಸಿಕ್ಕು ಸಂತೋಷ ಮತ್ತು ಸಮಾಧಾನದ ಗಳಿಗೆಗಳು ಸೃಷ್ಟಿಯಾಗಿವೆ.
ಇದನ್ನೂ ಓದಿ : Viral: ಈ ಬಂಧನ… ವರದಕ್ಷಿಣೆ ಕೇಳಿದ ವರನಿಗೆ ಹಗ್ಗದ ಅನುಬಂಧನ
ಈ ವಿಡಿಯೋ ಅನ್ನು ಈತನಕ ಸುಮಾರು 33,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಹೃದಯಸ್ಪರ್ಶಿಯಾದ ಈ ವಿಡಿಯೋ ನೋಡಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಇವುಗಳ ಸಂತೋಷದಲ್ಲಿ ನಾನೂ ಪಾಲ್ಗೊಂಡಿದ್ದೇನೆ, ಅಕ್ಷರಶಃ ಇದನ್ನು ಅನುಭವಿಸುತ್ತಿದ್ದೇನೆ. ಈ ಪುನರ್ಮಿಲನವು ಅತ್ಯಂತ ಆಪ್ತವಾಗಿದೆ. ದೇವರೇ ಈ ಕ್ಷಣಗಳನ್ನು ನಾನು ನಿಜವಾಗಿಯೂ ಅನುಭವಿಸುತ್ತಿದ್ದೇನೆ. ಈ ಮಗು ಅವರ ಮನೆಗೆ ಮರಳಿದೆಯಲ್ಲ ಅದು ಹೇಳಿಕೊಳ್ಳಲಾಗದ ಭಾವ… ಅಂತೆಲ್ಲ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Viral: ಹೆಬ್ಬಾವೇ ಶವರ್ ಬಾತ್ ಬೇಕಿತ್ತೆ ನಿನಗೆ? ಆಸ್ಟ್ರೇಲಿಯಾದಲ್ಲಿ ನಡೆದ ಘಟನೆ
ಎಷ್ಟೊಂದು ಜೋರಾಗಿ ಅಪ್ಪಿಕೊಂಡಿದ್ದೀರಿ, ನಾಯಿ ಅಪ್ಪಚ್ಚಿಯಾಗುತ್ತಿದೆ. ನನಗೂ ಸ್ವಲ್ಪ ಜಾಗ ಕೊಟ್ಟಿದ್ದರೆ ನಿಮ್ಮ ಈ ಖುಷಿಯಲ್ಲಿ ಭಾಗಿಯಾಗುತ್ತಿದ್ದೆ. ಆ ನಾಯಿ ಕೂಡ ಎಷ್ಟು ಖುಷಿಯಿಂದ ಮತ್ತು ಸಮಾಧಾನದಿಂದ ಇದೆ. ಅಲ್ಲಾಡಿಸುತ್ತಿರುವ ಬಾಲಕ್ಕಾದರೂ ಸ್ವಲ್ಪ ಜಾಗ ಕೊಡಿ ಎಂದು ತಮಾಷೆ ಮಾಡಿದ್ಧಾರೆ ಒಬ್ಬರು. ನನ್ನ ನಾಯಿ ಇನ್ನೂ ಮರಳಿ ಬಂದಿಲ್ಲ. ಈ ವಿಡಿಯೋ ನೋಡಿ ನನ್ನ ಕಣ್ಣುಗಳು ಉಕ್ಕುತ್ತಿವೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:29 am, Mon, 19 June 23