Viral Video : ಅದೆಷ್ಟೋ ಪ್ರಾಣಿಪಕ್ಷಿಗಳ ವಿಡಿಯೋ ಅನ್ನು ನೋಡುತ್ತಿರುತ್ತೀರಿ. ವಿವಿಧ ಭಾವ, ಭಂಗಿಗಳಿಂದ ಕೂಡಿದ ಈ ವಿಡಿಯೋಗಳು ನಿಮ್ಮ ಮನಸ್ಸನ್ನು ಅರಳಿಸುತ್ತಿರುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ಆಡುಗಳು ಭಾರೀ ನಾಟಕವಾಡುತ್ತಿವೆ. ಸರಕು ತುಂಬಿದ ಟ್ರಕ್ ಹಾದು ಹೋಗುತ್ತಿದ್ದಂತೆ ಮೂರ್ಛೆ ಬಿದ್ದವರಂತೆ ನಟಿಸುತ್ತವೆ. ನೆಟ್ಟಿಗರು ಈ ವಿಡಿಯೋ ನೋಡಿ ನಗುತ್ತಲೇ ಇದ್ದಾರೆ. ತಮ್ಮ ಪಾಡಿಗೆ ತಾವು ಮೇಯುತ್ತಿದ್ದವು ಇದ್ದಕ್ಕಿದ್ದಂತೆ ಹೀಗೆ ಹೇಗೆ ಎಲ್ಲವೂ ಒಟ್ಟಿಗೇ ಬಿದ್ದವು? ಈ ಅಚ್ಚರಿ ಬಿಡಿಸದ ಒಗಟಿನಂತೆ ತೋರುತ್ತಿದೆ.
Fainting Goats Meet UPS Truck ???#viralhog #faintinggoats #pets #humor pic.twitter.com/cxqLWZZKjx
ಇದನ್ನೂ ಓದಿ— ViralHog (@ViralHog) October 19, 2022
ಈ ವಿಡಿಯೋ ಈತನಕ 56,000ಕ್ಕೂ ಹೆಚ್ಚು ಜನರನ್ನು ತಲುಪಿದೆ. ಈ ವಿಡಿಯೋ ಅನ್ನು @ViralHog ಎಂಬ ಟ್ವಿಟರ್ ಖಾತೆದಾರರು ಪೋಸ್ಟ್ ಮಾಡಿದ್ದಾರೆ. ‘ಎಲೆಕ್ಟ್ರಿಕ್ ಶಾಕ್ ಇದು. ಕೆಲ ಸೆಕೆಂಡುಗಳವರೆಗೆ ಈ ಸ್ಥಿತಿಯಲ್ಲಿದ್ದು ಮತ್ತೆ ಎದ್ದೇಳುತ್ತವೆ. ಎಲೆಕ್ಟ್ರಿಕ್ ತಂತಿಬೇಲಿಯನ್ನು ಟ್ರಕ್ ಸ್ಪರ್ಷಿಸಿದ್ದೇ ಇದಕ್ಕೆ ಕಾರಣ. ಆದರೆ ಆಡುಗಳಿಗೆ ಇದರಿಂದ ತೊಂದರೆಯಾಗದು’ ಎಂದಿದ್ದಾರೆ ಒಬ್ಬರು. ‘ಈ ಮೇಕೆಗಳಲ್ಲಿ ಮನುಷ್ಯರಿದ್ದಾರೆ’ ಎಂದು ತಮಾಷೆ ಮಾಡಿದ್ದಾರೆ ಇನ್ನೊಬ್ಬರು. ‘ಕೀ ಕೊಟ್ಟಂತೆ ಎಲ್ಲವೂ ಒಮ್ಮೆಲೆ ಬಿದ್ದು ಹೋಗುವುದನ್ನು ನೋಡಲು ಬಹಳ ತಮಾಷೆ ಎನ್ನಿಸುತ್ತದೆ’ ಎಂದಿದ್ದಾರೆ ಮಗದೊಬ್ಬರು.
ಈ ಹಿಂದೆ ಡೇವಿಡ್ ಜಾನ್ಸನ್ ಎನ್ನುವವರು ಮೇಕೆಯೊಂದು ಶಿವನ ದೇವಸ್ಥಾನದಲ್ಲಿ ತನ್ನ ಮುಂಗಾಲುಗಳನ್ನೂರಿ ಪ್ರಾರ್ಥಿಸುವ ವಿಡಿಯೋ ಪೋಸ್ಟ್ ಮಾಡಿದ್ದು ನೆನಪಿರಬಹುದು.
ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:14 am, Wed, 26 October 22