Viral video: ತನ್ನನ್ನು ಮುದ್ದಾಡಬೇಕು ಎಂದು ಈ ಶ್ವಾನ ಏನೆಲ್ಲಾ ನಾಟಕ ಮಾಡುತ್ತದೆ ನೋಡಿ

ಡೆಲಿವರಿ ಏಜೆಂಟ್ ತನ್ನನ್ನು ಮುದ್ದು ಮಾಡಬೇಕೆನ್ನುವ ಸಲುವಾಗಿ ನಾಯಿಯೊಂದು ಆತ ತನ್ನ ಪಕ್ಕ ಬರುತ್ತಿರುವುದನ್ನು ಕಂಡು ಬೆಂಚ್ ನಿಂದ ಕೆಳಗೆ ಬೀಳುವಂತೆ ನಾಟಕವಾಡಿದೆ. ರೆಡ್ಡಿಡ್ ಆ್ಯಪ್​​ನಲ್ಲಿ ಅಪ್ ಲೋಡ್ ಆದ ಈ ವಿಡಿಯೋ ಸದ್ಯ ವೈರಲ್ ಆಗಿದೆ.

Viral video: ತನ್ನನ್ನು ಮುದ್ದಾಡಬೇಕು ಎಂದು ಈ ಶ್ವಾನ ಏನೆಲ್ಲಾ ನಾಟಕ ಮಾಡುತ್ತದೆ ನೋಡಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 26, 2023 | 5:54 PM

ನಾಯಿ ಪ್ರಾಮಾಣಿಕ ಪ್ರಾಣಿ ಎನ್ನುವ ಮಾತಿದೆ. ಪ್ರಾಮಾಣಿಕವಾಗಿರುವುದು ಮಾತ್ರವಲ್ಲದೆ ಯಾರಾದರೂ ಅವುಗಳಿಗೆ ಒಂದು ತುತ್ತು ಊಟ ಹಾಕಿದರೆ ಸಾಕು, ಆ ವ್ಯಕ್ತಿಯನ್ನು ಸದಾ ಕಾಲ ನೆನಪಿಟ್ಟುಕೊಳ್ಳುತ್ತದೆ ಜೊತೆಗೆ ಪ್ರೀತಿಯನ್ನು ತೋರುತ್ತದೆ. ಹೆಚ್ಚಿನ ಜನರು ಮನೆಯಲ್ಲಿ ನಾಯಿಯನ್ನು ಸಾಕಲು ಬಯಸುತ್ತಾರೆ. ಹಾಗೂ ನಾಯಿಯನ್ನು ತಮ್ಮ ಮಗುವಿನ ತರಹ ನೋಡಿಕೊಳ್ಳುತ್ತಾರೆ. ನಾಯಿಗಳೂ ಅಷ್ಟೇ ಮನುಷ್ಯರು ತನ್ನನ್ನು ಮುದ್ದು ಮಾಡಬೇಕು, ತನ್ನ ತಲೆ, ಹೊಟ್ಟೆ ಸವರಬೇಕು ಎಂದೆಲ್ಲಾ ಬಯಸುತ್ತದೆ. ತನ್ನನ್ನು ಮುದ್ದು ಮಾಡಬೇಕು ಎನ್ನುವ ಸಲುವಾಗಿ ನಾಯಿಗಳು ತನ್ನ ಯಜಮಾನನ ಕಾಲಿನ ಸುತ್ತಲೂ ಓಡಾಡುತ್ತಿರುತ್ತದೆ. ಇದೇ ರೀತಿ ನಾಯಿಯೊಂದು ತನ್ನನ್ನು ಯಾರಾದರೂ ಮುದ್ದಾಡಬೇಕು ಎಂಬ ಸಲುವಾಗಿ ಡೆಲಿವರಿ ಏಜೆಂಟ್ ಮನೆಗೆ ಬರುವುದನ್ನು ಕಂಡು ಮನೆಯ ಹೊರಾಂಗಣ ಕಾರಿಡಾರ್​​​ನಲ್ಲಿ ಬೆಂಚ್ ಮೇಲೆ ಕುಳಿತಿದ್ದ ನಾಯಿ ಕೆಳಗೆ ಬೀಳುವಂತೆ ನಾಟಕವಾಡಿ, ಡೆಲಿವರಿ ಏಜೆಂಟ್ ಆ ನಾಯಿಯನ್ನು ಮುದ್ದಾಡುವಂತೆ ಮಾಡುತ್ತದೆ.

My Dog is the Reason Your Amazon Package is Late by u/b0ssdawg in AnimalsBeingDerps

ನಿಮ್ಮ ಅಮೆಜಾನ್ ಪ್ಯಾಕೆಜ್ ತಡವಾಗಿ ಬರುವುದಕ್ಕೆ ನನ್ನ ನಾಯಿ ಕಾರಣ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ರೆಡ್ಡಿಡ್ ಆ್ಯಪ್​​​ನಲ್ಲಿ ಪೋಸ್ಟ್ ಮಾಡಲಾಗಿದೆ. ಮನೆಯ ಕಾರಿಡಾರ್​​​ನಲ್ಲಿ ಬೆಂಚ್ ಮೇಲೆ ನಾಯಿಯೊಂದು ಮಲಗಿತ್ತು, ಡೆಲಿವರಿ ಏಜೆಂಟ್ ಪ್ಯಾಕೆಜ್ ಒಂದನ್ನು ಕೈಯಲ್ಲಿ ಹಿಡಿದುಕೊಂಡು ತನ್ನ ಮನೆಯ ಬಳಿ ಬರುವುದನ್ನು ನಾಯಿ ನೋಡಿತು. ಆತ ತನ್ನ ಬಳಿ ಇನ್ನೇನು ಬರುವಷ್ಟರಲ್ಲಿ ಬೆಂಚ್ ನಿಂದ ಕೆಳಗೆ ಬೀಳುತ್ತದೆ. ಕೆಳಗೆ ಬೀಳುತ್ತಿರುವ ನಾಯಿಯನ್ನು ತಕ್ಷಣವೇ ಡೆಲಿವರಿ ಏಜೆಂಟ್ ಹಿಡಿದುಕೊಳ್ಳುತ್ತಾನೆ. ನಂತರ ಆತ ಕೈಯಲ್ಲಿದ್ದ ಪ್ಯಾಕೆಜ್​​​ನ್ನು ಬೆಂಚ್ ಮೇಲೆ ಇಟ್ಟು ನಾಯಿಯ ಹೊಟ್ಟೆಯನ್ನು ಉಜ್ಜಲು ಪ್ರಾರಂಭಿಸುತ್ತಾನೆ ಮತ್ತು ಮುದ್ದಾಡುತ್ತಾನೆ. ಇದೀಗ ಈ ವೀಡಿಯೊ ವೈರಲ್​​ ಆಗಿದೆ. ಈ ಮುದ್ದಾದ ವಿಡಿಯೋ 89 ಸಾವಿರ ಅಪ್ ವೋಟ್ ಮತ್ತು ಸುಮಾರು 905 ಕಮೆಂಟ್​​ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Viral video: ಏಕಕಾಲಕ್ಕೆ ಈ ಬೈಕ್​​​ನಲ್ಲಿ 5 ರಿಂದ 8 ಜನ ಸವಾರಿ ಮಾಡಬಹುದು

ಒಬ್ಬ ಬಳಕೆದಾರರು ನಾಯಿಯ ಜೊತೆಗೆ ಆಟವಾಡಿದ ಸಮಯ ಆ ಡೆಲಿವರಿ ಏಜೆಂಟ್​​ಗೆ ಆ ಕೆಲಸದ ದಿನದ ಪ್ರಮುಖ ಅಂಶವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ನಿಮ್ಮ ನಾಯಿ ನಾಕಟದ ರಾಣಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕ ಬಳಕೆದಾರರು ಈ ವಿಡಿಯೋ ತುಂಬಾ ಮುದ್ದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ಮಾಡಿ

Published On - 5:54 pm, Wed, 26 April 23