Viral News: ಎಕ್ಸ್​​​ನಲ್ಲಿ ಸಖತ್​​ ಟ್ರೆಂಡ್ ಆಗುತ್ತಿದೆ ಹಾರ್ದಿಕ್ ಪಾಂಡ್ಯ ಡೈವೋರ್ಸ್ ಸುದ್ದಿಯ ಮೀಮ್ಸ್, ಇಲ್ಲಿದೆ ನೋಡಿ

ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ವೈಯುಕ್ತಿಕ ಬದುಕಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೌದು, ಹಾರ್ದಿಕ್ ಪಾಂಡ್ಯ ಪತ್ನಿ ನತಾಶ ಸ್ಟಾನ್ಕೊವಿಕ್‌ ಅವರಿಗೆ ಡೈವೋರ್ಸ್ ನೀಡಲಿದ್ದಾರೆ ಎನ್ನಲಾಗಿದೆ. ಈ ಜೋಡಿಯ ವೈಯುಕ್ತಿಕ ಜೀವನಕ್ಕೆ ಸಂಬಂಧಪಟ್ಟ ಮೀಮ್ಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Viral News: ಎಕ್ಸ್​​​ನಲ್ಲಿ ಸಖತ್​​ ಟ್ರೆಂಡ್ ಆಗುತ್ತಿದೆ ಹಾರ್ದಿಕ್ ಪಾಂಡ್ಯ ಡೈವೋರ್ಸ್ ಸುದ್ದಿಯ ಮೀಮ್ಸ್, ಇಲ್ಲಿದೆ ನೋಡಿ
Edited By:

Updated on: May 25, 2024 | 5:11 PM

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯರವರಿಗೆ ವೈಯುಕ್ತಿಕ ಜೀವನದಲ್ಲಿಯೂ ಸಂಕಷ್ಟವೊಂದು ಎದುರಾಗಿದೆ. ಹಾರ್ದಿಕ್ ಅವರು ತಮ್ಮ ಗೆಳತಿ ಸರ್ಬಿಯಾದ ನಟಿ ನತಾಶಾ ಸ್ಟಾನ್ಕೊವಿಕ್ ಅವರನ್ನು ನಾಲ್ಕು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇದೀಗ ಈ ಸೆಲೆಬ್ರಿಟಿ ಜೋಡಿ ಪ್ರತ್ಯೇಕವಾಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇತ್ತೀಚೆಗಷ್ಟೇ ಸರ್ಬಿಯಾ ಮೂಲದ ಮಾಡೆಲ್-ನಟಿ ನತಾಶಾ ಸ್ಟಾಂಕೋವಿಕ್ ಇನ್ಸ್’ಟಾಗ್ರಾಂ ಪ್ರೊಫೈಲ್’ನಲ್ಲಿರುವ ತಮ್ಮ ಹೆಸರಿನಿಂದ ಪಾಂಡ್ಯ ಸರ್’ನೇಮನ್ನು ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲದೇ ಪಾಂಡ್ಯ ಜೊತೆಗಿರುವ ಕೆಲ ಫೋಟೋಗಳನ್ನೂ ತಮ್ಮ ಇನ್ಸ್’ಟಾಗ್ರಾಂ ಅಕೌಂಟ್’ನಿಂದ ತೆಗೆದು ಹಾಕಿರುವುದು ಪಾಂಡ್ಯ ಮತ್ತು ನತಾಶಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಮಗನ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದ ಹಾರ್ದಿಕ್- ನತಾಶಾ ನಡುವೆ ಪ್ರೀತಿ ಹುಟ್ಟಿದ್ದೇಗೆ ಗೊತ್ತಾ?

 

ಸದ್ಯಕ್ಕೆ ವಿಚ್ಛೇಧನದ ಭಾಗವಾಗಿ ಪಾಂಡ್ಯರವರು ನತಾಶಾಗೆ ತಮ್ಮ ಆಸ್ತಿಯ ಶೇ 70ರಷ್ಟು ಜೀವನಾಂಶವನ್ನು ವರ್ಗಾಯಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಹಾರ್ದಿಕ್ ಪಾಂಡ್ಯರವರ ಡೈವೋರ್ಸ್ ಗೆ ಸಂಬಂಧಪಟ್ಟಂತೆ ಮೀಮ್ಸ್ ಗಳು ಸೋಶಿಯಲ್ ಮೀಡಿಯಾದ ನಾನಾ ಪೇಜ್ ಗಳಲ್ಲಿ ಹರಿದಾಡುತ್ತಿವೆ. ಆದರೆ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದರೂ ಕ್ರಿಕೆಟಿಗ ಹಾರ್ದಿಕ್ ಮತ್ತು ನತಾಶಾ ಅವರು ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ..

ಇದನ್ನೂ ಓದಿ: ಮಗನ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದ ಹಾರ್ದಿಕ್- ನತಾಶಾ ನಡುವೆ ಪ್ರೀತಿ ಹುಟ್ಟಿದ್ದೇಗೆ ಗೊತ್ತಾ?

ಕಳೆದ 2020ರ ಮೇನಲ್ಲಿ ಹಾರ್ದಿಕ್ ಮತ್ತು ನತಾಶಾ ಅವರು ತಮ್ಮ ಮನೆಯಲ್ಲೇ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ ಅಂದರೆ 2023ರಲ್ಲಿ ಈ ದಂಪತಿ ಉದಯಪುರದಲ್ಲಿ ಹಿಂದೂ ಹಾಗೂ ಕ್ರೈಸ್ತ ಧರ್ಮದ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆಯಾದರು. ಈ ಜೋಡಿಗೆ ಅಗಸ್ತ್ಯ ಪಾಂಡ್ಯ ಎಂಬ ಪುತ್ರನಿದ್ದಾನೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ