Video: ಚಲಿಸುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿದ್ದ ನಾಗರಹಾವು, ಮುಂದೇನಾಯ್ತು ನೋಡಿ

ಮನೆಯ ಮೂಲೆಯಲ್ಲಿ, ಹೆಲ್ಮೆಟ್, ಶೂ, ಬೈಕ್, ಕಾರು ಹೀಗೆ ಎಲ್ಲೆಂದರಲ್ಲಿ ನಾಗರಹಾವುಗಳು ಕಾಣಿಸಿಕೊಳ್ಳುತ್ತವೆ. ಇದೀಗ ಚಲಿಸುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ಹೌದು, ಈ ಡ್ಯಾಶ್‌ಬೋರ್ಡ್‌ನಲ್ಲಿದ್ದ ಹಾವನ್ನು ಗಮನಿಸಿದ ಮಹಿಳೆ ತಕ್ಷಣವೇ ಕಾರನ್ನು ನಿಲ್ಲಿಸಿ ಹೊರಗೆ ಬಂದಿದ್ದಾರೆ. ಗಾಜಿಯಾಬಾದ್ ಸಂಚಾರ ಪೊಲೀಸ್ ಮುಖ್ಯ ಕಾನ್‌ಸ್ಟೆಬಲ್ ನಾಗರ ಹಾವನ್ನು ರಕ್ಷಣೆ ಮಾಡಿದ್ದು ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಚಲಿಸುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿದ್ದ ನಾಗರಹಾವು, ಮುಂದೇನಾಯ್ತು ನೋಡಿ
ನಾಗರಹಾವಿನ ರಕ್ಷಣೆ
Image Credit source: Twitter

Updated on: Jul 02, 2026 | 5:55 PM

ಮುಖ್ಯಾಂಶಗಳು

  • ಚಲಿಸುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ನಾಗರಹಾವು ಪ್ರತ್ಯಕ್ಷ
  • ಗಾಜಿಯಾಬಾದ್ ಸಂಚಾರ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ರಿಂದ ರಕ್ಷಣಾ ಕಾರ್ಯ
  • ನಾಗರಹಾವನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರ

ಉತ್ತರ ಪ್ರದೇಶ, ಜುಲೈ 02: ಮಳೆಗಾಲ ಶುರುವಾಯಿತೆಂದರೆ ಹಾವುಗಳ ಉಪಟಳ ಅಷ್ಟಿಷ್ಟಲ್ಲ. ಈ ನಾಗರಹಾವು (Indian Cobra) ಸೇರಿದಂತೆ ವಿಷಕಾರಿ ಸರ್ಪಗಳು ಬೆಚ್ಚಗಿನ ಸ್ಥಳವನ್ನೇ ತನ್ನ ವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ. ಆದರೆ ಇದೀಗ ಗಾಜಿಯಾಬಾದ್ ಎಲಿವೇಟೆಡ್ ರಸ್ತೆಯಲ್ಲಿ (Ghaziabad elevated road) ಚಲಿಸುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ನಾಗರಹಾವೊಂದು ಪತ್ತೆಯಾಗಿದೆ. ಈ ಹಾವು ಪ್ರತ್ಯಕ್ಷವಾಗುತ್ತಿದ್ದಂತೆ ಕಾರು ಚಲಾಯಿಸುತ್ತಿದ್ದ ಮಹಿಳೆ ತಕ್ಷಣ ತನ್ನ ಕಾರನ್ನು ನಿಲ್ಲಿಸಿ ಹೊರಗೆ ಓಡಿ ಬಂದಿದ್ದಾರೆ. ಗಾಜಿಯಾಬಾದ್ ಸಂಚಾರ ಪೊಲೀಸ್ ಮುಖ್ಯ ಕಾನ್‌ಸ್ಟೆಬಲ್ ರೊಬ್ಬರು ಹಾವನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಈ ರಕ್ಷಣಾ ಕಾರ್ಯದ ವೀಡಿಯೊ ವೈರಲ್ ಆಗಿದ್ದು, ಅಧಿಕಾರಿಯ ಧೈರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಹೌದು, ರಾಜ್ ನಗರ ವಿಸ್ತರಣೆಯ ವಸತಿ ಸೊಸೈಟಿಯಲ್ಲಿ ವಾಸವಿರುವ ಮೀನಾಕ್ಷಿ ಎಂಬ ಮಹಿಳೆ ಎಂದಿನಂತೆ ಮುಂಜಾನೆ ನೋಯ್ಡಾದಲ್ಲಿರುವ ತನ್ನ ಕಚೇರಿಯ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ಇದ್ದಕ್ಕಿದ್ದಂತೆ ನಾಗರಹಾವು ಕಾಣಿಸಿಕೊಂಡಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಹಾವನ್ನು ಗಮನಿಸಿದ ಮಹಿಳೆ ತಕ್ಷಣವೇ ತನ್ನ ವಾಹನವನ್ನು ನಿಲ್ಲಿಸಿ ಹೊರಗೆ ಬಂದಿದ್ದಾರೆ.

 ವೈರಲ್‌ ಪೋಸ್ಟ್‌ ಇಲ್ಲಿದೆ

ಗಾಜಿಯಾಬಾದ್ ರಕ್ಷಣಾ ಪೊಲೀಸರು (Ghaziabad Traffic Police) ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಇದ್ದಕ್ಕಿದ್ದಂತೆ ನಾಗರಹಾವನ್ನು ಹಿಡಿದು, ಅರಣ್ಯ ಇಲಾಖೆಗೆ ಹಸ್ತಾಂತರಿಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಹಾವನ್ನು ಹಿಡಿದು ಚೀಲ ತುಂಬುವ ಬದಲು ಅದರೊಂದಿಗೆ ಆಟವಾಡಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ

ಇದೇ ವೇಳೆ ಗಾಜಿಯಾಬಾದ್ ಸಂಚಾರ ಪೊಲೀಸರ ಸಮೀಪದಲ್ಲಿ ವಿವಿಐಪಿ ಕ್ರೇನ್ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಓಂ ಪ್ರಕಾಶ್ ಭಯಭೀತರಾದ ಮಹಿಳೆಯನ್ನು ಕಂಡು ವಾಹನ ನಿಲ್ಲಿಸಿದ್ದಾರೆ. ಈ ವಿಷಕಾರಿ ಹಾವನ್ನು ಖಾಲಿ ನೀರಿನ ಬಾಟಲಿಯನ್ನು ಬಳಸಿ ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾನ್‌ಸ್ಟೆಬಲ್ ಓಂ ಪ್ರಕಾಶ್ ಹಾಗೂ ಗೃಹರಕ್ಷಕ ದಳದ ದೀಪಕ್ ಅವರ ಧೈರ್ಯವನ್ನು ಸ್ಥಳದಲ್ಲಿದ್ದ ಸ್ಥಳೀಯರು ಶ್ಲಾಘಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Thu, 2 July 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us