Viral Video: ಈ ಶ್ವಾನದಿಂದ ಕಲಿಯಬೇಕು ಸಂಸ್ಕಾರ, ಮಕ್ಕಳ ಜೊತೆಗೆ ನಾಯಿ ಮಾಡಿದ್ದೇನು ನೋಡಿ

ಮನುಷ್ಯರಾಗಲಿ ಅಥವಾ ಪ್ರಾಣಿಗಳೇ ಆಗಲಿ ಮನೆಯಲ್ಲಿ ಹೇಳಿಕೊಟ್ಟ ಸಂಸ್ಕಾರದ ರೀತಿಯಲ್ಲಿ ಅವರು ಬೆಳೆಯುತ್ತಾರೆ. ಚಿಕ್ಕಂದಿನಿಂದಲೇ ಒಳ್ಳೆಯ ಬುದ್ಧಿ ಮಾತು ಹೇಳಿಕೊಟ್ಟರೆ ಅದನ್ನೇ ಅವರು ಕಲಿತು ಸಂಸ್ಕಾರವಂತರಾಗುತ್ತಾರೆ.

Viral Video: ಈ ಶ್ವಾನದಿಂದ ಕಲಿಯಬೇಕು ಸಂಸ್ಕಾರ, ಮಕ್ಕಳ ಜೊತೆಗೆ ನಾಯಿ ಮಾಡಿದ್ದೇನು ನೋಡಿ
ವೈರಲ್ ವಿಡಿಯೊ
Edited By:

Updated on: Mar 21, 2023 | 3:07 PM

ಮುಖ್ಯಾಂಶಗಳು

  • ಮಕ್ಕಳ ಜೊತೆ ಸಾಲಗಿ ಊಟಕ್ಕೆ ಕುಳಿತಿದ್ದ ನಾಯಿಯೊಂದು ಭೋಜನ ಮಂತ್ರದ ಬಳಿಕವೇ ಮಕ್ಕಳ ಜೊತೆ ಊಟ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್.
  • ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ ಐದು ಪುಟಾಣಿ ಮಕ್ಕಳು ಊಟಕ್ಕೆ ಕುಳಿತಿರುತ್ತಾರೆ. ಅವರ ಮಧ್ಯದಲ್ಲಿ ಒಂದು ನಾಯಿಯು ಕೂಡಾ ಊಟಕ್ಕೆ ಕುಳಿತಿರುತ್ತದೆ.
  • ಎಲ್ಲರಿಗೂ ಬಟ್ಟಲಲ್ಲಿ ಊಟ ಹಾಕಿದ್ದರು. ಮಕ್ಕಳ ತಾಯಿ ಊಟಕ್ಕೆ ಮುಂಚೆ ಭೋಜನ ಮಂತ್ರವನ್ನು ಜಪಿಸಿದ ಬಳಿಕವಷ್ಟೆ ಮಕ್ಕಳು ಊಟ ಮಾಡುತ್ತಾರೆ.

ಮಕ್ಕಳ ಜೊತೆ ಸಾಲಗಿ ಊಟಕ್ಕೆ ಕುಳಿತಿದ್ದ ನಾಯಿಯೊಂದು ಭೋಜನ ಮಂತ್ರದ ಬಳಿಕವೇ ಮಕ್ಕಳ ಜೊತೆ ಊಟ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನುಷ್ಯರಾಗಲಿ ಅಥವಾ ಪ್ರಾಣಿಗಳೇ ಆಗಲಿ ಮನೆಯಲ್ಲಿ ಹೇಳಿಕೊಟ್ಟ ಸಂಸ್ಕಾರದ ರೀತಿಯಲ್ಲಿ ಅವರು ಬೆಳೆಯುತ್ತಾರೆ. ಚಿಕ್ಕಂದಿನಿಂದಲೇ ಒಳ್ಳೆಯ ಬುದ್ಧಿ ಮಾತು ಹೇಳಿಕೊಟ್ಟರೆ ಅದನ್ನೇ ಅವರು ಕಲಿತು ಸಂಸ್ಕಾರವಂತರಾಗುತ್ತಾರೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಮಾತಿದೆ ಅದೇ ರೀತಿ ಸಣ್ಣ ವಯಸ್ಸಿನಲ್ಲಿ ಒಳ್ಳೆಯ ಸಂಸ್ಕಾರ ಕಲಿಸಿದರೆ ಬೆಳೆದು ದೊಡ್ಡವರಾದಮೇಲು ಅದೇ ಸಂಸ್ಕಾರವನ್ನು ಮುಂದುವರೆಸುತ್ತಾರೆ. ಮನೆಯಲ್ಲಿ ಸಾಕುವ ಸಾಕು ಪ್ರಾಣಿಗಳು ಕೂಡಾ ನಾವು ಕಲಿಸಿಕೊಟ್ಟ ರೀತಿಯಲ್ಲೇ ಬೆಳೆಯುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ ಐದು ಪುಟಾಣಿ ಮಕ್ಕಳು ಊಟಕ್ಕೆ ಕುಳಿತಿರುತ್ತಾರೆ. ಅವರ ಮಧ್ಯದಲ್ಲಿ ಒಂದು ನಾಯಿಯು ಕೂಡಾ ಊಟಕ್ಕೆ ಕುಳಿತಿರುತ್ತದೆ. ಎಲ್ಲರಿಗೂ ಬಟ್ಟಲಲ್ಲಿ ಊಟ ಹಾಕಿದ್ದರು. ಮಕ್ಕಳ ತಾಯಿ ಊಟಕ್ಕೆ ಮುಂಚೆ ಭೋಜನ ಮಂತ್ರವನ್ನು ಜಪಿಸಿದ ಬಳಿಕವಷ್ಟೆ ಮಕ್ಕಳು ಊಟ ಮಾಡುತ್ತಾರೆ. ಇದರಲ್ಲಿ ವಿಶೇಷವೇನೆಂದರೆ ನಾಯಿ ಕೂಡಾ ಪ್ರಾರ್ಥನೆ ಮುಗಿಸಿದ ಬಳಿಕವೇ ತಾನು ಊಟ ಮಾಡುತ್ತದೆ. ಮನುಷ್ಯರೇ ಭೋಜನ ಮಂತ್ರವನ್ನು ಜಪಿಸಿದೆ ಊಟ ಮಾಡುವ ಈ ಕಾಲದಲ್ಲಿ ನಾಯಿಯ ಈ ಸಂಸ್ಕಾರವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.

ಇದನ್ನೂ ಓದಿ: Viral Video : ಮೇಕ್​​ಅಪ್​​​​ ಮಾಡುವಾಗ ಕೆನ್ನೆ ಬ್ಲಶ್‌ ಮಾಡಲು ಕಷ್ಟ ಪಡುತ್ತೀರಾ?

ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ಮುದ್ದಾದ ವೀಡಿಯೋ 445 ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ 52.7 ಸಾವಿರ ಲೈಕ್ಸ್ ಮತ್ತು 206 ಕಮೆಂಟ್ಸ್​ಗಳನ್ನು ಪಡೆದುಕೊಂಡಿದೆ. ಈ ವೀಡಿಯೋಗೆ ಒಬ್ಬ ಬಳಕೆದಾರರು ಇದು ಭಾರತದ ಸಂಸ್ಕಾರ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಮುದ್ದಾದ ವೀಡಿಯೋ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕರು ನಾಯಿಗೆ ಕಲಿಸಿರುವ ಸಂಸ್ಕಾರರಕ್ಕೆ ಹೊಗಲಿಕೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

TV9 Web

TV9 Kannada

Read More
Loading...
Unable to load recommendations.
Follow Us