ನೀವು ಚಿಕನ್ ಟಿಕ್ಕಾ ಮಸಾಲಾ ಕೇಳಿ ಇರ್ತೀರಾ, ಇದು ಚಿಕನ್ ಟಿಕ್ಕಾ ಮಸಾಲಾ ಕೇಕ್ : ಅಮೇರಿಕಾದ ಖ್ಯಾತ ಬಾಣಸಿಗ ಹೊಸ ಪ್ರಯೋಗ
ಇತ್ತೀಚೆಗಿನ ದಿನಗಳಲ್ಲಿ ಈ ವಿಯರ್ಡ್ ಫುಡ್ ಕಾಂಬಿನೇಷ್ ಗಳ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅದೇ ರೀತಿ ಅಮೆರಿಕದ ಖ್ಯಾತ ಬಾಣಸಿಗ ಜೋಶ್ ಎಲ್ಕಿನ್ ಆಹಾರದಲ್ಲಿ ವಿಶೇಷ ಪ್ರಯೋಗ ಮಾಡಿದ್ದು, ಚಿಕನ್ ಟಿಕ್ಕಾ ಮಸಾಲಾವನ್ನು ಕೇಕ್ ರೂಪಕ್ಕೆ ಬದಲಾಯಿಸಿದ್ದಾರೆ. ಈ ಚಿಕನ್ ಟಿಕ್ಕಾ ಮಸಾಲಾ ಕೇಕ್ ತಯಾರಿಸುವ ವಿಧಾನವು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ವಿಯರ್ಡ್ ಫುಡ್ (Weird Food) ಕಾಂಬಿನೇಷನ್ ಟ್ರೆಂಡ್ ಆಗಿ ಬಿಟ್ಟಿದೆ. ಕೆಲವರು ಎಂದು ನೋಡಿದರ ರುಚಿ ಸವಿದೇ ಇರದ ಫುಡ್ ಗಳನ್ನು ಎಕ್ಸ್ಪೀರಿಮೆಂಟ್ ಮಾಡುತ್ತಾರೆ. ಹೌದು, ಒರಿಯೋ ಬಜ್ಜಿಯಂತೆ, ಇಡ್ಲಿ ಸಾಂಬಾರ್ ಐಸ್ ಕ್ರೀಂ ರೋಲ್ ಅಂತೆ, ಗುಲಾಬ್ ಜಾಮೂನ್ ದೋಸೆಯಂತೆ, ಬಿಯರ್ ಬಜ್ಜಿಯಂತೆ ಹೀಗೆ ಒಂದೆರಡಲ್ಲ ತರಹೇವಾರಿ ವಿಯರ್ಡ್ ಫುಡ್ ಕಾಂಬಿನೇಷನ್ ಗಳಿಗೆ ಸಂಬಂಧಪಟ್ಟ ವಿಡಿಯೋಗಳು ವೈರಲ್ ಆಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಮೆರಿಕಾ (America) ದ ಖ್ಯಾತ ಬಾಣಸಿಗ ಜೋಶ್ ಎಲ್ಕಿನ್ (Chef Josh Elkin) ಪ್ರಯೋಗ ಮಾಡಿದ್ದು, ಚಿಕನ್ ಟಿಕ್ಕಾ ಮಸಾಲಾವನ್ನು ಚಿಕನ್ ಟಿಕ್ಕಾ ಮಸಾಲಾ ಕೇಕ್ (Chicken Tikka Masala Cake) ಆಗಿ ಬದಲಾಯಿಸಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹೌದು, thejoshelkin ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅಮೇರಿಕಾದ ಬಾಣಸಿಗ ಜೋಶ್ ಎಲ್ಕಿನ್ ಅವರು ಚಿಕನ್ ಟಿಕ್ಕಾ ಮಸಾಲಾ, ನಾನ್, ರಾಯಿತಾ, ಈರುಳ್ಳಿ ಭಜಿ ಮತ್ತು ಉಪ್ಪಿನಕಾಯಿ ಈರುಳ್ಳಿಯನ್ನು ಬಳಸಿ ಕೇಕ್ ತಯಾರಿಸಿದ್ದಾರೆ. ಈ ಬೌಲ್ ಗೆ ಕೇಕ್ ತಯಾರಿಸಲು ಬೇಕಾದ ಸಾಮಗ್ರಿಗಳನ್ನು ಹಾಕಿ ಚಿಕನ್ ಬಿರಿಯಾನಿ ಸೇರಿಸಿ ಕೇಕ್ ತಯಾರಿಸಿದ್ದು ಈ ವಿಡಿಯೋ ನೋಡಿದರೇನೇ ವಾಕರಿಕೆ ತರುವಂತಿದ್ದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಬೆಡ್‌ರೂಮ್‌ನಲ್ಲಿ ಗೆಳತಿಯೊಂದಿಗೆ ಮಲಗಿದ್ದ ಯಜಮಾನನಿಗೆ ಗುಂಡು ಹಾರಿಸಿದ ಪಿಟ್‌ಬುಲ್ ಶ್ವಾನ; ಏನಿದು ವಿಚಿತ್ರ ಘಟನೆ?
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋ ಹನ್ನೊಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರಲ್ಲಿ ಕೆಲವರು ಈ ಪ್ರಯೋಗವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಒಬ್ಬ ಬಳಕೆದಾರರು, “ಇದು ನಿಜಕ್ಕೂ ರುಚಿಕರವಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ, “ಇದು ವಿಚಿತ್ರ ಪ್ರಯೋಗ” ಎಂದಿದ್ದಾರೆ. ಮತ್ತೊಬ್ಬರು, ಈ ರೀತಿ ವಿಚಿತ್ರ ಪ್ರಯೋಗವನ್ನು ನಾನೆಂದಿಗೂ ನೋಡಲು ಸಾಧ್ಯವಿಲ್ಲ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Mon, 17 March 25