
ಉತ್ತರಾಖಂಡ, ಸೆಪ್ಟೆಂಬರ್ 16: ಈಗಿನ ಕಾಲದಲ್ಲಿ ಮಾನವೀಯತೆ (humanity) ಅನ್ನೋದೇ ಇಲ್ಲ. ಆದರೆ, ಕೆಲವರಂತೂ ಏನು ಪ್ರತಿಫಲ ಅಪೇಕ್ಷಿಸದೇ ಇನ್ನೊಬ್ಬರಿಗೆ ಸಹಾಯ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಹೃದಯ ಸ್ಪರ್ಶಿ ದೃಶ್ಯಗಳು ವೈರಲ್ ಆಗುತ್ತಿರುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಹೌದು, ಈ ಘಟನೆ ಉತ್ತರಾಖಂಡದಲ್ಲಿ ನಡೆದಿದೆ ಎನ್ನಲಾಗಿದೆ. ಹಳೆಯ ಸ್ಲಿಪ್ಪರ್ ತೊಟ್ಟಿದ್ದ ಡೆಲಿವರಿ ಬಾಯ್‌ಗೆ ತನ್ನ ಅಡಿಡಾಸ್ ಶೂ ಕೊಟ್ಟು ಹೃದಯ ಶ್ರೀಮಂತಿಕೆ ಮೆರೆದಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಡೆಲಿವರಿ ಬಾಯ್‌ಗೆ ಶೂ ಕೊಟ್ಟ ವ್ಯಕ್ತಿ
ಅಮನ್ ಶರ್ಮಾ (Aman Sharma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ನನಗಿಂತ ಹೆಚ್ಚು ಈ ಶೂಗಳ ಅವಶ್ಯಕತೆ ಆ ಡೆಲಿವರಿ ಬಾಯ್‌ಗಿತ್ತು ಎಂದು ಬರೆದಿರುವುದನ್ನು ಕಾಣಬಹುದು.
ಝೆಪ್ಟೋ ಕಂಪನಿಯ ಡೆಲಿವರಿ ಬಾಯ್ ಆಗಿದ್ದ ಈ ವ್ಯಕ್ತಿ ಮಳೆಯಲ್ಲಿ ನೆನೆದು ಒದ್ದೆಯಾಗಿದ್ದ. ರೈನ್ ಕೋಟ್ ಇಲ್ಲದಿದ್ರೂ ಸರಿಯಾದ ಸಮಯಕ್ಕೆ ಸೈಕಲ್‌ನಲ್ಲಿ ಬಂದು ಆರ್ಡರ್ ತಲುಪಿಸಿದ್ದ. ಡೆಲಿವರಿ ಬಾಯ್ ಕಾಲಿಗೆ ಚಪ್ಪಲಿ ಹಾಕಿಕೊಂಡಿದ್ದ ವ್ಯಕ್ತಿಗೆ ಶೂ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಈ ವಿಡಿಯೋದಲ್ಲಿ ಮನೆಯ ಬಾಲ್ಕನಿಯಲ್ಲಿದ್ದ ವ್ಯಕ್ತಿಯೊಬ್ಬ ಕೆಳಗೆ ನಿಂತಿದ್ದ ಡೆಲಿವರಿ ಬಾಯ್‌ನ್ನು ಕರೆದು ಬ್ರೋ, ಶೂಸ್ ಬೇಕಾ? ಒರಿಜಿನಲ್ ಅಡಿಡಾಸ್ ಶೂ ಎಂದು ಕೇಳುವುದನ್ನು ಕಾಣಬಹುದು. ಆ ಬಳಿಕ ಶೂ ಬಾಕ್ಸ್ ತೋರಿಸುತ್ತಾರೆ. ಕೊನೆಗೆ ಡೆಲಿವರಿ ಬಾಯ್‌ಗೆ ಶೂ ಕೊಡುತ್ತಾರೆ. ಶೂಗಳನ್ನು ಪಡೆದು ತನ್ನ ಸೈಕಲ್ ಏರಿ ಹೋಗುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಚಾಲಕನ ಕಷ್ಟ ಅರಿತು ತಾನೇ ಕ್ಯಾಬ್ ಓಡಿಸಿ ಲಖನೌ ತಲುಪಿದ ಪ್ರಯಾಣಿಕ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಳ್ಳೆಯ ಮನಸ್ಸಿಗೆ ಯಾವತ್ತೂ ಒಳ್ಳೆಯದೇ ಆಗಲಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಒಳ್ಳೆತನ ಹೀಗೆಯೇ ಇರಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನನ್ನ ಈ ದಿನದ ಬೆಸ್ಟ್ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:26 pm, Wed, 16 September 26