Viral Video: ನೈಜೀರಿಯನ್​ ಯುವತಿ ಭಾರತೀಯ ವಧುವಿನಂತೆ ಕಂಗೊಳಿಸಿದಾಗ

Make up : ‘ಆಫ್ರಿಕನ್ ಹುಡುಗಿಯನ್ನು ಭಾರತೀಯ ವಧುವಿನ ಝಲಕಿನಲ್ಲಿ ಅಲಂಕರಿಸಿ ನೋಡುವುದು ನನ್ನ ಕನಸಾಗಿತ್ತು. ಅದಕ್ಕಾಗಿ ಆಫ್ರಿಕನ್ ಮಾಡೆಲ್ ಹುಡುಕುತ್ತಿದ್ದೆ. ಆದರೆ ನನಗೆ ನಿಜವಾದ ವಧುವೇ ಸಿಕ್ಕಳು.’ ಮೇಕಪ್​ ವಿಡಿಯೋ ನೋಡಿ.

Viral Video: ನೈಜೀರಿಯನ್​ ಯುವತಿ ಭಾರತೀಯ ವಧುವಿನಂತೆ ಕಂಗೊಳಿಸಿದಾಗ
ಮೇಕಪ್​ನ ಮೊದಲು ಮೇಕಪ್​ನ ನಂತರ
Edited By: ಶ್ರೀದೇವಿ ಕಳಸದ

Updated on: Aug 12, 2022 | 2:53 PM

Bridal Make up : ಮೇಕಪ್ ಕಲಾವಿದೆ ನೇಹಾ ವಾರೈಚ್ ಗ್ರೋವರ್ ನೈಜೀರಿಯಾದ ವಧುವಿಗೆ ಭಾರತೀಯ ವಧುವಿನಂತೆ ಅಲಂಕರಿಸಿರುವ ವಿಡಿಯೋ ಅನ್ನು ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅದೀಗ ವೈರಲ್ ಆಗಿದೆ. ಭಾರತೀಯ ವಿವಾಹ ಪದ್ಧತಿಯನ್ನು ವಿದೇಶಿಯರು ಮೆಚ್ಚಿಕೊಳ್ಳುವುದು ಮತ್ತು ಅಳವಡಿಸಿಕೊಳ್ಳುವುದು ಅನೇಕ ವರ್ಷಗಳಿಂದ ನಡೆದುಕೊಂಡೇ ಬಂದಿದೆ. ಇಂಟರ್​ನೆಟ್​ನ ಕಾಲದಲ್ಲಿ ಇದು ಇನ್ನಷ್ಟು ವ್ಯಾಪಕವಾಗಿ ಮತ್ತು ವೇಗದಲ್ಲಿ ವ್ಯಕ್ತಗೊಳ್ಳುತ್ತಿದೆ. ಅದರಲ್ಲೂ ವಿದೇಶಿ ವಧು ಅಥವಾ ವರ ಇಲ್ಲಿಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ವಿನ್ಯಾಸಕ್ಕಾಗಿ, ವೈಭವಕ್ಕಾಗಿ ಬಹಳ ಆಕರ್ಷಿತರಾಗುತ್ತಾರೆ.

ಈ ವಿಡಿಯೋ ನೋಡಿ…

ಇನ್ನು ಕಲಾವಿದರಿಗೆ ಪ್ರಯೋಗಗಳ ವಿಷಯವಾಗಿ ಅವರದೇ ಆದ ಕನಸುಗಳಿರುತ್ತವೆ. ಅಂತೆಯೇ ನೇಹಾ, ‘ಆಫ್ರಿಕನ್ ಹುಡುಗಿಯನ್ನು ಭಾರತೀಯ ವಧುವಿನ ಝಲಕಿನಲ್ಲಿ ನೋಡುವುದು ನನ್ನ ಕನಸಾಗಿತ್ತು. ಅದಕ್ಕಾಗಿ ಆಫ್ರಿಕನ್ ಮಾಡೆಲ್ ಹುಡುಕುತ್ತಿದ್ದೆ. ಆದರೆ ನನಗೆ ನಿಜವಾದ ವಧುವೇ ಸಿಕ್ಕಳು. ಅವಳ ಮದುವೆಯ ದಿನ ಅವಳನ್ನು ಗೊಂಬೆಯಂತೆ ಸಿಂಗರಿಸಲು ನನಗೆ ಅವಕಾಶ ಸಿಕ್ಕಿದ್ದು ಅದೃಷ್ಟವೆಂದೇ ಭಾವಿಸುವೆ.’ ಎಂದು ಪೋಸ್ಟ್​ನಲ್ಲಿ ಒಕ್ಕಣೆ ಬರೆದುಕೊಂಡಿದ್ದಾರೆ.

ಈ ವಿಡಿಯೋ ಐದು ಮಿಲಿಯನ್​ ವೀಕ್ಷಣೆಗೆ ಒಳಪಟ್ಟಿದೆ. ನೆಟ್ಟಿಗರು ಮೇಕಪ್​ನ ಚಾತುರ್ಯವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us