AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂನಿಫಾರಂ ಧರಿಸಿ ಓನರ್ ಎದುರೇ ಸ್ಕೂಟಿ ಕಳ್ಳತನ ಮಾಡಿದ ಶಾಲಾ ಹುಡುಗಿಯರು; ಸಿಸಿಟಿವಿ ವಿಡಿಯೋ ವೈರಲ್

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಶಾಲಾ ಯೂನಿಫಾರಂ ಧರಿಸಿದ್ದ ಇಬ್ಬರು ಹುಡುಗಿಯರು ಅಪಾರ್ಟ್‌ಮೆಂಟ್‌ನ ಕೆಳಗೆ ನಿಲ್ಲಿಸಿದ್ದ ಸ್ಕೂಟರ್ ಅನ್ನು ಕದ್ದಿದ್ದಾರೆ. ಈ ಘಟನೆಯ ಸುದ್ದಿಯು ಎಲ್ಲೆಡೆ ಹರಡಿದ ನಂತರ ಜನರು ಅಭಯ್ ಡಿಯೋಲ್ ಅಭಿನಯದ ಚಲನಚಿತ್ರ "ಓಯ್ ಲಕ್ಕಿ! ಲಕ್ಕಿ ಓಯೆ!" ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ.

ಯೂನಿಫಾರಂ ಧರಿಸಿ ಓನರ್ ಎದುರೇ ಸ್ಕೂಟಿ ಕಳ್ಳತನ ಮಾಡಿದ ಶಾಲಾ ಹುಡುಗಿಯರು; ಸಿಸಿಟಿವಿ ವಿಡಿಯೋ ವೈರಲ್
ಯೂನಿಫಾರಂ ಧರಿಸಿ ಓನರ್ ಎದುರೇ ಸ್ಕೂಟಿ ಕಳ್ಳತನ ಮಾಡಿದ ಶಾಲಾ ಹುಡುಗಿಯರು
ಸುಷ್ಮಾ ಚಕ್ರೆ
|

Updated on:Sep 09, 2024 | 8:13 PM

Share

ವಾರಾಣಸಿ: ಇಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಶಾಲಾ ಸಮವಸ್ತ್ರ ಧರಿಸಿದ್ದ ಇಬ್ಬರು ಹುಡುಗಿಯರು ಅಪಾರ್ಟ್‌ಮೆಂಟ್‌ನ ಕೆಳಗೆ ನಿಲ್ಲಿಸಿದ್ದ ಸ್ಕೂಟರ್ ಅನ್ನು ಕದ್ದಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೊದಲ್ಲಿ, ದುರ್ಗಕುಂಡ್‌ನ ಕಬೀರ್ ನಗರದಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ನಿಲ್ಲಿಸಿದ ಸ್ಕೂಟರ್‌ ಚಲಾಯಿಸಿಕೊಂಡು ಹುಡುಗಿಯೊಬ್ಬಳು ಹೋಗುತ್ತಿರುವುದನ್ನು ಕಾಣಬಹುದು.

ಈ ಘಟನೆಯ ಸುದ್ದಿಯು ಸುತ್ತಲಿನ ಪ್ರದೇಶದಲ್ಲಿ ಹರಡಿದ ನಂತರ ಜನರು ಅಭಯ್ ಡಿಯೋಲ್ ಅಭಿನಯದ ಚಲನಚಿತ್ರ “ಓಯ್ ಲಕ್ಕಿ! ಲಕ್ಕಿ ಓಯೆ!” ಸಿನಿಮಾದ ಪಾತ್ರವನ್ನು ನೆನಪಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಸ್ಕೂಟಿಯ ಮಾಲೀಕರಾದ ಸಾರಿಕಾ ಸಿಂಗ್ ಭೇಲುಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Crime News: ಹುಟ್ಟುಹಬ್ಬದ ದಿನವೇ ಮಹಿಳೆಗೆ ಡ್ರಗ್ಸ್ ನೀಡಿ ಅತ್ಯಾಚಾರ

ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಂದು ಬೆಳಿಗ್ಗೆ, ಅಪರಿಚಿತ ವಿದ್ಯಾರ್ಥಿಯೊಬ್ಬರು, ಶಾಲಾ ಸಮವಸ್ತ್ರವನ್ನು ಧರಿಸಿ ಮತ್ತು ಬ್ಯಾಗ್ ಅನ್ನು ಹೊತ್ತುಕೊಂಡು ಸಾರಿಕಾ ಸಿಂಗ್ ಬಳಿಗೆ ಬಂದು ನಾನು ನಿಮ್ಮ ಸ್ಕೂಟಿಯನ್ನು ಪಕ್ಕಕ್ಕೆ ಇಡಲು ನಿಮ್ಮ ಕೀ ಬೇಕಿತ್ತು ಎಂದು ಕೇಳಿದಳು.

ಶಾಲಾ ಸಮವಸ್ತ್ರದಲ್ಲಿರುವ ಬಾಲಕಿಯನ್ನು ನೋಡಿದ ಸಾರಿಕಾ ಸಿಂಗ್, ಆಕೆ ಅದೇ ಪ್ರದೇಶದ ನಿವಾಸಿಯಾಗಿರುವುದರಿಂದ ಯಾವುದೋ ದೊಡ್ಡ ವಸ್ತುವನ್ನು ಸಾಗಿಸಲು ನನ್ನ ಸ್ಕೂಟಿ ಅಡ್ಡ ಇರಬಹುದು ಎಂದು ಭಾವಿಸಿ ಕೀ ನೀಡಿದರು. ಆದರೆ, ಆ ಕೀ ಪಡೆದ ಬಾಲಕಿಯರು ಸ್ಕೂಟರ್ ಬಿಟ್ಟುಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ: Crime News: ಟಿವಿ ವಾಲ್ಯೂಮ್ ಯಾಕಿಷ್ಟು ಜೋರಾಗಿದೆ? ಎಂದ ವ್ಯಕ್ತಿಯ ಕತ್ತು ಕತ್ತರಿಸಿ ಕೊಲೆ

20 ನಿಮಿಷಗಳು ಕಳೆದರೂ ಆ ಹುಡುಗಿ ಕೀ ವಾಪಾಸ್ ಕೊಡಲು ಬಾರದೆ ಇದ್ದಾಗ, ಸಾರಿಕಾ ಸಿಂಗ್ ಅನುಮಾನಗೊಂಡು ತನ್ನ ಸ್ಕೂಟರ್ ಅನ್ನು ಪರಿಶೀಲಿಸಲು ಹೋದಾಗ ಅದು ಕಾಣೆಯಾಗಿತ್ತು. ಕೊನೆಗೆ ಆಕೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ತನ್ನ ಸ್ಕೂಟರ್ ಕಳ್ಳತನವಾಗಿರುವುದು ತಿಳಿಯಿತು. ಕೂಡಲೇ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:13 pm, Mon, 9 September 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ