ಉತ್ತರ ಪ್ರದೇಶ, ಮಾ. 17: ಕಂಠಪೂರ್ತಿ ಮದ್ಯ (alcohol) ಸೇವಿಸಿದ ಬಳಿಕ ಆ ಎಣ್ಣೆ ಏಟಲ್ಲಿ ತಾವು ಏನು ಮಾಡ್ತಿದ್ದೇವೆ ಎಂಬ ಅರಿವೇ ಕುಡುಕರಿಗೆ (drunkards) ಇರುವುದಿಲ್ಲ. ಹೌದು ಹೆಚ್ಚಿನ ಕುಡುಕರು ಕುಡಿದು ತೂರಾಡುತ್ತಾ ಇತರರೊಂದಿಗೆ ಜಗಳವಾಡುತ್ತಾ, ಬೇರೆಯವರ ವಸ್ತುಗಳನ್ನು ಹಾನಿ ಮಾಡುತ್ತಾ ದುರ್ವರ್ತನೆ ತೋರುತ್ತಿರುತ್ತಾರೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಕುಡುಕನೊಬ್ಬ ಶಾಲೆಗೆ (school) ನುಗ್ಗಿ ತರಗತಿಯಿಂದ ಮಕ್ಕಳನ್ನು ಓಡಿಸಿ, ಶಿಕ್ಷಕರೊಂದಿಗೆ (teachers) ಅನುಚಿತವಾಗಿ ವರ್ತಿಸಿ ವಿದ್ಯಾದೇಗುಲದಲ್ಲಿ ಗದ್ದಲವನ್ನೇ ಸೃಷ್ಟಿಸಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕುಡುಕನ ದುರ್ವರ್ತನೆಯನ್ನು ಕಂಡು ನೋಡುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ಈ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮೀರತ್‌ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕುಡುಕನೊಬ್ಬ ಗದ್ದಲ ಸೃಷ್ಟಿಸಿದ್ದಾನೆ. ಕಂಠ ಪೂರ್ತಿ ಮದ್ಯ ಸೇವಿಸಿ ಶಾಲೆಗೆ ನುಗ್ಗಿದ ಆತ ಶರ್ಟ್ ಬಿಚ್ಚಿ, ತರಗತಿಗೆ ನುಗ್ಗಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ಓಡಿಸಿ ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.
A drunk goon enters a primary school in #UttarPradesh‘s #Meerut, harasses female teachers, and forces young girls out of class! pic.twitter.com/IHUnks2lZU
— Hate Detector 🔍 (@HateDetectors) March 16, 2025
ಮಾಹಿತಿಯ ಪ್ರಕಾರ, ಕುಡಿದ ಮತ್ತಿನಲ್ಲಿದ್ದ ಆ ದುಷ್ಕರ್ಮಿ ಶಿಕ್ಷಕರ ಮುಂದೆ ತನ್ನ ಶರ್ಟ್ ಬಿಚ್ಚಿ, ಮೇಜಿನ ಮೇಲೆ ಕುಳಿತು ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಶಿಕ್ಷಕರು ದೂರನ್ನು ನೀಡಿದ್ದು, ಅವರು ನೀಡಿದ ದೂರಿನ ಆಧಾರದ ಮೇರೆಗೆ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಕುರಿತ ವಿಡಿಯೋವನ್ನು Hate Detector ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸೊಂಟದಲ್ಲೊಂದು ಮದ್ಯದ ಬಾಟಲಿ ಹಾಗೂ ಕೈಯಲ್ಲಿ ಶರ್ಟ್ ಹಿಡಿದು ಶಾಲೆಗೆ ನುಗ್ಗಿದ್ದ ಕುಡುಕನೊಬ್ಬ ಗದ್ದಲ ಸೃಷ್ಟಿಸಿರುವ ದೃಶ್ಯವನ್ನು ಕಾಣಬಹುದು. ಸೀದಾ ತರಗತಿಯೊಳಗೆ ಬಂದ ಆತ ಅಲ್ಲಿದ್ದ ಮಕ್ಕಳನ್ನು ಓಡಿಸಿದ್ದಾನೆ. ಅಷ್ಟೇ ಅಲ್ಲದೆ ಶಿಕ್ಷಕರಿಗೂ ಧಮ್ಕಿ ಹಾಕಿದ್ದಾನೆ.
ಇದನ್ನೂ ಓದಿ: ನೀವು ಚಿಕನ್ ಟಿಕ್ಕಾ ಮಸಾಲಾ ಕೇಳಿ ಇರ್ತೀರಾ, ಇದು ಚಿಕನ್ ಟಿಕ್ಕಾ ಮಸಾಲಾ ಕೇಕ್ : ಅಮೇರಿಕಾದ ಖ್ಯಾತ ಬಾಣಸಿಗ ಹೊಸ ಪ್ರಯೋಗ
ಮಾರ್ಚ್ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಇದೆಲ್ಲವೂ ಸಾಧ್ಯʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹವರನ್ನು ಒದ್ದು ಒಳಗೆ ಹಾಕಬೇಕುʼ ಎಂದು ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼದೇಶದಲ್ಲಿ ಗೂಂಡಾಗಳ ಸಂಖ್ಯೆ ಹೆಚ್ಚಾಗುತ್ತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Mon, 17 March 25