ಸಿಎ ಪರೀಕ್ಷೆಯಲ್ಲಿ ಮಗ ಪಾಸಾದ ಸುದ್ದಿ ಕೇಳಿ ಖುಷಿಯಿಂದ ಕಣ್ಣೀರಿಟ್ಟ ತರಕಾರಿ ವ್ಯಾಪಾರಿ; ಭಾವುಕರಾದ ನೆಟ್ಟಿಗರು
ಮಹಾರಾಷ್ಟ್ರದ ಡೊಂಬಿವ್ಲಿ ಪೂರ್ವದಲ್ಲಿ ತರಕಾರಿ ಮಾರಾಟಗಾರ್ತಿ ನೀರಾ ಥೋಂಬರೆ ಅವರ ಮಗ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಷ್ಟಪಟ್ಟು ತರಕಾರಿ ಮಾರಿ ಮಗನನ್ನು ಬೆಳೆಸಿದ್ದ ತಾಯಿ ಇದರಿಂದ ಖುಷಿಯಿಂದ ಕಣ್ಣೀರಿಟ್ಟಿರುವ ಘಟನೆ ನಡೆದಿದೆ.
ಮುಂಬೈ: ಇತ್ತೀಚೆಗೆ ಪ್ರಕಟವಾದ ಸಿಎ ಪರೀಕ್ಷೆಯ ಫಲಿತಾಂಶದಲ್ಲಿ ತನ್ನ ಮಗ ಪಾಸಾಗಿರುವ ವಿಷಯ ತಿಳಿದು ಖುಷಿಯಿಂದ ತರಕಾರಿ ವ್ಯಾಪಾರಿಯಾಗಿರುವ ತಾಯಿ ಕಣ್ಣೀರಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಷ್ಪಟ್ಟು ತರಕಾರಿ ಮಾರಿ ಸಾಕಿದ ಮಗ ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ಆತನನ್ನು ತಬ್ಬಿ ಹಿಡಿದು ಕಣ್ಣೀರು ಹಾಕಿದ್ದಾರೆ.
ಈ ವಿಡಿಯೋ ನೋಡಿದ ಉದ್ಯಮಿ ಆನಂದ್ ಮಹೀಂದ್ರಾ ಎಕ್ಸ್ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ತರಕಾರಿ ವ್ಯಾಪಾರಿ ತನ್ನ ಮಗ ಯೋಗೀಶ್‌ನನ್ನು ಅಪ್ಪಿಕೊಂಡು ಸಂತೋಷದಿಂದ ಕಣ್ಣೀರು ಹಾಕುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಯೋಗೇಶ್ ತನ್ನ ಶಿಕ್ಷಣದಲ್ಲಿ ರಾಜಿ ಮಾಡಿಕೊಳ್ಳದಂತೆ ನೋಡಿಕೊಳ್ಳಲು ಆನಂದ್ ಮಹೀಂದ್ರಾ ಸೂಚಿಸಿದ್ದಾರೆ. ಯೋಗೇಶ್ ಅವರು ಸಂಪೂರ್ಣ ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದಂತೆ ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ: Viral Video: ಚಿಕ್ಕ ಮಗುವನ್ನು ಕೂರಿಸಿಕೊಂಡು ಸ್ಟಂಟ್ ಮಾಡುವಾಗ ಬೈಕ್ಗೆ ಅಡ್ಡಬಂದ ಗೂಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಯೋಗೇಶ್ ತನ್ನ ಫಲಿತಾಂಶದ ಬಗ್ಗೆ ತಿಳಿದ ನಂತರ, ನೇರವಾಗಿ ತನ್ನ ತಾಯಿಯ ತರಕಾರಿ ಅಂಗಡಿಗೆ ಹೋಗಿ ತನ್ನ ಸಾಧನೆಯನ್ನು ಹೇಳಿದನು. ಭಾವುಕರಾದ ಆ ಮಹಿಳೆ ಯೋಗೇಶ್ನನ್ನು ಅಪ್ಪಿಕೊಂಡು ಖುಷಿಪಟ್ಟಿದ್ದಾರೆ.
#WHATSAPP forward
Dombivali Gandhinagar chowk Near Girnar sweet shop Vegetable sellers Son Completed #CA What a moment. Mother is hugging the son with great feelings.
We adore this moment. Salute to his Mother for all her courage and the power of her blessings…#ICAI pic.twitter.com/noMsAQfONS
— DHAVAL K JASANI (@CADhavalJasani) July 17, 2024
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಯೋಗೇಶ್ ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಈ ದೊಡ್ಡ ಸಾಧನೆಗಾಗಿ ಅವರನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಜಪಾನ್‌ನ ರೆಸ್ಟೋರೆಂಟ್‌ನಲ್ಲಿ ತಲೆಕೆಳಗಾಗಿ ಹಾರಿದ ಭಾರತದ ಧ್ವಜ; ವಿಡಿಯೋ ವೈರಲ್
ಅಂದಹಾಗೆ, ಯೋಗೇಶ್ ತನ್ನ ತಾಯಿಯೊಂದಿಗೆ ಡೊಂಬಿವಿಲಿ ಸಮೀಪದ ಖೋನಿ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ನೀರಾ ತೊಂಬರೆ ಕಳೆದ 25 ವರ್ಷಗಳಿಂದ ಡೊಂಬಿವಿಲಿಯ ಗಾಂಧಿನಗರ ಪ್ರದೇಶದಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ, ಯೋಗೇಶ್ ಅವರ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿರುವುದರ ಜೊತೆಗೆ ಮಗನಿಗೆ ವಿದ್ಯಾಭ್ಯಾಸ ಕೊಡಿಸಿದ ತಾಯಿಯ ತ್ಯಾಗದ ಬಗ್ಗೆ ಕೂಡ ಪ್ರಶಂಸೆ ವ್ಯಕ್ತವಾಗಿದೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ