ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ ಆದರೆ ಆ ಸುಳ್ಳಿಂದ ಮದುವೆ(Marriage)ಯೇ ಮುರಿದುಬಿದ್ದ ಘಟನೆ ಉತ್ತರ ಪ್ರದೇಶ(Uttar Pradesh) ದಲ್ಲಿ ನಡೆದಿದೆ. ಮುಂದಿನ ಸಾಂಸಾರಿಕ ಜೀವನದ ಆ ಸುಳ್ಳು ಮಹತ್ವ ಪಡೆಯುವುದಿಲ್ಲ ಎಂದಾಗ ಸುಳ್ಳು ಹೇಳುವುದರಲ್ಲಿ ತಪ್ಪಿಲ್ಲ ಆದರೆ ಅದರಿಂದ ಸಂಸಾರ ಉಳಿಯುವುದಿಲ್ಲ ಎಂದಾಗ ಆ ಸುಳ್ಳು ಹೇಳುವುದರಿಂದ ಪ್ರಯೋಜನವಿಲ್ಲ.
ಉತ್ತರ ಪ್ರದೇಶದ ಪನ್ವಾರಿಯಲ್ಲಿ ಓದು, ಬರಹ ಏನೂ ಬರದ ಅನಕ್ಷರಸ್ಥನೊಬ್ಬ ತಾನು ದೊಡ್ಡ ಸರ್ಕಾರಿ ಅಧಿಕಾರಿ ಎಂದು ಸುಳ್ಳು ಹೇಳಿ ಮದುವೆಯಾಗಲು ಹೊರಟಿದ್ದ, ಎಲ್ಲರೂ ನಂಬಿದ್ದರು ಕೂಡ.
ಆದರೆ ವಧುವಿಗೆ ಏನೋ ಸಂಶಯ ಬಂದು ಮದುವೆ ಮನೆಯಲ್ಲಿ ವರನ ಬಳಿ ಎರಡರ ಮಗ್ಗಿ ಹೇಳುವಂತೆ ಕೇಳಿದ್ದಾರೆ. ಆಗ ಆತ ತಡವರಿಸಿದ್ದಾನೆ. ಇದನ್ನು ನೋಡಿದ ಮಹಿಳೆ ಎರಡರ ಮಗ್ಗಿ ಬೇಸಿಕ್ ಗಣಿತವೂ ಗೊತ್ತಿಲ್ಲದ ನೀನು ಅಧಿಕಾರಿಯಾಗಿರಲು ಹೇಗೆ ಸಾಧ್ಯ ಎಂದು ಹೇಳಿ ಮದುವೆ ಮುರಿದುಕೊಂಡಿದ್ದಾಳೆ. ಆತ ಪೇಚು ಮುಖಮಾಡಿ ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂದುರಿಗಿದ್ದಾನೆ.
ಮತ್ತಷ್ಟು ಓದಿ: ನಾದಿನಿ ಮದುವೆಗೆ ಕರೆಯಲಿಲ್ಲ ಎಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧ
ವಧುವಿನ ಮನವೊಲಿಸಲು ಗಂಟೆಗಳ ಕಾಲ ಕುಟುಂಬದವರು ಪ್ರಯತ್ನಿಸಿದ್ದಾರೆ. ಆದರೆ ವಧು ಮನಸ್ಸು ಬದಲಾಯಿಸುವುದಿಲ್ಲ ಎಂದಾಗ ಮನೆಯವರು ವರದಕ್ಷಿಣೆಯಾಗಿ ತೆಗೆದುಕೊಂಡ ಹಣವನ್ನು ಹಿಂದಿರುಗಿಸಬೇಕಾಯಿತು. ವರ ಮಹೋಬಾ ಜಿಲ್ಲೆಯ ಧಾವರ್ ಗ್ರಾಮದ ನಿವಾಸಿ, ವಧು ನಿರಾಕರಿಸಿದ ನಂತರ ಎರಡೂ ಕಡೆಯ ಜನರು ಮಾತುಕತೆ ನಡೆಸಿ ರಾಜಿ ಮಾಡಿಕೊಂಡಿದ್ದಾರೆ.
ಎರಡೂ ಕುಟುಂಬದವರು ಪರಸ್ಪರ ನೀಡಿದ ಉಡುಗೊರೆ ಮತ್ತು ಆಭರಣಗಳನ್ನು ಹಿಂದಿರುಗಿಸಿದರು. ಅವರ ಪರಸ್ಪರ ಒಪ್ಪಿಗೆ ನೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ.
ಹಾಗಾಗಿ ಯಾವುದೇ ಸುಳ್ಳು ಹೇಳುವ ಮುನ್ನ ತುಂಬಾ ಸಲ ಯೋಚಿಸಬೇಕು, ಒಮ್ಮೆ ಮದುವೆಯಾಗಿಬಿಡಲು ಆಮೇಲೆ ಸತ್ಯವನ್ನು ಒಪ್ಪಿಕೊಳ್ಳುತ್ತೇನೆ ಎನ್ನುವ ಕಾಲ ಹೋಯಿತು, ಈಗಿನ ಹೆಣ್ಣುಮಕ್ಕಳು ಇಂತಹ ವಿಚಾರ ಮದುವೆಯಾದ ಮೇಲೆ ತಿಳಿದರೆ ತಕ್ಷಣ ವಿಚ್ಛೇದನಕೊಡಲು ಹಿಂದು-ಮುಂದು ನೋಡುವುದಿಲ್ಲ ಎಂಬುದಂತೂ ಸತ್ಯ. ಹಾಗಾಗಿ ಜೀವನಕ್ಕೆ ಮುಳ್ಳಾಗುವ ಸುಳ್ಳನ್ನು ಎಂದೂ ಹೇಳಬೇಡಿ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ