ಅಯ್ಯೋ ರಾಮ, ಅಮ್ಮ ನಿಂಗೆ ಹೇಗೆ ಅರ್ಥ ಮಾಡಿಸೋದು ಗೊತ್ತಾಗ್ತಿಲ್ಲ ನನಗೆ, ಈ ಪುಟಾಣಿಯ ಕಷ್ಟ ನೋಡಿ

ಪುಟಾಣಿ ಮಕ್ಕಳು ಮುದ್ದು ಮುದ್ದಾಗಿ ಮಾತನಾಡುವುದನ್ನು ನೋಡುವುದೇ ಚಂದ. ಕೆಲವೊಮ್ಮೆ ಈ ಪುಟಾಣಿಗಳು ಹಠ ಮಾಡಲು ಶುರು ಮಾಡಿದರೆ ಸಮಾಧಾನ ಮಾಡುವಷ್ಟರಲ್ಲಿ ತಾಯಂದಿರಿಗೆ ಸಾಕಾಗಿ ಹೋಗಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿಯೊಂದು ತಟ್ಟೆಗೆ ತಾನೇ ಊಟ ಬಡಿಸಿಕೊಳ್ಳುವೆ ಎನ್ನುತ್ತಾ ಹಠ ಹಿಡಿದಿದ್ದು, ಮುದ್ದು ಮುದ್ದಾದ ಮಾತನಾಡಿದೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಈ ಪುಟಾಣಿಯ ಎಕ್ಸ್ಪ್ರೆಶನ್ ಗೆ ಎಲ್ಲರೂ ಫಿದಾ ಆಗಿದ್ದಾರೆ.

ಅಯ್ಯೋ ರಾಮ, ಅಮ್ಮ ನಿಂಗೆ ಹೇಗೆ ಅರ್ಥ ಮಾಡಿಸೋದು ಗೊತ್ತಾಗ್ತಿಲ್ಲ ನನಗೆ, ಈ ಪುಟಾಣಿಯ ಕಷ್ಟ ನೋಡಿ
ವೈರಲ್ ವಿಡಿಯೋ
Image Credit source: Instagram

Updated on: May 30, 2025 | 12:14 PM

ಪುಟಾಣಿ (little kids) ಗಳೇ ಹಾಗೆ ಸಿಟ್ಟು ಬಂದರೆ ಕೈಯಲ್ಲಿರುವುದನ್ನು ಎತ್ತಿ ಬಿಸಾಡುತ್ತದೆ. ತನ್ನದೇ ಭಾಷೆಯಲ್ಲಿ ಬೈಯುತ್ತಾ ಕ್ಯೂಟ್ ಎಕ್ಸ್ಪ್ರೆಶನ್ ನೀಡುವುದನ್ನು ನೋಡುತ್ತಿದ್ದರೆ ಅಪ್ಪಿ ಮುದ್ದಾಡಬೇಕೆನಿಸುವುದು ಸಹಜ. ಪುಟ್ಟ ಕಂದಮ್ಮಗಳ ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಮಗುವೊಂದು ತನ್ನ ಪ್ಲೇಟ್‌ಗೆ ತಾನೇ ಊಟ ಬಡಿಸಿಕೊಳ್ಳುವೆ ಎಂದು ಹಠ ಹಿಡಿದಿದೆ. ಆದರೆ ಹೆತ್ತವರು ಬೇಡ ಎಂದದ್ದಕ್ಕೆ ತನ್ನದೇ ಭಾಷೆಯಲ್ಲಿ ಅವರಿಗೆಲ್ಲರಿಗೂ ಬೈಯುತ್ತಾ ಮುದ್ದಾಗಿ ಎಕ್ಸ್ಪ್ರೆಶನ್ ನೀಡಿದ್ದು ಈ ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿದ್ದಂತೆ ಈ ಪುಟಾಣಿ ಎಲ್ಲರ ಮನಸ್ಸು ಗೆದ್ದುಕೊಂಡಿದೆ

akkacheliaanimayalu ಹೆಸರಿನ ಖಾತೆಯಲ್ಲಿ ಪುಟಾಣಿಯ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಟೇಬಲ್ ಮೇಲೆ ವಿವಿಧ ಬಗೆಯ ಭಕ್ಷ್ಯಗಳನ್ನು ಇಡಲಾಗಿದೆ. ಪುಟಾಣಿಯೊಂದು ತಟ್ಟೆಯನ್ನು ಹಿಡಿದು ತಾನೇ ಹಾಕಿಕೊಳ್ಳುವೆ ಎನ್ನುತ್ತಿದೆ. ಆ ಪುಟಾಣಿ ತಾಯಿ ಬೇಡ ಅವರು ನಿಂಗೆ ಹೊಡೀತಾರೆ ಎನ್ನುತ್ತಿದ್ದಂತೆ ಕೈಯಲ್ಲಿದ್ದ ತಟ್ಟೆಯನ್ನು ಸಿಟ್ಟಿನಿಂದ ಬಿಸಾಡಿದೆ. ಅಷ್ಟೇ ಅಲ್ಲದೇ ಕೈಯಿಂದ ತನ್ನ ತಲೆಯನ್ನು ಜಜ್ಜಿಕೊಳ್ಳುತ್ತಾ ತನ್ನದೇ ಭಾಷೆಯಲ್ಲಿ ಎಲ್ಲರಿಗೂ ಬೈಯುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ
ಈ ರೀತಿ ಕುತ್ತಿಗೆ ತೂಗು ಹಾಕುವ ವಿಧಾನದಿಂದ ಈ ಗಂಭೀರ ಕಾಯಿಲೆ ಮಾಯ
ಪುಟ್ಟ ಯಕ್ಷ ಕನ್ಯೆ, ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕುಣಿದ ಕಂದಮ್ಮ
ಟೀ ಎಸ್ಟೇಟ್‌ನಲ್ಲಿ ಮರಿಗಳೊಂದಿಗೆ ಪ್ರತ್ಯಕ್ಷವಾದ ಹುಲಿ
ಕಮಲ್ ಹಾಸನ್ ಹೇಳಿದ್ದು ಸುಳ್ಳು, ಕನ್ನಡವು ಸಂಸ್ಕೃತ ಆಧಾರಿತ

ಇದನ್ನೂ ಓದಿ :ಇದನ್ನೂ ಓದಿ :ನದಿಯಲ್ಲಿ ಸಿಲುಕಿದ ಕಾರನ್ನು ಕ್ಷಣಾರ್ಧದಲ್ಲಿ ಹೊರತೆಗೆದ ಗಜರಾಜ, ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು 21 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನನೆಟ್ಟಿಗರು ಈ ಪುಟಾಣಿಯ ಆಕ್ಟಿಂಗ್ ಕಂಡು ಶಾಕ್ ಆಗಿದ್ದಾರೆ. ಈ ವಿಡಿಯೋಗೆ ಬಳಕೆದಾರರೊಬ್ಬರು, ಆಸ್ಕರ್ ಲೆವೆಲ್ ಆಕ್ಟಿಂಗ್ ಎಂದಿದ್ದಾರೆ. ಮತ್ತೊಬ್ಬರು, ಎಷ್ಟು ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಮಹಾನಟಿ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ