AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಪರೀಕ್ಷೆ ಬರೆಯುತ್ತಿರುವ ಹೆತ್ತಮ್ಮ, ಅಳುವ ಮಗುವಿಗೆ ಅಮ್ಮನಾದ ಮಹಿಳಾ ಪೊಲೀಸ್

ಒಂದು ಹೆಣ್ಣಿಗೆ ತಾಯಿ ಗುಣ ಇರುವುದು ನಿಜ ಎಂಬುದನ್ನು ಈ ವಿಡಿಯೋ ಮತ್ತೊಮ್ಮೆ ಸಾಬೀತು ಮಾಡಿದೆ. ಹೆತ್ತಮ್ಮ ಪರೀಕ್ಷೆಯ ಬರೆಯುತ್ತಿದ್ದಾರೆ. ಹೊರಗೆ ಪುಟ್ಟ ಕಂದಮ್ಮ ಮಹಿಳಾ ಪೊಲೀಸ್​​​​ ಪೇದೆ ಕೈಯಲ್ಲಿ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಅಮ್ಮ ಒಳಗೆ ಪರೀಕ್ಷೆ ಬರೆಯುತ್ತಿದ್ದಾಳೆ. ಹೊರಗೆ ಅಮ್ಮನಂತೆ ಅಳುವ ಮಗುವಿಗೆ ಈ ಪೊಲೀಸ್​​​ ಅಧಿಕಾರಿ ಅಮ್ಮನಾಗಿದ್ದಾರೆ

Viral News: ಪರೀಕ್ಷೆ ಬರೆಯುತ್ತಿರುವ ಹೆತ್ತಮ್ಮ, ಅಳುವ ಮಗುವಿಗೆ ಅಮ್ಮನಾದ ಮಹಿಳಾ ಪೊಲೀಸ್
ಅಕ್ಷಯ್​ ಪಲ್ಲಮಜಲು​​
|

Updated on: Apr 15, 2024 | 12:00 PM

Share

ಗಾಂಧಿನಗರ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಹಂಬಲದ ಜತೆಗೆ, ಛಲವು ಇರಬೇಕು. ಅದು ಯಾರೇ ಆಗಲಿ ಅವರಿಗೆ ಬರೆಯುವ ಸಾಮರ್ಥ್ಯ ಇದ್ದರೆ, ಯಾವ ಪರಿಸ್ಥಿತಿಯಲ್ಲೂ ಬರೆಯಬಹುದು ಎಂಬುದಕ್ಕೆ ಈ ಮಹಿಳೆ ಉದಾಹರಣೆ, ಆದರೆ ಇಂತಹ ಕೆಲಸಕ್ಕೆ ನಮ್ಮನ್ನು ಬೆಂಬಲಿಸುವ ಮತ್ತು ನಮಗೆ ಸಹಕಾರ ನೀಡುವ ವ್ಯಕ್ತಿಗಳು ಬೇಕು, ಅದು ಮನೆಯವರಾಗಲಿ, ಹೊರಗಿನವರಾಗಲಿ. ಹೌದು ಇಲ್ಲೊಂದು ಇಂತಹದೇ ಘಟನೆಯೊಂದು ನಡೆದಿದೆ, ಮಹಿಳೆಯೊಬ್ಬರು ಗುಜರಾತ್ ಹೈಕೋರ್ಟ್‌ನ ಪ್ಯೂನ್ ನೇಮಕಾತಿ ಪರೀಕ್ಷೆ ಬರೆಯಲು ತಮ್ಮ 6 ತಿಂಗಳ ಮಗುವಿನೊಂದಿಗೆ ಬಂದಿದ್ದಾರೆ. ಇಲ್ಲಿ ಮಗುವಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇಲ್ಲ. ಆದರೆ ಆ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬರುವುದು ಅನಿವಾರ್ಯವಾಗಿತ್ತು. ಆದರೆ ಈಕೆಯ ಛಲಕ್ಕೆ ಪರೀಕ್ಷಾ ಕೇಂದ್ರದಲ್ಲಿದ್ದ ಪೊಲೀಸ್​​ ಸಿಬ್ಬಂದಿ ಸಾಥ್ ನೀಡಿದ್ದಾರೆ.

ಗುಜರಾತ್​​ನ ಓಧವ್‌ನಲ್ಲಿ ಹೈಕೋರ್ಟ್‌ನ ಪ್ಯೂನ್ ನೇಮಕಾತಿ ಪರೀಕ್ಷೆಯನ್ನು ಬರೆಯುತ್ತಿದ್ದ ಮಹಿಳೆಯ ಮಗುವನ್ನು ಮಹಿಳಾ ಕಾನ್ಸ್‌ಟೇಬಲ್‌ಯೊಬ್ಬರು ಆರೈಕೆ ಮಾಡುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆ ಕಾರಣವಾಗಿದೆ. ಈ ಬಗ್ಗೆ ಅಹಮದಾಬಾದ್ ಪೋಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾನ್ ಸ್ಟೇಬಲ್ ದಯಾ ಬೆನ್ 6 ತಿಂಗಳ ಮಗುವನ್ನು ಹಿಡಿದುಕೊಂಡು ಆಟವಾಡುತ್ತಿರುವುದನ್ನು ಈ ಫೋಟೋದಲ್ಲಿ ನೋಡಬಹುದು.

ಈ ಪೋಸ್ಟ್‌ನ ಶೀರ್ಷಿಕೆಯ ಪ್ರಕಾರ, ಮಹಿಳಾ ಪರೀಕ್ಷಾರ್ಥಿಯು ತನ್ನ ಆರು ತಿಂಗಳ ಮಗುವಿನೊಂದಿಗೆ ಗುಜರಾತ್ ಹೈಕೋರ್ಟ್‌ನ ಪ್ಯೂನ್ ಹುದ್ದೆಗೆ ಪರೀಕ್ಷೆ ಬರೆಯಲು ಓಧವ್ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಪರೀಕ್ಷೆ ಆರಂಭವಾಗಲಿದೆ ಎಂದಾಗ ಆಕೆಯ ಮಗು ನಿರಂತರವಾಗಿ ಅಳಲು ಶುರು ಮಾಡಿದೆ. ಈ ಸಮಯದಲ್ಲಿ ಮಹಿಳಾ ಕಾನ್‌ಸ್ಟೆಬಲ್ ತಾಯಿಯ ಪರೀಕ್ಷೆಗೆ ಯಾವುದೇ ತೊಂದರೆಯಾಗದಂತೆ, ಆ ಮಗುವಿಗೆ ತಾನೇ ತಾಯಿಯಂತೆ ಸಮಾಧಾನ ಮಾಡಿದ್ದಾರೆ.

ಇದನ್ನೂ ಓದಿ: Viral News : ಶಸ್ತ್ರಚಿಕಿತ್ಸೆ ಮೂಲಕ ಗುಪ್ತಾಂಗದಿಂದ ಬುಲೆಟ್ ತೆಗೆದು ಹಾಕಿದ ಮಹಿಳೆ!

ಮಹಿಳೆಯ ಪರೀಕ್ಷೆಗೆ ಯಾವುದೇ ತೊಂದರೆಯಾಗದಂತೆ, ಒಳ್ಳೆಯ ರೀತಿಯಲ್ಲಿ ಪರೀಕ್ಷೆ ಬರೆಯುವಂತೆ, ಆಕೆಯ ಮಗು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು ನಮ್ಮ ಸಿಬ್ಬಂದಿ ಎಂದು ಪೊಲೀಸ್​​ ಇಲಾಖೆ ತಮ್ಮ ಟ್ವಿಟರ್​​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಈ ಫೋಟೋ ಎಲ್ಲ ಕಡೆ ವೈರಲ್ ಆಗಿದ್ದು, ಪೊಲೀಸ್​​ ಸಿಬ್ಬಂದಿ ಈ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

”ಮೇಡಂ ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ” ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ, ಇನ್ನೊಬ್ಬ ಬಳಕೆದಾರ ಇದು ನಿಜವಾದ ಪೋಲೀಸರ ಕಾರ್ಯ, ಈಗಿನ ಕಾಲದಲ್ಲಿ ಮಗುವಿಗೆ ತುಂಬಾ ಕಿರಿಕಿರಿಯಾದರೆ, ನಿಮಗೆ ಈ ಕೆಲಸ ಉತ್ತಮ ಎಂದು ಅನ್ನಿಸರಬಹುದು ಎಂದು ಟ್ವಿಟರ್​ನಲ್ಲಿ ಕಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: