Viral Video: ಈ ಅಜ್ಜ-ಅಜ್ಜಿ ಮೊಮ್ಮಕ್ಕಳ ಬಂಧ ಸಾಟಿಯಿಲ್ಲದ್ದು. ಈ ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಿದ ಅಜ್ಜ ಮತ್ತು ಮೊಮ್ಮಗನ ಭೇಟಿಯ ವಿಡಿಯೋ ಈಗ ವೈರಲ್ ಆಗಿದೆ. ಎಲಿಜಬೆತ್ ಕ್ಯಾಸ್ಟ್ರೊ ಎಂಬ ಇನ್‌ಸ್ಟಾಗ್ರಾಮ್ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆಗಸ್ಟ್ 7 ರಂದು ಪೋಸ್ಟ್ ಮಾಡಲಾದ ಈ ವಿಡಿಯೋ 3 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಕರನ್ನು ಸೆಳೆದಿದೆ. ನೆಟ್ಟಿಗರು ತಮ್ಮ ಅನುಭವ, ಆಶಯಗಳನ್ನು ಪ್ರತಿಕ್ರಿಯೆಗಳ ಮೂಲಕ ಹಂಚಿಕೊಂಡಿದ್ದು ಹೃದ್ಯವಾಗಿದೆ.
ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಈ ವಿಡಿಯೋ ಪಡೆದಿದೆ. ತನ್ನ ಮೊಮ್ಮಗು ಎಂದು ಆ ಅಜ್ಜ ಸಂತೋಷದಿಂದ ಕೈ ಬೀಸುತ್ತಿರುತ್ತಾರೆ ಆದರೆ ಅದು ಅವರದಾಗಿರುವುದಿಲ್ಲ. ಒಡನೆಯೇ ತನ್ನ ಮೊಮ್ಮಗು ಅಜ್ಜನಿಗೆ ಕಾಣವುದರಿಂದ ಅಜ್ಜ ಖುಷಿಯಲ್ಲಿ ತೇಲಿ, ಮೊಮ್ಮಗುವನ್ನು ಭುಜದ ಮೇಲೆ ಕೂರಿಸಿಕೊಂಡು ಸಂಭ್ರಮಿಸುತ್ತಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ