ಮುದ್ದಿನ ಗಿಳಿ ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಮಾಲೀಕ!
ಉತ್ತರಪ್ರದೇಶದ ಬುಲಂದ್ಶಹರ್ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಯಿಂದ ಕಾಣೆಯಾದ ಗಿಳಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಡಿಸೆಂಬರ್ 10ರಂದು ಪಾಠಕ್ ಎಂಬುವವರ ಮನೆಯಿಂದ ಗಿಳಿ ನಾಪತ್ತೆಯಾಗಿತ್ತು. ಆ ಗಿಳಿ ಅವರ ಮನೆಯಲ್ಲಿ ಎಲ್ಲರಿಗೂ ಬಹಳ ಆತ್ಮೀಯವಾಗಿತ್ತು. ಮಗುವಂತೆ ನೋಡಿಕೊಳ್ಳುತ್ತಿದ್ದ ಗಿಳಿ ಮನೆಯಿಂದ ತಪ್ಪಿಸಿಕೊಂಡ ನಂತರ ಆ ಮನೆಯಲ್ಲಿರುವ ಮಕ್ಕಳು ಸರಿಯಾಗಿ ಊಟವನ್ನೇ ಮಾಡಿಲ್ಲವಂತೆ.
ಬುಲಂದ್‌ಶಹರ್: ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿಯಾದ ನವೀನ್ ಪಾಠಕ್ ಎಂಬ ವ್ಯಕ್ತಿ ತನ್ನ ಮುದ್ದಿನ ಗಿಳಿ ವಿಷ್ಣುವನ್ನು ಕಳೆದುಕೊಂಡಿರುವುದಾಗಿ ಜನರಿಗೆ ಮಾಹಿತಿ ನೀಡಿದ್ದಾನೆ. ಗಿಳಿ ಪತ್ತೆಯಾಗದ ಹಿನ್ನೆಲೆಯಲ್ಲಿ ತಮ್ಮ ಕುಟುಂಬ ದುಃಖದಲ್ಲಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ, ತಮ್ಮ ಗಿಳಿಯ ವಿಡಿಯೋ, ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಆ ಗಿಳಿಯನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದಾರೆ.
ಡಿಸೆಂಬರ್ 10ರಂದು ಪಾಠಕ್ ತಮ್ಮ ಮನೆಯಿಂದ ಗಿಳಿ ನಾಪತ್ತೆಯಾಗಿರುವುದನ್ನು ಕಂಡುಕೊಂಡರು. ಸುತ್ತಮುತ್ತ ಎಲ್ಲಿ ಹುಡುಕಿದರೂ ಗಿಳಿಯ ಸುಳಿವು ಸಿಗಲಿಲ್ಲ. ಗಿಳಿ ತಮ್ಮ ಮನೆಯಿಂದ ನಾಪತ್ತೆಯಾದ ನಂತರ ಆ ಕುಟುಂಬದ ಚಿಕ್ಕ ಮಕ್ಕಳು ಸರಿಯಾಗಿ ಊಟ-ತಿಂಡಿ ಮಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಐಲೈನರ್ ವಿಡಿಯೋದಿಂದ ವೈರಲ್ ಆಗಿದ್ದ ಕೇರಳದ ಹುಡುಗಿಯ ಲಿಪ್ಸ್ಟಿಕ್ ರೀಲ್ಸ್ ನೋಡಿ
ಗಿಳಿಯ ಹಿಂದಿದೆ ಮನಮಿಡಿಯುವ ಕತೆ:
ಸುಮಾರು ಎರಡು ವರ್ಷಗಳ ಹಿಂದೆ ಗಾಯಗೊಂಡಿದ್ದ ಗಿಳಿಯನ್ನು ರಕ್ಷಿಸಿ ಚಿಕಿತ್ಸೆ ನೀಡಿದ್ದ ಪಾಠಕ್ ಆ ಗಿಳಿಯನ್ನು ಮನೆಯಲ್ಲೇ ಸಾಕಿಕೊಂಡಿದ್ದರು. ಪಾಠಕ್ ಕುಟುಂಬವು ಗಿಳಿಯ ಆರೋಗ್ಯವನ್ನು ನೋಡಿಕೊಂಡಿತು. ಬಳಿಕ ಅದು ಸಂಪೂರ್ಣವಾಗಿ ಚೇತರಿಸಿಕೊಂಡಿತು. ಆ ಗಿಳಿಗೆ ವಿಷ್ಣು ಎಂದು ಹೆಸರಿಟ್ಟರು. ಆ ಗಿಳಿ ಮನುಷ್ಯನ ಧ್ವನಿಯನ್ನು ಅನುಕರಿಸುತ್ತಿತ್ತು. ಪಾಠಕ್ ಅವರನ್ನು ಗಿಳಿ “ಪಾಪಾ” ಎಂದು ಕರೆಯುತ್ತಿತ್ತು ಮತ್ತು ಅವರ ಹೆಂಡತಿಯನ್ನು “ಮಮ್ಮಿ” ಎಂದು ಕರೆಯುತ್ತಿತ್ತು. ಮನೆಯವರು ಏನೇ ಮಾತನಾಡಿದರೂ ಗಿಳಿ ಅದನ್ನು ಪುನರುಚ್ಛರಿಸುತ್ತಿತ್ತು. ಅವರ ಮಕ್ಕಳಿಗಿಂತೂ ಗಿಳಿ ಅಚ್ಚುಮೆಚ್ಚಿನದಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 pm, Tue, 17 December 24