Teacher and Student : ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ, ಆಸಕ್ತಿ ಮತ್ತು ಶಕ್ತಿಯನ್ನು ಗುರುತಿಸುವ ವಿಶೇಷ ಸಾಮರ್ಥ್ಯ ಶಿಕ್ಷಕರಲ್ಲಿರುತ್ತದೆ. ಅವರ ಸಲಹೆ, ಮಾರ್ಗದರ್ಶನದಿಂದ ಅನೇಕ ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸುತ್ತಾರೆ. ಆದರೆ ಎಲ್ಲರೂ ತಮ್ಮ ಶಿಕ್ಷಕರನ್ನು ನೆನಪಿನಲ್ಲಿಟ್ಟಕೊಂಡಿರುತ್ತಾರೆಯೇ? ಹಾಗೆಯೇ ಶಿಕ್ಷಕರೂ? ಕೆಲವರು ಮಾತ್ರ ಪರಸ್ಪರ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಆದರೆ ಕಾಲನ ಓಟದಲ್ಲಿ ಪರಸ್ಪರರು ಸಂಧಿಸುವುದು ಮಾತ್ರ ಕಷ್ಟಸಾಧ್ಯವಾಗಿರುತ್ತದೆ. ಇದೀಗ ವೈರಲ್ ಆಗಿರುವ ಈ ಟ್ವೀಟ್ ಗಮನಿಸಿ. 20 ವರ್ಷಗಳ ನಂತರ ವಿದ್ಯಾರ್ಥಿಯೊಬ್ಬರು ತಮ್ಮ ಶಿಕ್ಷಕರಿಗೆ ಧನ್ಯವಾದ ತಿಳಿಸಲು ಅವರನ್ನು ಹೇಗೆ ಪತ್ತೆ ಹಚ್ಚಿದ್ದಾರೆ ಎನ್ನುವ ಪುಟ್ಟ ಕಥೆಯೊಂದು ಇಲ್ಲಿದೆ.
Today I was tracked down by an ex-pupil and received this message. The moment I read this, I burst with pride and emotion. This is what we do it for, fellow teachers. ? ??? pic.twitter.com/EVnBMxJVfS
ಇದನ್ನೂ ಓದಿ— Mark Dent (@Mr_M_Dent) June 6, 2023
ಶಿಕ್ಷಕ ಮಾರ್ಕ್ ಡೆಂಟ್ ವಿದ್ಯಾರ್ಥಿಯು ಕಳಿಸಿದ ಸಂದೇಶವನ್ನು ಟ್ವೀಟ್ ಮಾಡಿ, ಇಂದು ನನ್ನ ಹಳೆಯ ವಿದ್ಯಾರ್ಥಿಯೊಬ್ಬರಿಂದ ಈ ಸಂದೇಶವನ್ನು ಪಡೆದೆ. ಇದನ್ನು ಓದಿದ ತಕ್ಷಣ ನಾನು ಅತ್ಯಂತ ಭಾವುಕನಾದೆ ಮತ್ತು ಆತನ ಬಗ್ಗೆ ಹೆಮ್ಮೆಪಟ್ಟೆ ಎಂದಿದ್ದಾರೆ; ”ಸುಮಾರು 20 ವರ್ಷಗಳ ಹಿಂದೆ ಪೋಷಕರ ಸಭೆ ನಡೆದಿದ್ದ ಸಂದರ್ಭದಲ್ಲಿ, ”ನೀನು ವಿಜ್ಞಾನದಲ್ಲಿ ಏನಾದರೂ ಸಾಧಿಸಬೇಕು ಎಂದು ಹೇಳಿದ್ದಿರಿ. ಹೌದು ನನಗೆ ವಿಜ್ಞಾನವೆಂದರೆ ಅತೀಪ್ರೀತಿ. ಆ ಪ್ರಕಾರ ನಾನು ಮೆರೀನ್ ಬಯಾಲಜಿಯಲ್ಲಿ ಪದವಿ ಪಡೆದೆ. ಇದೀಗ ಮೈಕ್ರೊಬಯಾಲಜಿಸ್ಟ್ ತಂತ್ರಜ್ಞನಾಗಿ ಕೆಲಸ ಮಾಡಲು ಒಂದು ಕಂಪೆನಿಯಿಂದ ಆಹ್ವಾನ ಬಂದಿದೆ. ವಿಜ್ಞಾನದ ಬಗ್ಗೆ ನನ್ನಲ್ಲಿರುವ ಅತ್ಯಾಸಕ್ತಿಯನ್ನು ಅಂದು ಗುರುತಿಸಿದ ಮೊದಲ ವ್ಯಕ್ತಿ ನೀವೇ. ಹಾಗಾಗಿ ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ.”
ಇದನ್ನೂ ಓದಿ : Viral Video: ಮೆಕ್ಡೊನಾಲ್ಡ್ಸ್; ಡೇಟಿಂಗ್, ಪ್ರೇಮದ ಬೆಲೆ ಇಲ್ಲಿ ರೂ. 179?; ನೆಟ್ಟಿಗರ ಆಕ್ರೋಶ
ಇದನ್ನು ಜೂನ್ 6ರಂದು ಟ್ವೀಟ್ ಮಾಡಲಾಗಿದ್ದು ಇನ್ನೇನು ಇದನ್ನು ವೀಕ್ಷಿಸಿದವರ ಗಟಿ 10 ಲಕ್ಷ ತಲುಪಲಿದೆ. ಅನೇಕರು ಇದಕ್ಕೆ ಪ್ರತಿಕ್ರಿಯಿಸಿ ತಮ್ಮ ಶಿಕ್ಷಕರುಗಳನ್ನು ಮತ್ತು ಅನುಭವಗಳನ್ನು ಮೆಲುಕು ಹಾಕಿದ್ದಾರೆ. ಇದು ಅದ್ಭುತವಾದ ಟ್ವೀಟ್. ನನ್ನ ಇಂಗ್ಲಿಷ್ ಶಿಕ್ಷಕಿ ನನಗೆ ಮಾಡಿದ ಸಹಾಯವನ್ನು ನಾನು ಯಾವಾಗಲೂ ಸ್ಮರಿಸುತ್ತೇನೆ. ಆದರೆ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದರೆ ನಿಮ್ಮ ವಿದ್ಯಾರ್ಥಿ ನಿಮ್ಮನ್ನು ಪತ್ತೆ ಹಚ್ಚಿದುದರ ಬಗ್ಗೆ ಬಹಳ ಸಂತೋಷವಾಗಿದೆ ಎಂದು ಒಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral: ಬಾಸ್, ನಾನು ಗರ್ಭಿಣಿ; ಈ ವಾಟ್ಸಪ್ ಚಾಟ್ ಮಿಲಿಯನ್ಗಟ್ಟಲೆ ಜನರನ್ನು ಸೆಳೆದಿದ್ದೇಕೆ?
ನನ್ನ ಹದಿಹರೆಯದ ವಯಸ್ಸಿನಲ್ಲಿ ಗಣಿತ ಶಿಕ್ಷಕರು ನನ್ನನ್ನು ತಾಳ್ಮೆಯಿಂದ ತಿದ್ದಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಬೇಕೆನ್ನಿಸಿತು. ಅಂತೂ ಕಳೆದ ವರ್ಷ ಅವರನ್ನು ಹುಡುಕಿದೆ. ನಾವು ಪರಸ್ಪರರ ಮೇಲೆ ನಂಬಿಕೆ ಇಟ್ಟಿಲ್ಲವಾದಲ್ಲಿ ಇಂದು ನಾನು ಗಣಿತ ಶಿಕ್ಷಕನಾಗುತ್ತಿರಲಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ನಾನು 30 ವರ್ಷಗಳ ಹಿಂದೆಯೇ ಮೈಕ್ರೋಬಯಾಲಜಿಯನ್ನು ಬಹಳ ಆಸ್ಥೆಯಿಂದ ಮಾಡಿದೆ. ಏಕೆಂದರೆ ಆಗಲೇ ನನಗೆ ನನ್ನ ಶಿಕ್ಷಕರು, ಜೈವಿಕ ತಂತ್ರಜ್ಞಾನದ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಹೇಳಿದ್ದರು ಎಂದು ಮತ್ತೊಬ್ಬರು ತಮ್ಮ ಶಿಕ್ಷಕರನ್ನು ನೆನಪಿಸಿಕೊಂಡಿದ್ದಾರೆ.
ನಿಮ್ಮ ಶಿಕ್ಷಕರುಗಳು ನಿಮಗೂ ಈಗ ಮನಃಪಟಲದಲ್ಲಿ ಸುಳಿದಾಡುತ್ತಿದ್ದಾರೆಯೇ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ